ಸೆಲೆಬ್ರಿಟಿ ಸ್ಟಾರ್‌ಗಳ ಲೈಫ್ ಬಗ್ಗೆ ಅವರ ಅಭಿಮಾನಿಗಳಿಗೆ ಸಹಜವಾಗಿಯೇ ಒಂದಷ್ಟು ಕುತೂಹಲಗಳಿರುತ್ತದೆ. ತೆರೆಯ ಮುಂದೆ ಮಿಂಚುವ ತಮ್ಮ ನೆಚ್ಚಿನ ಸೆಲಬ್ರಿಟಿಗಳು ತೆರೆಯ ಹಿಂದೆ ಹೇಗಿರುತ್ತಾರೆ ಎಂಬ ಒಂದಷ್ಟು ಕುತೂಹಲಗಳು ಅಭಿಮಾನಿಗಳನ್ನು ಸದಾ ಕಾಡುತ್ತಲೇ ಇರುತ್ತವೆ. ಇನ್ನು ಸ್ಲಿಮ್ ಅಂಡ್ ಫಿಟ್ ಆಗಿರುವ ತಮ್ಮ ನೆಚ್ಚಿನ ಸ್ಟಾರ್‌ಗಳು ಏನು ತಿಂತಾರೆ, ಯಾವ ಅಡುಗೆ ಇಷ್ಟಪಡುತ್ತಾರೆ, ಅಡುಗೆ ಬಗ್ಗೆ ಅವರಿಗೆಷ್ಟು ಗೊತ್ತು, ಯಾವ ಫುಡ್ ಅವರಿಗೆ ಫೇವರೆಟ್ ಎಂಬ ಕುತೂಹಲವು ಅಭಿಮಾನಿಗಳಲ್ಲಿರುತ್ತದೆ. ಅಭಿಮಾನಿಗಳ ಈ ಕುತೂಹಲವನ್ನು ಕೊಂಚ ಮಟ್ಟಿಗೆ ತಣಿಸುವ ಅಂಕಣವೇ ‘ಚಿತ್ತಾರ ಸ್ಟಾರ್ ಕಿಚನ್’. ಈ ಬಾರಿಯ ‘ಚಿತ್ತಾರ ಸ್ಟಾರ್ ಕಿಚನ್’ನ ಸ್ಟಾರ್ ಸ್ಯಾಂಡಲ್‌ವುಡ್‌ನ ಚೆಲುವೆ ಚೈತ್ರಾ ಆಚಾರ್
ಅಮ್ಮನ ಕೈ ಅಡುಗೆ ಅಂದರೇ ಈಕೆಗೆ ಎಲ್ಲಿಲ್ಲದ ಪ್ರಾಣ ಅಮ್ಮ ಮಾಡುವ ಚಪಾತಿ ಟೊಮಟೋ ಗೊಜ್ಜು ಅಂದರೇ ಇವರಿಗೆ ಚಿಕ್ಕಂದಿನಿAದಲೂ ಪ್ರಾಣ. ಅಮ್ಮ ಮಾಡುವ ಪುಳಿಯೊಗರೆಯನ್ನು ಕದ್ದು ತಿನ್ನುವಷ್ಟು ಇಷ್ಟಪಡುತ್ತಾರೆ. ಅಮ್ಮನ ಕೈಯಿಂದ ಘಮ ಘಮಿಸುವ ವಾಂಗಿ ಬಾತ್ ಎಂದರೇ ಬಾಯಲ್ಲಿ ನೀರೂರುತ್ತಂತೆ. ಇಷ್ಟೆ ಅಲ್ಲದೆ ಚೈತ್ರಾಗೆ ಒಬ್ಬಟ್ಟು ಎಂದರೇ ಪಂಚ ಪ್ರಾಣ. ಹಾಗೆಯೆ ಮನೆಯಲ್ಲದೆ ಹೊರಗಡೆಯ ಊಟ ತಿಂಡಿಗಳನ್ನು ಇಷ್ಟಪಡುತ್ತಾರೆ. ಸೆಟ್‌ನಲ್ಲಿ ಬರುವ ಊಟಗಳನ್ನು ಇವರು ಇಷ್ಟಪಡುತ್ತಾರೆ. ಇವರು ವಾರದಲ್ಲಿ ಆರು ದಿನ ಕಂಪ್ಲೀಟ್ ಡಯಟ್‌ನಲ್ಲಿರುತ್ತಾರೆ. ಆ ಆರು ದಿನದಲ್ಲಿ ಎಲ್ಲೇ ತಿಂದರೂ ಏನೇ ತಿಂದರೂ ಕ್ಯಾಲೋರಿ ಲೆಕ್ಕ ಹಾಕಿ ತಿಂತಾರೆ ಮತ್ತು ಏನೇ ತಿಂದರೂ ಮಿತವಾಗಿ ತಿನ್ನುವುದನ್ನು ಇವರು ಚಿಕ್ಕಂದಿನಿAದಲೂ ಅಬ್ಯಾಸ ಮಾಡಿಕೊಂಡು ಬಂದಿದ್ದಾರೆ. ತರಕಾರಿ ಹಣ್ಣುಗಳನ್ನು ಮತ್ತು ಸೊಪ್ಪು ಕಾಳುಗಳನ್ನು ನಿಯಮಿತವಾಗಿ ತಿನ್ನುವುದನ್ನು ರೂಢಿ ಮಾಡಿಕೊಂಡು ಬಂದಿದ್ದಾರೆ. ಇವರು ಆಯಾ ಋತುಗಳಲ್ಲಿ ಸಿಗುವ ಹಣ್ಣುಗಳನ್ನು ತಪ್ಪದೆ ತಿನ್ನುತ್ತಾರೆ. ಮತ್ತು ಪ್ರತೀ ದಿನ ಯಾವುದಾದರು ಒಂದು ಹಣ್ಣನ್ನು ಮಿತವಾಗಿ ತಿನ್ನುತ್ತಾರೆ.
ನನಗೆ ಅನಿವಾರ್ಯವಾಗಿ ಮಾಡಿಕೊಳ್ಳುವ ಸಾಧಾರಣ ಅಡುಗೆಗಳಷ್ಟೆ ಬರುತ್ತದೆ. ಅನ್ನ ತಿಳಿಸಾರು, ಬಿಸಿಬೇಳೆಬಾತ್, ಟೊಮಟೊ ಗೊಜ್ಜು. ಚಪಾತಿ, ಈ ತರಹದ ಸಿಂಪಲ್ ಅಡುಗೆಗಳನ್ನು ಮಾಡಲು ಕಲಿತಿದ್ದೇನೆ. ಆರೋಗ್ಯಕ್ಕಾಗಿ ಎಲ್ಲವನ್ನು ತಿನ್ನಬೇಕು, ಆದರೇ ಏನೇ ತಿಂದರೂ ಅತಿಯಾಗಿ ತಿನ್ನಲು ಹೋಗಲ್ಲ, ಸೌತೆಕಾಯಿ, ಕ್ಯಾರೆಟ್, ಬೀಟ್‌ರೂಟ್, ಹೀಗೆ ಯಾವ ಯಾವ ತರಕಾರಿಗಳನ್ನು ಹಸಿಯಾಗಿರುವಾಗಲೇ ತಿನ್ನಬಹುದು ಅವೆಲ್ಲವನ್ನು ಮಿತವಾಗಿ ತಿನ್ನುತ್ತೇನೆ. ನಾನು ಒಮ್ಮೋಮ್ಮೆ ಅಡುಗೆ ಮಾಡುವುದು ಉಂಟು ನಾನು ಮಾಡಿದ ಅಡುಗೆಯನ್ನು ಮೊದಲು ನನ್ನ ತಮ್ಮನಿಗೆ ಕೊಟ್ಟು ನಂತರ ಬೇರೆಯವರಿಗೆ ಕೊಡುತ್ತೇನೆ. ನನ್ನ ತಮ್ಮ ಒಳ್ಳೆಯ ಕುಕ್ ಅವನು ಏನೇ ಮಾಡಿದರು ತುಂಬಾ ಚೆನ್ನಾಗಿ, ರುಚಿಕರವಾಗಿ ಮಾಡುತ್ತಾನೆ. ಹಾಗೆಯೇ ನಾನು ಮಾಡಿದ ಅಡುಗೆಯನ್ನು ಎಷ್ಟು ಚೆನ್ನಾಗಿದೆ ಅಥವಾ ಚೆನ್ನಾಗಿಲ್ಲ ಎಂದು ನೇರವಾಗಿ ಹೇಳುತ್ತಾನೆ. ಹಾಗಾಗಿ ನನಗೆ ಬೇರೆಯವರ ಮುಂದೆ ಅಡುಗೆ ವಿಷಯದಲ್ಲಿ ಬಚಾವ್ ಆಗಿದ್ದೇನೆ.
ಅನ್ನವನ್ನು ಎಲ್ಲೂ ವೇಸ್ಟ್ ಮಾಡದೆ ಎಲ್ಲೂ ಚೆಲ್ಲದೆ ಎಷ್ಟು ಬೇಕೋ ಅದಕ್ಕಿಂತ ಒಂದು ತುತ್ತು ಕಮ್ಮಿನೇ ಹಾಕಿಸಿಕೊಂಡು ತಿನ್ನೋದು ನನ್ನ ರೂಢಿ. ಅನ್ನವನ್ನು ಚೆಲ್ಲಬಾರದು, ಅನ್ನವೇ ದೇವರು ಎನ್ನುವುದು ನನ್ನ ಭಾವನೆ. ಯಾವುದೇ ಆಹಾರ ಪದಾರ್ಥವನ್ನು ವೇಸ್ಟ್ ಮಾಡದೆ ಎಷ್ಟು ಉಪಯೊಗಿಸಬೇಕು ಅಷ್ಟನ್ನೆ ಬಳಸಬೇಕು. ಹೀಗೆ ಬಳಸಿದರೆ ಎಷ್ಟೊ ಆಹಾರ ಕೊರತೆ ನೀಗುತ್ತದೆ. ನಾವು ತಿನ್ನದೆ ಎಲೆಯಲ್ಲಿ ಬಿಡುವ, ತಿನ್ನದೆ ಹೊರಗೆ ಚೆಲ್ಲುವ ಒಂದು ಅನ್ನದ ತುತ್ತು ಯಾವ ಹಸಿದ ಹೊಟ್ಟೆಯ ಪಾಲಿನದೋ ಅನ್ನುವುದು ನನ್ನ ವಿಚಾರ ಎನ್ನುತ್ತಾರೆ ಚೈತ್ರಾ ಆಚಾರ್.