ಈ ವರ್ಷ ಚಿತ್ರರಂಗದಲ್ಲಿ ದಸರಾ ಸಂಭ್ರಮ ಡಬಲ್ ಆಗ್ತಿದೆ. ಕನ್ನಡ, ತಮಿಳು, ತೆಲುಗಿನ ದೊಡ್ಡ ದೊಡ್ಡ ಸಿನಿಮಾಗಳು ಹಬ್ಬದ ಸಡಗರ ಹೆಚ್ಚಿಸೋಕೆ ಬರ್ತಿವೆ. ಕರ್ನಾಟಕದಲ್ಲಂತೂ ಕನ್ನಡ ಸಿನಿಮಾಗಳದ್ದೇ ಪಾರುಪತ್ಯ ಅನ್ನೋದು ಸ್ಪಷ್ಟವಾಗುತ್ತಿದೆ. ಮಲ್ಟಿಫ್ಲೆಕ್ಸ್, ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲಿ ಕನ್ನಡ ಸಿನಿಮಾಗಳಿಗೆ ಆದ್ಯತೆ ಹೆಚ್ಚು ಸಿಗುವ ಸುಳಿವು ಸಿಕ್ತಿದೆ. ನಾಡ ಹಬ್ಬದ ಸಂಭ್ರಮದಲ್ಲಿ ‘ಸಪ್ತ ಸಾಗರದಾಚೆ ಎಲ್ಲೋ’- ಸೈಡ್ B, ಶಿವಣ್ಣ ನಟನೆಯ ‘ಘೋಸ್ಟ್’ ಜೊತೆಗೆ ತೆಲುಗಿನ ಟೈಗರ್ ನಾಗೇಶ್ವರ್‌ರಾವ್, ಭಗವಂತೆ ಕೇಸರಿ ಜೊತೆಗೆ ತಮಿಳಿನ ‘ಲಿಯೋ’ ಸಿನಿಮಾ ರಿಲೀಸ್ ಆಗ್ತಿದೆ. ಸಾಮಾನ್ಯವಾಗಿ ಈ ರೀತಿ ದೊಡ್ಡ ಸಿನಿಮಾಗಳ ನಡವೆ ಕ್ಲ್ಯಾಶ್ ಆದಾಗ ಕನ್ನಡ ಸಿನಿಮಾಗಳಿಗೆ ಕಡಿಮೆ ಸ್ಕ್ರೀನ್‌ಗಳು ಸಿಗುತ್ತವೆ. ಆದರೆ ಈ ಬಾರಿ ಕನ್ನಡ ಸಿನಿಮಾಗಳು ಪರಭಾಷಾ ಸಿನಿಮಾಗಳಿಗೆ ಗಟ್ಟಿ ಪೈಪೋಟಿ ಕೊಡುವ ಸುಳಿವು ಸಿಗುತ್ತಿದೆ.

ಇದನ್ನೂ ಓದಿ: *ಹೊಸಬರ ’ಲವ್’ ಸಿನಿಮಾದ ಟ್ರೇಲರ್ ರಿಲೀಸ್..ಸಖತ್ ಪ್ರಾಮಿಸಿಂಗ್ ಆಗಿ ಟ್ರೇಲರ್…ಅಕ್ಟೋಬರ್ 6ಕ್ಕೆ ತೆರೆಯಲ್ಲಿ ಲವ್ ಮ್ಯಾಜಿಕ್
‘ಸಪ್ತ ಸಾಗರದಾಚೆ ಎಲ್ಲೋ’ ಮೊದಲ ಭಾಗ ಈಗಾಗಲೇ ಸೂಪರ್ ಹಿಟ್ ಆಗಿದೆ. ಹಾಗಾಗಿ ಸಹಜವಾಗಿಯೇ 2ನೇ ಭಾಗ ನಿರೀಕ್ಷೆ ಹೆಚ್ಚಿಸಿದೆ. ಇನ್ನು ಶ್ರೀನಿ ನಿರ್ದೇಶನದ ‘ಘೋಸ್ಟ್’ ಸಿನಿಮಾ ಕೂಡ ತೆಲುಗು, ತಮಿಳಿನ ಸಿನಿಮಾಗಳಿಗೆ ಟಫ್ ಕಾಂಪಿಟೇಷನ್ ಕೊಡುವ ಸುಳಿವು ಸಿಕ್ತಿದೆ. ಅದರಲ್ಲೂ ತಮಿಳಿನ ‘ಲಿಯೋ’ ಅತ್ತ ಆಂಧ್ರ, ತೆಲಂಗಾಣದಲ್ಲಿ ಇತ್ತ ಕರ್ನಾಟಕದಲ್ಲಿ ಪ್ರಬಲ ಪೈಪೋಟಿ ಎದುರಾಗುತ್ತಿದೆ. ಹಾಗಾಗಿ ದಸರಾಗೆ ವಾರ್ ಒನ್ ಸೈಡ್ ಆಗಿ ಬಿಡುತ್ತಾ? ಎನ್ನುವ ಚರ್ಚೆ ಶುರುವಾಗಿದೆ. ಶಿವಣ್ಣ ನಟನೆಯ ಆಕ್ಷನ್ ಎಂಟರ್‌ಟೈನರ್ ‘ಘೋಸ್ಟ್’ ತಮಿಳು, ತೆಲುಗಿಗೂ ಡಬ್ ಆಗಿ ರಿಲೀಸ್ ಆಗುತ್ತಿದೆ. ‘ಜೈಲರ್’ ಚಿತ್ರದ ನರಸಿಂಹ ಪಾತ್ರದಿಂದ ಸೆಂಚುರಿ ಸ್ಟಾರ್ ತೆಲುಗು, ತಮಿಳು, ಮಲಯಾಳಂ ಪ್ರೇಕ್ಷಕರ ಮನಗೆದ್ದಿದ್ದಾರೆ. ಹಾಗಾಗಿ ‘ಘೋಸ್ಟ್’ ಚಿತ್ರಕ್ಕೆ ಹೊರ ರಾಜ್ಯಗಳಲ್ಲೂ ಒಳ್ಳೆ ರೆಸ್ಪಾನ್ಸ್ ನಿರೀಕ್ಷೆ ಮಾಡಲಾಗುತ್ತಿದೆ. ಕಾಲಿವುಡ್‌ನಲ್ಲಿ ರಜನಿಕಾಂತ್ ಹಾಗೂ ವಿಜಯ್ ಫ್ಯಾನ್ಸ್ ನಡುವೆ ತಿಕ್ಕಾಟ ನಡೀತಿದೆ. ಹಾಗಾಗಿ ದಸರಾ ಸಂಭ್ರಮದಲ್ಲಿ ‘ಘೋಸ್ಟ್’ ಸಿನಿಮಾ ನೋಡುವುದಾಗಿ ಹೇಳುತ್ತಿದ್ದಾರೆ. ‘ಲಿಯೋ’ ಸಿನಿಮಾ ದೊಡ್ಡಮಟ್ಟದಲ್ಲಿ ಹೈಪ್ ಕ್ರಿಯೇಟ್ ಮಾಡಿಲ್ಲ. ‘ಬೀಸ್ಟ್’ ಸೋಲು ಕೂಡ ಲೋಕೇಶ್ ಕನಕರಾಜ್ ನಿರ್ದೇಶನದ ಸಿನಿಮಾ ಮೇಲೆ ಬೀಳುವ ಸಾಧ್ಯತೆಯಿದೆ. ಐಪಿಎಲ್‌ನಲ್ಲಿ RCB Vs CSK ರೀತಿ ಈ ಬಾರಿ ದಸರಾಗೆ ಬಾಕ್ಸಾಫೀಸ್‌ನಲ್ಲಿ Ghost Vs Leo ಸಿನಿಮಾಗಳ ನಡುವೆ ಪೈಪೋಟಿ ಏರ್ಪಡುತ್ತದೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೀತಿದೆ. ವಿಜಯ್ ‘ಲಿಯೋ’ ಚಿತ್ರದಲ್ಲಿ ಬಾಲಯ್ಯನ ‘ಭಗವಂತ್ ಕೇಸರಿ’ ಹಾಗೂ ರವಿತೇಜಾ ನಟನೆಯ ‘ಟೈಗರ್ ನಾಗೇಶ್ವರ ರಾವ್’ ಸಿನಿಮಾಗಳು ಶಾಕ್ ಕೊಡುವ ಲೆಕ್ಕಾಚಾರ ನಡೀತಿದೆ.

ಇನ್ನು ‘ಲಿಯೋ’ ಸಿನಿಮಾ ರೀಶೂಟ್ ನಡೀತಿದೆ ಎನ್ನುವ ಗುಸು ಗುಸು ಶುರುವಾಗಿದೆ. ಸೆನ್ಸಾರ್ ವಿಚಾರದಲ್ಲೂ ಚಿತ್ರಕ್ಕೆ ಹಿನ್ನಡೆ ಆಗುವ ಸಾಧ್ಯತೆಯಿದೆ. ಇದೆಲ್ಲದರ ನಡುವೆ ‘ಲಿಯೋ’ ರಿಲೀಸ್ ಡೇಟ್ ಬದಲಾಗುತ್ತದೆ ಎನ್ನುವ ಊಹಾಪೋಹ ಕೂಡ ಶುರುವಾಗಿದೆ. ಅನಿಲ್ ರವಿಪುಡಿ ‘ಭಗವಂತ್ ಕೇಸರಿ’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಬಾಲಯ್ಯನ ಸಹೋದರಿಯಾಗಿ ಶ್ರೀಲೀಲಾ ಮಿಂಚಿದ್ದಾರೆ. ಬಹಳ ದೊಡ್ಡಮಟ್ಟದಲ್ಲಿ ಈ ಸಿನಿಮಾ ಆಂಧ್ರ, ತೆಲಂಗಾಣದಲ್ಲಿ ತೆರೆಗೆ ಬರ್ತಿದೆ. ಹಬ್ಬದ ಸಂಭ್ರಮದಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ಒಟ್ಟಿಗೆ ಬಂದರೂ ಕೂಡ ಪ್ರೇಕ್ಷಕರು ಸಿನಿಮಾ ನೋಡೇ ನೋಡುತ್ತಾರೆ ಎನ್ನುವ ಲೆಕ್ಕಾಚಾರ ಇದೆ. ಹಾಗಾಗಿನೇ ಧೈರ್ಯವಾಗಿ ಸಿನಿಮಾಗಳನ್ನು ಒಟ್ಟೊಟ್ಟಿಗೆ ರಿಲೀಸ್ ಮಾಡಲಾಗುತ್ತದೆ. ಈ ವರ್ಷ ಸಂಕ್ರಾಂತಿ ಸಂಭ್ರಮದಲ್ಲಿ ತಮಿಳಿನ 2, ತೆಲುಗಿನ 2 ಬಹುನಿರೀಕ್ಷಿತ ಸಿನಿಮಾಗಳು ಏಕಕಾಲಕ್ಕೆ ತೆರೆಗಪ್ಪಳಿಸಿದ್ದವು. ಒಳ್ಳೆ ಸಿನಿಮಾಗಳಿಗೆ ಬಾಕ್ಸಾಫೀಸ್ ಕ್ಲ್ಯಾಶ್ ಸಮಸ್ಯೆ ಆಗೋದೇ ಇಲ್ಲ ಎನ್ನುವ ವಾದವೂ ಇದೆ. ಒಟ್ನಲ್ಲಿ ಈ ಬಾರಿ ದಸರಾಗೆ ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಬಾಕ್ಸಾಫೀಸ್ ಕ್ಲ್ಯಾಶ್ ಜೋರಾಗಿಯೇ ಇರುತ್ತದೆ.
