“ಸಪ್ತ ಸಾಗರದಾಚೆ ಎಲ್ಲೋ” ಸೈಡ್ ಬಿ ಅಥವಾ ಅದರ ಮುಂದುವರೆದ ಭಾಗವು ಬಿಡುಗಡೆಗೊಂಡು ಉತ್ತಮ ಪ್ರದರ್ಶನವನ್ನು ಕಾಣುತ್ತಿದ್ದೆ. ಭಾಗದ ಒಂದರಲ್ಲಿ ಪ್ರೀತಿ ಮಾಡಿದ ಹೃದಯವನ್ನು ಕಳೆದುಕೊಂಡ ನೋವು ಒಂದು ಕಡೆಯಾದರೆ ಮತ್ತೊಂದು ಕಡೆ ಜೈಲು ಸೇರುವುದರೊಂದಿಗೆೆ ಭಾಗ ೧ ಕೊನೆಯಾಗುತ್ತದೆ. ಒಂದು ಕಡೆ ಪ್ರೀತಿಯನ್ನು ಕಳೆದುಕೊಂಡು ಖೈದಿಯಾಗಿ ಹೊರಬಂದು ಮತ್ತೆ ಹೇಗೆ ಸಮಾನ್ಯ ಮನುಷ್ಯನಂತೆ ಜೀವನವನ್ನು ಹೇಗೆ ಕಟ್ಟಿಕೊಳ್ಳುತ್ತಾನೆ ಎಂದು ಹೇಳುತ್ತದೆ ಸೈಡ್ ಬಿ. ನಿರ್ದೇಶಕ ಹೇಮಂತ್ ರಾವ್ ಓರ್ವ ಉತ್ತಮ ಕಥೆಗಾರ, ಕಥೆಯನ್ನು ಹೇಗೆ ಕಟ್ಟಿಕೊಡಬೇಕೆಂದು ಗೊತ್ತಿದೆ.

ಹಾಗಾಗೀ ಹೇಮಂತ್‌ರಿಗೆ ಸೈಡ್ ಬಿ ಮಾಡಲು ಸಾಧ್ಯವಾಗಿದೆ. ಪಾತ್ರಗಳು ಕೇವಲ ಸಂಭಾಷಣೆ ಮತ್ತು ಸಧಾರಣ ನಟನೆಯಿಂದ ಚಿತ್ರ ಸಾಗದು ಎಂಬುದಕ್ಕೆ “ಸಪ್ತ ಸಾಗರದಾಚೆ ಎಲ್ಲೋ” ಸೈಡ್ ಬಿ ಸಾಭೀತು ಪಡಿಸಿದೆ. ಭಾವನಗಳಿಂದ ಮಾತ್ರ ಪಾತ್ರಕ್ಕೆ ಜೀವ ತುಂಬಲು ಸಾಧ್ಯ. ಇದನ್ನು ಚಿತ್ರದಲ್ಲಿ ನಟಿಸಿರುವ ಕಲಾವಿದರು ತಮ್ಮ ನೈಜ ಹಾಗೂ ಮನೋಜ್ಞ ಅಭಿನಿಯದಿಂದ ಪಾತ್ರಕ್ಕೆ ಜೀವತುಂಬುವುದರ ಜೊತೆಗೆ ಕಥೆಗೆ ಪೂರ್ವಕವಾಗಿರುವ ಸಂಭಾಷಣೆ ಇದರಿಂದಾಗಿ ಚಿತ್ರದ ಗೆಲ್ಲುವನ್ನು ದಾಖಲಿಸಲು ಸಾಧ್ಯವಾಗಿದೆ.

ಇನ್ನೂ ಈ ಭಾಗದಲ್ಲಿ ಹೊಸದಾಗಿ ಸೇರ್ಪಡೆಗೊಂಡಿರುವ ಎರಡು ಪ್ರಮುಖ ಪಾತ್ರಗಳು ಅಂದರೆ ‘ಸುರಭಿ ಮತ್ತು ‘ದೀಪಕ್’. ‘ಸುರಭಿ’ಯಾಗಿ ಚೈತ್ರ ಆಚಾರ್ ಕಾಣಿಸಿಕೊಂಡಿದ್ದಾರೆ. ಇವರು ಮಾಡಿರುವ ಪಾತ್ರವು ಚಿತ್ರಮಂದಿರದಿಂದ ಹೊರಬಂದ ಮೇಲು ಪ್ರೇಕ್ಷಕರನ್ನು ಕಾಡುವಂತೆ ಮಾಡುತ್ತದೆ. ಈ ಪಾತ್ರಕ್ಕೆ ಸಾಕಷ್ಟು ಒಳನೋಟಗಳಿದ್ದು, ಚೈತ್ರಾ ಆಚಾರ್ ತಮ್ಮ ‘ಸುರಭಿ’ ಪಾತ್ರಕ್ಕೆ ನ್ಯಾಯವನ್ನು ಒದಗಿಸಿದ್ದಾರೆ. ತುಂಬಾ ಒಳ್ಳೆ ಸಂಭಾಷಣೆಗಳೊAದಿಗೆ, ಪ್ರೀತಿ, ನಿರಾಸೆ, ಹಾಗೂ ಆತಂಕದವಿದ್ದರು ನಗುವ ಚೈತ್ರಾ ನಿಜಕ್ಕೂ ಉತ್ತಮ ಕಲಾವಿದೆ ಎಂದು ಮೊತ್ತಮ್ಮೆ ಸಾಭೀತು ಪಡೆಸಿದ್ದಾರೆ.

ತಾನು ಪ್ರೀತಿಸಿದ ಹುಡುಗಿಗೆ ಮರುಗುವ ಮನುಗೆ ಸಹಾಯ ಮಾಡಲೆಂದು ಬರುವ ‘ಸುರಭಿ’ ಕೊನೆಗೆ ತಾನೇ ಮುನವಿಗೆ ಸೋತು ಅವನನ್ನು ಪ್ರೀತಸಲು ಶುರುಮಾಡಿ ಕೊನೆಗೆ ತಾನು ಪ್ರೀತಿಸಿದ ಹುಡಗನನ್ನು ಉಳಿಸಿಕೊಳ್ಳಲೇಬೇಕೆಂದು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾಳೆ. ಸೈಡ್ ಬಿ ನಲ್ಲಿ ಮನು ಮತ್ತು ಪ್ರಿಯ ಪಾತ್ರಗಳು ಪ್ರೇಕ್ಷಕರನ್ನು ಹಿಡಿದು ಕುಡಿಸುತ್ತದೆ, ತನ್ಮಯತೆಯಿಂದಲೇ ಪಾತ್ರದಲ್ಲಿ ಸಂಪೂರ್ಣವಾಗಿ ಮುಳಗಿದ್ದು ತಮ್ಮದ ಜೀವನ ಎಂಬಂತೆ ರುಕ್ಮಣಿ ವಸಂತ್ ಹಾಗೂ ರಕ್ಷಿತ್ ಶೆಟ್ಟಿ ಅಷ್ಟರ ಮಟ್ಟಿಗೆ
ತಮ್ಮ ಪಾತ್ರಗಳಿಗೆ ಜೀವತುಂಬಿದ್ದಾರೆ. ಕಳೆದು ಹೋದ ಜೀವನ ಮತ್ತು ಬದುಕು, ಅದಕ್ಕೆ ತಕ್ಕಂತೆ ಕಲಾವಿದ ಪರಿಶ್ರಮ ನೈಜವಾಗಿ ಕಾಣಿಸಿಲು
ಅವರ ಪರಿಶ್ರಮವು ಚಿತ್ರದ ಪರದೆ ಮೇಲೆ ಕಂಡುಬರುತ್ತದೆ. ಚಿತ್ರದಲ್ಲಿ ಅನೇಕರು ನಟಿಸಿದ್ದಾರೆ, ಚಿತ್ರ ಪಾತ್ರಗಳು ಕೇವಲ ಪಾತ್ರವಾಗಿ ಕಂಡುಬರದೆ, ಕಥೆ ತಕ್ಕಂತೆ ಪಾತ್ರ ಅದಕ್ಕೆ ಸಿರಿಸಮಾವದ ನಟನೆಯನ್ನು ಕಾಲವಿದರು ಮಾಡಿರುವುದು ನಿಜಕ್ಕೂ ಇದೊಂದು ಉತ್ತಮವಾದ ಚಿತ್ರವೆಂದು ಪ್ರೇಕ್ಷಕನಿಗೆ ಅನಿಸದೆ ಇರಲು ಸಾಧ್ಯವಿಲ್ಲ.
ಇನ್ನೂ ಸಂಗೀತಕ್ಕೆ ಬರುವುದಾದರೆ ಹಿನ್ನಲೆ ಸಂಗೀತ, ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್, ಉತ್ತಮವಾದ ಸಂಗೀತವನ್ನು ನೀಡಿದ್ದಾರೆ
ಸಂಗೀತ ನಿರ್ದೇಶಕ ಚರಣ್ ರಾಜ್, ಸೈಡ್ ಎ ನಲ್ಲಿ ಒಂದುಥರ ಮೆಲೋಡಿ, ಸುಮಧುರವಾದ ಸಂಗೀತವಿದ್ದರೆ, ಸೈಡ್ ಬಿ ನಲ್ಲಿ
ಬಿಜಿಎಮ್ ಪ್ರೇಕ್ಷಕರನ್ನು ಕಾಡುವಂತದು ಸುಳ್ಳಲ್ಲ. ಚಿತ್ರಕ್ಕೆ ಅದ್ವೆತ ಗುರುಮೂರ್ತಿರವರ ಛಾಯಗ್ರಹಣವಿದ್ದು, ಪ್ರತಿಯೊಂದು ಫ್ರೇಮ್ ನಲ್ಲೂ ಅವರ ಶ್ರಮ ಕಂಡುಬರುತ್ತದೆ.
ಒಟ್ಟಾರೆ ಇದೊಂದು ಕುಟುಂಬ ಸೇಮತ ನೋಡ ಬಹುದಾದ ಚಿತ್ರ, ಭಾವನೆಗಳಿಗೆ ಹೆಚ್ಚು ಒತ್ತುಕೊಟ್ಟಿರುವ ಚಿತ್ರದಲ್ಲಿ, ನಟನೆ, ಸಂಭಾಷಣೆಯೊಂದಿಗೆ ಒಂದು ನೈಜ ಘಟನೆ ಆಧಾರತ ಚಿತ್ರ ಒಂದನ್ನು ನೋಡಿ ಅನುಭವ ಪ್ರೇಕ್ಷಕನಿಗೆ ನೀಡುತ್ತದೆ.
