ಈಗ ಡಿಜಿಟಲ್ ಮಾಧ್ಯಮ ಯುಗ, ಕಳೆದ ನಾಲ್ಕೆöÊದು ವರ್ಷಗಳಿಂದ ಡಿಜಿಟಲ್ ಮಾಧ್ಯಮ, ಯೂಟ್ಯೂಬ್ ಬಳಕೆ ಹೆಚ್ಚು ಜನಪ್ರಿಯವಾಗುತ್ತಿದೆ. ಒಂದು ಅಧ್ಯಯನದ ಪ್ರಕಾರ ಜಾಗತಿಕ ಮಟ್ಟದಲ್ಲಿ ಇಂದು ೪.೨ ಶತಕೋಟಿ ಜನರು ಡಿಜಿಟಲ್ ಮಾಧ್ಯಮ ಬಳಕೆ ಮಾಡುತ್ತಿದ್ದಾರೆ. ಜಗತ್ತಿನ ಹಲವು ಉದ್ಯಮಗಳ ಯಶಸ್ಸು ಇಂದು ಡಿಜಿಟಲ್ ಮಾಧ್ಯಮಗಳ ಮಾರುಕಟ್ಟೆ, ಜನಪ್ರಿಯತೆಯನ್ನು ಅವಲಂಬಿಸಿದೆ. ಹೀಗಾಗಿ ಇಂದಿನ ಯುವಜನತೆ ರೇಡಿಯೊ, ಮುದ್ರಣ ಮಾಧ್ಯಮಗಳಿಗಿಂತ ಡಿಜಿಟಲ್ ಮಾಧ್ಯಮಗಳತ್ತ ಹೊರಳುತ್ತಿದ್ದಾರೆ. ಈ ನಿಟ್ಟಿನಲ್ಲಿ `ಶ್ರೀಪಾದ ಸ್ಟುಡಿಯೋಸ್’ ಕ್ರೀಯಾಶೀಲ ಕೆಲಸಗಳ ಮೂಲಕ ಡಿಜಿಟಲ್ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ.
ಏಪ್ರಿಲ್ 28ಕ್ಕೆ ತೆರೆಗೆ ಬಹುನಿರೀಕ್ಷಿತ ‘ರಾಘು’ ಚಿತ್ರ ಎಂಟ್ರಿ: ವಿಭಿನ್ನ ರೂಪದಲ್ಲಿ ಚಿನ್ನಾರಿ ಮುತ್ತ!
ಡಿಜಿಟಲ್ ಜಾಹೀರಾತು, ಸಾಮಾಜಿಕ ಮಾಧ್ಯಮ ಮಾರ್ಕೆಟಿಂಗ್, ವೆಬ್ ಮತ್ತು ಅಪ್ಲಿಕೇಶನ್ ಅಭಿವೃದ್ಧಿ, ಗ್ರಾಫಿಕ್ ಮತ್ತು ಡಿಜಿಟಲ್ ಮಾಧ್ಯಮ ಕೌಶಲ್ಯಗಳ ಮೂಲಕ `ಶ್ರೀಪಾದ ಸ್ಟುಡಿಯೋಸ್’ ಗುರುತಿಸಿಕೊಂಡಿದೆ. ಡಿಜಿಟಲ್ ಮಾಧ್ಯಮ ತಜ್ಞರನ್ನೊಳಗೊಂಡ ಈ ಸಂಸ್ಥೆಯ ಯುವ ತಂಡ ಹೊಸ ಡಿಜಿಟಲ್ ಪ್ರಚಾರದಲ್ಲಿ ಹೊಸ ಹೊಸ ಅವಿಷ್ಕಾರಗಳನ್ನು ಹುಟ್ಟುಹಾಕಿದೆ. ಆರಂಭದಲ್ಲಿ ಸಣ್ಣ ಮಟ್ಟದಲ್ಲಿ ಆರಂಭವಾದ `ಶ್ರೀಪಾದ ಸ್ಟುಡಿಯೋಸ್’ ಪರಿಣಿತ ಸಿಬ್ಬಂದಿಗಳನ್ನೊಳಗೊAಡ ಸುಸಜ್ಜಿತ ಕಛೇರಿಯನ್ನು ಹೊಂದಿದ್ದು, ಉನ್ನತ ದರ್ಜೆಯ ವಿಷಯ ರಚನೆ ಮತ್ತು ವೃತ್ತಿಪರ ಸಲಕರಣೆಗಳೊಂದಿಗೆ ಸೇವೆಯನ್ನು ನೀಡಲು ಸಿದ್ಧವಾಗಿದೆ. ಅಷ್ಟೇ ಅಲ್ಲದೆ, ಈ ಸಂಸ್ಥೆ, ಡಿಜಿಟಲ್ ಪತ್ರಕರ್ತರು, ಡಿಜಿಟಲ್ ಫೋಟೋಗ್ರಾಫರ್‌ಗಳು, ವೆಬ್ ಕಂಟೆAಟ್ ರೈಟರ್‌ಗಳು, ಕಂಟೆAಟ್ ಡೆವಲಪರ್‌ಗಳು, ಸಾಮಾಜಿಕ ಮಾಧ್ಯಮ ತಂತ್ರಜ್ಞರು, ವೀಡಿಯೊ ವಿನ್ಯಾಸಕರು ಮತ್ತು ಸಂಪಾದಕರು ಮತ್ತು ಸಚಿತ್ರಕಾರರಿಗೆ ಉದ್ಯೋಗ ಸೃಷ್ಟಿಸಿದೆ. ಹಾಗೂ, ಈ ಸಂಸ್ಥೆಯಲ್ಲಿ ಹೊಸ ಅಲೋಚನೆಗಳನ್ನು ಹೊತ್ತ ನವ ಪ್ರತಿಭೆಗಳಿಗೆ ಉದ್ಯೋಗವಾಕಾಶ ಕಲ್ಪಿಸಲು ಸದಾ ಸಿದ್ಧವಿದೆ.
’ಅಭಿರಾಮಚಂದ್ರ’ ಟೀಸರ್ ನೋಡಿದ ನಟ ಶಿವರಾಜ್‌ಕುಮಾರ್ ಏನಂದ್ರು ಗೊತ್ತಾ?
ವೀಡಿಯೊ ಸಂಪಾದಕರು ಮತ್ತು ಗ್ರಾಫಿಕ್ ವಿನ್ಯಾಸಕರನ್ನು ಒಳಗೊಂಡ ಈ ಸಂಸ್ಥೆ ಮನರಂಜನಾ ಉದ್ಯಮಕ್ಕೆ ತನ್ನದೇ ಆದ ಕೊಡುಗೆಯನ್ನು ಕೊಡುತ್ತಾ, ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿಯೂ ಬೇಡಿಕೆಯಲ್ಲಿದ್ದಾರೆ. ವೃತ್ತಿಪರ ವೆಬ್ ಡಿಸೈನರ್‌ಗಳು ಮತ್ತು ಡೆವಲಪರ್‌ಗಳನ್ನು ಹೊಂದಿರುವ `ಶ್ರೀಪಾದ ಸ್ಟುಡಿಯೋಸ್’ ಸಂಸ್ಥೆ ತನ್ನ ಕ್ರಿಯಾಶೀಲ ವಿನ್ಯಾಸಗಳಿಂದ ಜನಮನ್ನಣೆಯನ್ನು ಪಡೆದಿದೆ. ಸಾಮಾಜಿಕ ಮಾಧ್ಯಮ ತಂತ್ರಜ್ಞರನ್ನು ಒಳಗೊಂಡಿರುವ ಈ ಸಂಸ್ಥೆ, ಸಾಮಾಜಿಕ ಮಾಧ್ಯಮ ಯೋಜನೆಯ ನಿರ್ವಹಣೆ ಕೌಶಲ್ಯಗಳ ಮೂಲಕ ಸಿನಿಮಾ ರಂಗದಲ್ಲಿ ಹೊಸ ರೀತಿಯ ಪ್ರಚಾರ ಕಾರ್ಯಗಳಿಂದ ಸಿನಿಮಾ ನಿರ್ಮಾಪಕರ ಪಾಲಿಗೆ ಆಶಾದಾಯಕವಾಗಿದ್ದಾರೆ.
ಬಿಡುಗಡೆಯಾಯ್ತು `ಬಾ ನಲ್ಲೆ ಮದುವೆಗೆ’ ಟೀಸರ್ ಮತ್ತು ಹಾಡುಗಳು
ಇಲ್ಲಿಯವೆರಗೂ ಸಂಸ್ಥೆಯು ಶಿವಾಜಿ ಸುರತ್ಕಲ್–೨, ೧೦೦, ಗಾಳಿಪಟ–೨, ತಿಮ್ಮಯ್ಯ ಮತ್ತು ತಿಮ್ಮಯ್ಯ, ಪೆಂಟಗನ್ ಸೇರಿದಂತೆ ಅನೇಕ ಚಿತ್ರಗಳಿಗೆ ಡಿಜಿಟಲ್ ಪ್ರಚಾರ ಸೇವೆಯನ್ನು ಒದಗಿಸುತ್ತಾ ಬಂದಿದೆ. ಅಲ್ಲದೆ ಖಾಸಗಿ ಸಂಸ್ಥೆಗಳಿಗೂ ಪೂರ್ಣ ಪ್ರಮಾಣದಲ್ಲಿ ಮಾದ್ಯಮ ನಿರ್ವಹಣಾ ಹಾಗೂ ವಿಡಿಯೋ ಸೇವೆಗಳನ್ನು ನೀಡುತ್ತಾ ಬಂದಿರುತ್ತದೆ. ಈ ಎಲ್ಲಾ ಸಾಹಸಗಳ ಹಿಂದಿರುವವರು ಸ್ಟುಡಿಯೋ ಮಾಲೀಕರಾದÀ ಪಿ.ವಿ.ಫಣಿ ಶ್ರೀವತ್ಸ, ಸಹ ಸಂಸ್ಥಾಪಕರಾದ ಸತೀಶ್.ಎಂ.ಎಸ್. ಇವರು ಬಜೆಟ್ ಫ್ರೆಂಡ್ಲೀ ಸೇವೆಗಳನ್ನು ನೀಡುತ್ತಾ ಬಂದಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಇನ್ನೋವೇಶನ್ಸ್ ಮೂಲಕ ಗ್ರಾಹಕರಿಗೆ ಹತ್ತಿರವಾಗಲಿದ್ದಾರೆ.