VOTE NOW : https://awards.chittaranews.com/
ಸೆಲೆಬ್ರಿಟಿ ಸ್ಟಾರ್ಗಳ ಲೈಫ್ ಬಗ್ಗೆ ಅವರ ಅಭಿಮಾನಿಗಳಿಗೆ ಸಹಜವಾಗಿಯೇ ಒಂದಷ್ಟು ಕುತೂಹಲಗಳಿರುತ್ತದೆ. ತೆರೆಯ ಮುಂದೆ ಮಿಂಚುವ ತಮ್ಮ ನೆಚ್ಚಿನ ಸೆಲಬ್ರಿಟಿಗಳು ತೆರೆಯ ಹಿಂದೆ ಹೇಗಿರುತ್ತಾರೆ ಎಂಬ ಒಂದಷ್ಟು ಕುತೂಹಲಗಳು ಅಭಿಮಾನಿಗಳನ್ನು ಸದಾ ಕಾಡುತ್ತಲೇ ಇರುತ್ತವೆ. ಇನ್ನು ಸ್ಲಿಮ್ ಆ್ಯಂಡ್ ಫಿಟ್ ಆಗಿರುವ ತಮ್ಮ ನೆಚ್ಚಿನ ಸ್ಟಾರ್ಗಳು ಏನು ತಿಂತಾರೆ, ಯಾವ ಅಡುಗೆ ಇಷ್ಟಪಡುತ್ತಾರೆ, ಅಡುಗೆ ಬಗ್ಗೆ ಅವರಿಗೆಷ್ಟು ಗೊತ್ತು, ಯಾವ ಫುಡ್ ಅವರಿಗೆ ಫೇವರೆಟ್ ಎಂಬ ಕುತೂಹಲವು ಅಭಿಮಾನಿಗಳಲ್ಲಿರುತ್ತದೆ. ಅಭಿಮಾನಿಗಳ ಈ ಕುತೂಹಲವನ್ನು ಕೊಂಚ ಮಟ್ಟಿಗೆ ತಣಿಸುವ ಅಂಕಣವೇ `ಚಿತ್ತಾರ ಸ್ಟಾರ್ ಕಿಚನ್. ಈ ಬಾರಿಯ `ಚಿತ್ತಾರ ಸ್ಟಾರ್ ಕಿಚನ್’ನ ಸ್ಟಾರ್, `ಕ್ರಾಂತಿ’ ಚಿತ್ರದ `ಶೇಕ್ ಪುಷ್ಪವತಿ’ ಹಾಡಿನ ಮೂಲಕ ಪ್ರೇಕ್ಷಕರ ಮನಸ್ಸನ್ನು ಶೇಕ್ ಮಾಡಿ ಮನೆ ಮಾತಾದ ಮಂಗಳೂರಿನ ಬೆಡಗಿ ನಿಮಿಕಾ ರತ್ನಾಕರ್.
‘ಹುಲಿಯಾ’ : ತೂತುಮಡಿಕೆ ಡೈರೆಕ್ಟರ್ ಹೊಸ ಪ್ರಯತ್ನ
ಮೂಲತಃ ಮಂಗಳೂರಿನವರಾಗಿರುವ ನಿಮಿಕಾ ರತ್ನಾಕರ್ ಅವರಿಗೆ ನಾನ್ ವೆಜ್ ಅಂದ್ರೆ ತುಂಬಾ ಇಷ್ಟ. ಅದರಲ್ಲೂ ಕೋರಿ ರೊಟ್ಟಿ ಚಿಕನ್ ಅಂದ್ರೆ ಪಂಚಪ್ರಾಣ. ಸದ್ಯ ಬೆಂಗಳೂರಿನಲ್ಲಿ ವಾಸವಿರುವ ನಿಮಿಕಾ, ಇಲ್ಲಿ ಮಂಗಳೂರಿನ ಶೈಲಿ ಅಡುಗೆ ಮಾಡುವವರು ಕಡಿಮೆ ಇರುವ ಕಾರಣ ತಮ್ಮ ಇಷ್ಟದ ಅಡುಗೆಯನ್ನ ತಾವೇ ಮಾಡಿಕೊಳ್ಳುತ್ತಾರೆ. ಅದರಲ್ಲೂ ಫಿಶ್ ಪುಲಿಮುಂಚಿಯನ್ನ ಸಖತ್ತಾಗಿ ಮಾಡ್ತಾರೆ. ಇನ್ನು ಮಂಗಳೂರಿಗೆ ಹೋದ್ರೆ, ಅಲ್ಲಿ ಅಮ್ಮ ಮಾಡಿದ Crab Sukka, Crab ಮಸಾಲ, ಚಿಕನ್ ಹೀಗೆ ನಾನ್ವೆಜ್ ಏನೇ ಮಾಡಿದ್ರು ಬಾಯಿ ಚಪ್ಪರಿಸಿಕೊಂಡು ತಿಂತಾರೆ.
ನೋಡೋಕೆ ಸ್ಲಿಮ್ ಬ್ಯೂಟಿಯಾಗಿರುವ ನಿಮಿಕಾ ಡಯಟ್ಗೆ ಅಷ್ಟಾಗಿ ಇಂಪಾರ್ಟೆನ್ಸ್ ಕೊಡೋದಿಲ್ಲ, ಆದ್ರೆ ಸಮಯಕ್ಕೆ ಸರಿಯಾಗಿ ಊಟ ಮಾಡ್ತಾರೆ, ಸಂಜೆ SNACKS ಹಾಗೂ ರಾತ್ರಿ ಊಟವನ್ನ ಮಿತವಾಗಿ ಮಾಡುವ ಇರುವ ರೈಸ್ನ್ನು ಕಡಿಮೆ ಸೇವಿಸುತ್ತಾರೆ. ನಾನ್ವೆಜ್ ಜೊತೆಗೆ ತರಕಾರಿ, ಸೊಪ್ಪು ಕೂಡ ಸೇವನೆ ಮಾಡ್ತಾರೆ. ಒಬ್ಬ ಮನುಷ್ಯ ಫಿಟ್ ಆಗಿರೋದಕ್ಕೆ 30% ವರ್ಕೌಟ್ ತುಂಬಾ ಮುಖ್ಯವಾಗುತ್ತೆ, ಅದಕ್ಕಾಗಿ ನಿಮಿಕಾ ಜಿಮ್ಗೆ ಹೋಗ್ತಾರೆ. ಆದ್ರೆ ಶೂಟಿಂಗ್ ಸಮಯದಲ್ಲಿ ಜಿಮ್ ಮಿಸ್ಸಾದ್ರೆ ಮನೆಯಲ್ಲೆ ಯೋಗ, ವಾಕ್ ಮಾಡೋದು ರೂಢಿ. ಡಯಟ್ಗೆ ಮುಖ್ಯವಾಗಿ ಬೇಕಾಗಿರುವುದು ಸರಿಯಾದ ಕ್ರಮವಾಗಿ ಬಳಸುವ ಆಹಾರ ಮತ್ತು ನೀರು, ಎಂಬುದು ಇವರ ಅಭಿಪ್ರಾಯ. ಸಿಕ್ಕಾಪಟ್ಟೆ ಫುಡ್ಡಿಯಾಗಿರುವ ಇವರು, ಸರಿಯಾದ ಸಮಯಕ್ಕೆ ಊಟ, ತಿಂಡಿ, ನಿದ್ರೆ ಮಾಡುವುದನ್ನು ತಪ್ಪದೆ ಪಾಲಿಸುತ್ತಾರೆ ಇವರು, ಯಾಕಂದ್ರೆ ಮನುಷ್ಯನಿಗೆ ಊಟ, ನಿದ್ರೆ ಇಲ್ಲದೆ ಏನೂ ಇಲ್ಲ. ಸರಿಯಾದ ನಿದ್ರೆ ಮಾಡೋಕೂ ಆಹಾರ ತುಂಬಾ ಇಂಪಾರ್ಟೆAಟ್. ನಾವು ಬೆಳಗ್ಗೆ ಎದ್ದು ಫ್ರೆಶ್ ಆಗಿ ಕೆಲಸ ಮಾಡಬೇಕು ಅಂದ್ರೆ ಮುಖ್ಯ ಊಟ ಹಾಗೂ ನಿದ್ರೆ ಬೇಕೇ ಬೇಕು ಅನ್ನೋದು ನಿಮಿಕಾ ಅವರ ಮಾತು.