Sandalwood Leading OnlineMedia

ಟೆಕ್ಕಿಗಳ ಕತೆ ಹೇಳುವ: ‘ಎಲೆಕ್ಟಾನಿಕ್ ಸಿಟಿ’

ಬೆಂಗಳೂರು ವಿಶ್ವದ ಐಟಿಹಬ್ ಹಬ್ಬಿರುವ ನಗರಿ. ಭಾರತದ ಸಿಲಿಕಾನ್ ಸಿಟಿ ಎಂದೇ ವಿಶ್ವಾದ್ಯಂತ ಗುರುತಿಸಿಕೊಳ್ಳುತ್ತದೆ. ಇಲ್ಲಿರುವ ‘ಎಲೆಕ್ಟಾçನಿಕ್ ಸಿಟಿ’ ನಿರ್ಮಾಣವಾಗಿದ್ದೆ ತಾಂತ್ರಿಕವರ್ಗದವರಿಗಾಗಿ. ಇಲ್ಲಿ ಹೆಸರಾಂತ ಐಟಿ ಕಂಪೆನಿಗಳಿವೆ. ಅಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಅಪಾರ್ಟ್ಮೆಂಟ್‌ಗಳಿವೆ. ಹೈಫೈ ಜೀವನ ಶೈಲಿಯ ಮಾಯೆ ಇದೆ. ಹಗಲು-ರಾತ್ರಿ ಎನ್ನದೆ ನಿರಂತರವಾಗಿ ದುಡಿಯುವ ಟೆಕ್ಕಿಗಳ ಬದುಕು ಅವರ್ಣನೀಯ. ಅವರ ನೋವು-ತಳಮಳಗಳನ್ನು ಒಂದು ಸಿನಿಮಾದಲ್ಲಿ ಕಟ್ಟಿಕೊಡುವುದು ಸುಲಭವಲ್ಲ. ಹಾಗಿದ್ದರೂ, ನಿರ್ದೇಶಕ ಚಿಕ್ಕಣ್ಣ ‘ಎಲೆಕ್ಟಾçನಿಕ್ ಸಿಟಿ’ ಚಿತ್ರದ ಮೂಲಕ ಐಟಿ ಕಂಪೆನಿ ಉದ್ಯೋಗಿಗಳ ಬದುಕನ್ನು ತೆರೆಮೇಲೆ ತೋರಿಸುವ ಗಂಭೀರ ಪ್ರಯತ್ನ ಮಾಡಿದ್ದಾರೆ. ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಚಿತ್ರÀಕ್ಕೆ ಹಲವು ರಾಷ್ಟಿçÃಯ ಮತ್ತು ಅಂತರರಾಷ್ಟಿçÃಯ ಚಿತ್ರೋತ್ಸವಗಳಲ್ಲಿ ಪ್ರದರ್ಶಿತವಾಗಿ ೩೦ಕ್ಕೂ ಹೆಚ್ಚು ಪ್ರಶಸ್ತಿ ಗಳಿಸಿರುವುದೇ ಸಾಕ್ಷಿ.


ನಿರ್ದೇಶಕ ಚಿಕ್ಕಣ್ಣ ಮೂಲತಃ ಸಾಫ್ಟ್ವೇರ್ ಇಂಜಿನಿಯರ್. ಬೆಂಗಳೂರಿನ ಬಾಪೂಜಿ ನಗರದ ನಿವಾಸಿ. ಟೆಕ್ಕಿಗಳ ಬದುಕು ಏನೂ ಅನ್ನೋದನ್ನ ಸ್ವಾನುಭವದಿಂದ ಅರಿತವರು. ೧೯೩೬ರ ಫೆಬ್ರವರಿ.೨೧ ರಂದು ಬಿಡುಗಡೆಯಾದ ಚಾರ್ಲಿ ಚಾಪ್ಲಿನ್ ‘ಮಾರ‍್ನ್ ಟೈಮ್ಸ್’ ಚಿತ್ರ ಸಹ ಇಂದಿನ ಟೆಕ್ಕಿಗಳ ಬವಣೆಯನ್ನೇ ಸೂಚಿಸುತ್ತೆ. ಮನುಷ್ಯ ಕಾರ್ಖಾನೆ ಯಂತ್ರದAತಾದರೆ ಅವನ ಜೀವ ಮತ್ತು ಜೀವನ ಹೇಗಿರುತ್ತೆ ಅನ್ನೋದನ್ನ ಮತ್ತು ಕೈಗಾರಿಕೀಕರಣದ ದುಷ್ಪರಿಣಾಮವನ್ನು ಅರ್ಥಗರ್ಭಿತವಾಗಿ, ಅಷ್ಟೇ ಹಾಸ್ಯಮಯವಾಗಿ ಚಾರ್ಲಿ ಚಾಪ್ಲಿನ್ ತೋರಿಸಿದ್ದರು. ಅಂಥದ್ದೇ ಒಂದು ಪ್ರಯತ್ನವನ್ನ ನಿರ್ದೇಶಕ ಚಿಕ್ಕಣ್ಣ ಮಾಡಿ ಯಶಸ್ವಿಯಾಗಿದ್ದಾರೆ. ಚಾರ್ಲಿ ಚಾಪ್ಲಿನ್ ‘ಮಾರ‍್ನ್ ಟೈಮ್ಸ್’ ಚಿತ್ರದಲ್ಲಿ ಕಳೆದ ಶತಮಾನದ ಎಲೆಕ್ಟಿçಕ್ ಯಂತ್ರಗಳ ಮಧ್ಯೆ ತೊಳಲಾಡುವ ಮನುಷ್ಯನ ಅಸಹಾಯಕತೆ ತೋರಿಸಿದ್ದರು. ಚಿಕ್ಕಣ್ಣ ಅವರು ‘ಎಲೆಕ್ಟಾçನಿಕ್ ಸಿಟಿ’ ಚಿತ್ರದಲ್ಲಿ ಈ ಶತಮಾನದ ಎಲೆಕ್ಟಾçನಿಕ್ ಯಂತ್ರಗಳ ಮಧ್ಯೆ ಹೆಣಗಾಡುವ ಟೆಕ್ಕಿಗಳ ಅಸಹನೆಯ ಬದುಕನ್ನು ಚಿತ್ರಿಸಿದ್ದಾರೆ.

ಎಲೆಕ್ಟಿçಕ್ ಯಂತ್ರಗಳ ಮಧ್ಯೆ ಕೆಲಸ ಮಾಡುವ ಮನುಷ್ಯರಿಗೆ ಮಾನಸಿಕ ರೋಗ, ಕೀಲು ನೋವು, ಕಾರ್ಖಾನೆಗಳ ಹೊಗೆಯಿಂದ ಶ್ವಾಸಕೋಶದ ಸಮಸ್ಯೆ ಮತ್ತಿತರ ಆರೋಗ್ಯ ಸಮಸ್ಯೆಗಳನ್ನು ಚಾರ್ಲಿ ಚಾಪ್ಲಿನ್ ‘ಮಾರ‍್ನ್ ಟೈಮ್ಸ್’ನಲ್ಲಿ ತೋರಿಸಿದ್ದರು. ಅದರಂತೆ ಈಗಿನ ಮಾರ‍್ನ್ ಯುಗದಲ್ಲಿ ಚಿಕ್ಕಣ್ಣ ಅವರು ಎಲೆಕ್ಟಾçನಿಕ್ ಯಂತ್ರಗಳ ಮಧ್ಯೆ ಕೆಲಸ ಮಾಡುವ ಟೆಕ್ಕಿಗಳ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳ ಜೊತೆಯಲ್ಲೇ ಸಾಂಸಾರಿಕ ಬದುಕಿನ ಚರ್ವಿಚರ್ವಣವನ್ನು ‘ಎಲೆಕ್ಟಾçನಿಕ್ ಸಿಟಿ’ ಚಿತ್ರದಲ್ಲಿ ತೋರಿಸಿದ್ದಾರೆ. ತಾಂತ್ರಿಕತೆ ಬೆಳೆದಂತೆ, ಮನುಷ್ಯ ಯಾಂತ್ರಿಕವಾಗುತ್ತಾನೆ. ಅವನಲ್ಲಿ ಮಾನವ ಸಹಜ ಭಾವಗಳು ಯಂತ್ರದAತೆಯೇ ವರ್ತಿಸುತ್ತವೆ. ಹೀಗಾದರೆ, ಮನುಷ್ಯನ ಖಾಸಗಿ ವೈಯಕ್ತಿಕ ಸಮಸ್ಯೆಗಳು ಬಿಗಡಾಯಿಸುತ್ತವೆ. ಇದೇ ಕಥಾ ಹಂದರವಿಡಿದು ನಿರ್ದೇಶಕ ಚಿಕ್ಕಣ್ಣ ಕಳೆದ ೬ ವರ್ಷದಿಂದ ರಿಸರ್ಚ್ ಮಾಡಿ, ‘ಬಜರಂಗಿ ಪ್ರೊಡಕ್ಷನ್’ನಲ್ಲಿ ‘ಎಲೆಕ್ಟಾçನಿಕ್ ಸಿಟಿ’ ಎಂಬ ಚಿತ್ರ ಮಾಡಿದ್ದಾರೆ.

ಐಟಿ ಉದ್ಯೋಗಿಗಳಾಗಿ ಕೆಲಸ ಮಾಡುವ ಬಹುತೇಕ ಯುವಕ-ಯುವತಿಯರು ಸದಾ ಒತ್ತಡದಲ್ಲಿ ಕೆಲಸ ಮಾಡುತ್ತಾರೆ. ಇದರಿಂದ ಅವರ ಮೇಲೆ ದೈಹಿಕ ಮತ್ತು ಮಾನಸಿಕ ಒತ್ತಡಗಳು ಹೇಗಿರುತ್ತವೆ? ಅವರ ವರ್ಕ್ ಲೈಫ್ ಹೇಗಿರುತ್ತೆ? ಎನ್ನುವ ಅಂಶವನ್ನೇ ಇಟ್ಟುಕೊಂಡು ತ್ರಿಕೋನ ಪ್ರೇಮಕತೆ ಎಣೆದಿದ್ದಾರೆ ನಿರ್ದೇಶಕ ಚಿಕ್ಕಣ್ಣ ರಾಮಕೃಷ್ಣಯ್ಯ. ನವಂಬರ್.೨೪ರAದು ರಾಜ್ಯಾದ್ಯಂತ ತೆರೆಕಾಣುತ್ತಿರುವ ‘ಎಲೆಕ್ಟಾçನಿಕ್ ಸಿಟಿ’ ಚಿತ್ರದ ತಾರಾಗಣದಲ್ಲಿ ಆರ್ಯನ್ ಹರ್ಷ ನಾಯಕನಾಗಿ ನಟಿಸಿದ್ದು, ದಿಯಾ ಆಶ್ಲೇಶ ಹಾಗೂ ರಕ್ಷಿತಾ ಕೆರೆಮನೆ ನಾಯಕಿಯರಾಗಿ ನಟಿಸಿದ್ದಾರೆ. ಇವರೊಂದಿಗೆ ರಶ್ಮಿ, ಭವ್ಯ, ಹಂಪಿವರ್ಷ, ಚರಣ್ ಮತ್ತಿತರು ಅಭಿನಯಿಸಿದ್ದಾರೆ. ಜಯಶ್ರೀ ತಾಯಿ ಪಾತ್ರ ಮಾಡಿದ್ದಾರೆ. ವಿನು ಮನಸು ಸಂಗೀತ ಮತ್ತು ರಾಜಾ ಶಿವಶಂಕರ್ ಛಾಯಾಗ್ರಹಣವಿದೆ. ಚಂದ್ರಶೇಖರ್ ಶ್ರೀವಾಸ್ತವ್ ಈ ಚಿತ್ರದ ಹಾಡುಗಳನ್ನು ಬರೆದಿದ್ದು, ಸೌಂದರ್ ರಾಜ್ ಸಂಕಲನ ಹಾಗೂ ಹಂಪಿ ಸುಂದರ್ ಕಲಾ ನಿರ್ದೇಶನ ಮಾಡಿದ್ದಾರೆ. ಗಾಯಕರಾದ ಗಿರೀಶ್ ರಾಮಾಂಜನೇಯ ಮತ್ತು ಅನುರಾಧಭಟ್ ಹಾಡಿದ್ದಾರೆ. ‘ಎಲೆಕ್ಟಾçನಿಕ್ ಸಿಟಿ’ ಚಿತ್ರ ಬಿಡುಗಡೆಗೂ ಮುನ್ನವೇ ವಿವಿಧ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ೩೦ ಪ್ರಶಸ್ತಿಗಳನ್ನು ಗೆದ್ದುಕೊಂಡಿರುವುದ ಚಿತ್ರದ ಹಿರಿಮೆಯನ್ನು ಹೆಚ್ಚಿಸಿದೆ.

Share this post:

Related Posts

To Subscribe to our News Letter.

Translate »