Sandalwood Leading OnlineMedia

ಪ್ರಚಾರ ಅಖಾಡದಲ್ಲಿ ‘ಡಬಲ್ ಇಸ್ಮಾರ್ಟ್’.. ಮೊದಲ ಹಾಡು ರಿಲೀಸ್..ಭರ್ಜರಿ ಸ್ಟೆಪ್ ಹಾಕಿದ ರಾಮ್ ಪೋತಿನೇನಿ

ಉಸ್ತಾದ್ ರಾಮ್ ಪೋತಿನೇನಿ ಮತ್ತು ಡ್ಯಾಶಿಂಗ್ ಡೈರೆಕ್ಟರ್ ಪೂರಿ ಜಗನ್ನಾಥ್ ಜೋಡಿಯ ಬಹುನಿರೀಕ್ಷಿತ ಸಿನಿಮಾ ಡಬಲ್ ಇಸ್ಮಾರ್ಟ್. ಪುರಿ ಕನೆಕ್ಟ್ಸ್ ಬ್ಯಾನರ್‌ನಲ್ಲಿ ಪೂರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ನಿರ್ಮಿಸುತ್ತಿರುವ ಈ ಚಿತ್ರ ಆಗಸ್ಟ್ 15 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಸದ್ಯ ಡಬಲ್ ಇಸ್ಮಾರ್ಟ್ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಇತ್ತ ಪ್ರಚಾರ ಕೆಲಸ ಕೂಡ ಆರಂಭವಾಗಿದೆ. ಡಬಲ್ ಇಸ್ಮಾರ್ಟ್ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ಸ್ಟೆಪ್ಪಾ ಮಾರ್‌ ಎಂಬ ಹಾಡಿಗೆ ಭಾಸ್ಕರ ಭಟ್ಲರ ಸಾಹಿತ್ಯ ಬರೆದಿದ್ದು , ಅನುರಾಗ್ ಕುಲಕರ್ಣಿ ಹಾಗೂ ಸಾಹಿತಿ ಚಂಗಂತಿ ಧ್ವನಿಯಾಗಿದ್ದಾರೆ.‌ ಮಣಿ ಶರ್ಮಾ ಟ್ಯೂನ್ ಹಾಕಿದ್ದಾರೆ. ಅದ್ಧೂರಿ ಸೆಟ್ ನಲ್ಲಿ ಜಾನಿ ಮಾಸ್ಟರ್ ಕೊರಿಯೋಗ್ರಫಿಗೆ ರಾಮ್ ಪೋತಿನೇನಿ ಜಬರ್ದಸ್ತ್ ಆಗಿ ಕುಣಿದು ಕುಪ್ಪಳಿಸಿದ್ದಾರೆ.

 

 

ಸೌತ್​ ಸಿನಿಮಾಗಳಲ್ಲಿ ಖಳನಾಗಿ ಅಬ್ಬರಿಸುತ್ತಿರುವ ಸಂಜಯ್ ದತ್ ಅವರು ‘ಡಬಲ್​ ಇಸ್ಮಾರ್ಟ್​’ ಚಿತ್ರದಲ್ಲೂ ವಿಲನ್​ ಆಗಿ ಅಭಿನಯಿಸಿದ್ದಾರೆ. ನಾಯಕಿಯಾಗಿ ಕಾವ್ಯಾ ಥಾಪರ್ ನಟಿಸಿದ್ದಾರೆ. ತೆಲುಗು ಮಾತ್ರವಲ್ಲದೇ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ‘ಡಬಲ್​ ಇಸ್ಮಾರ್ಟ್​’ ಸಿನಿಮಾ ಬಿಡುಗಡೆ ಆಗಲಿದೆ. ಮಣಿ ಶರ್ಮಾ ಅವರು ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಸ್ಯಾಮ್ ಕೆ ನಾಯ್ಡು ಮತ್ತು ಗಿಯಾನಿ ಗಿಯಾನ್ನೆಲಿ ಛಾಯಾಗ್ರಾಹಕರಾಗಿ ದುಡಿದಿದ್ದಾರೆ.

 

 `ಚಿತ್ತಾರ ಸ್ಟಾರ್ ಅವಾರ್ಡ್ಸ್’ ಕಾರ್ಯಕ್ರಮದಲ್ಲಿ ಸಂಭ್ರಮದಿ0ದ ಪಾಲ್ಗೊಂಡ ತರುಣ್​ ಸುಧೀರ್​ – ಸೋನಲ್ ಮೊಂಟೆರೋ / Exclusive Pictures

2019 ರಲ್ಲಿ ಇಸ್ಮಾರ್ಟ್ ಶಂಕರ್ ಸಿನಿಮಾ ರಿಲೀಸ್ ಆಗಿತ್ತು. ಇದರಲ್ಲಿ ಕನ್ನಡತಿ ನಭಾ ನಟೇಶ್ ಅಭಿನಯಿಸಿದ್ದರು. ಆಗ ಈ ಸಿನಿಮಾ ಕರ್ಮಷಿಯಲಿ ಸಕ್ಸಸ್ ಆಗಿತ್ತು. ಆದರೆ ಈ ಸಿನಿಮಾ ಬಂದು 5 ವರ್ಷದ ಬಳಿಕ ಪಾರ್ಟ್-2 ಡಬಲ್ ಇಸ್ಮಾರ್ಟ್ ಸಿನಿಮಾ ಬರ್ತಿದೆ. ಟಾಲಿವುಡ್‌ನಲ್ಲಿ ಈಗಲೇ ನಿರೀಕ್ಷೆಯನ್ನು ಕೂಡ ಹುಟ್ಟುಹಾಕಿದೆ ಅಂತ ಹೇಳಬಹುದು.

Share this post:

Related Posts

To Subscribe to our News Letter.

Translate »