ಬಯೋಪಿಕ್ ಸಿನಿಮಾಗಳು ನಮ್ಮ ಕನ್ನಡ ಇಂಡಸ್ಟ್ರಿಯಲ್ಲೂ ಇತ್ತಿಚೆಗೆ ಕಾಮನ್ ಆಗಿದೆ. ಆದರೆ ಇದೀಗ ಮೊದಲ ಬಾರಿಗೆ ರಾಮ ಮಂದಿರದ ಬಯೋಪಿಕ್ ಮಾಡಲು ತಯಾರಿ ನಡೆಸಿದ್ದಾರೆ. ದಂಡುಪಾಳ್ಯ ಸಿನಿಮಾ ಮಾಡಿದ್ದ ನಿರ್ದೇಶಕ ಶ್ರೀನಿವಾಸ್ ರಾಜು ರಾಮಂದಿರದ ಬಯೋಪಿಕ್ ಮಾಡಲು ಕಥೆ ರೆಡಿ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ :Dwarakish :ತುಂಬು ಕುಟುಂಬದ ದೊರೆ ದ್ವಾರಕೀಶ್!
ಅಯೋಧ್ಯೆಯ ರಾಮಮಂದಿರಕ್ಕೆ ಬಹು ದೊಡ್ಡ ಇತಿಹಾಸವಿದೆ. ಕಳೆದ ಜನವರಿ 22ರಂದು ಆಯೋಧ್ಯೆಯಲ್ಲಿ ಬಾಲರಾಮನ ಉದ್ಘಾಟನೆಯಾಗಿದೆ. ಇಂದು ರಾಮನವಮಿ. ಈ ಸುಸಂದರ್ಭದಲ್ಲಿಯೇ ಇಂಥದ್ದೊಂದು ಸುದ್ದಿಯನ್ನು ಹಂಚಿಕೊಂಡಿದ್ದಾರೆ ನಿರ್ದೇಶಕ ಶ್ರೀನಿವಾಸ ರಾಜು.
ಇದನ್ನೂ ಓದಿ :ಇನಾಮ್ದಾರ್’ ನಿರ್ದೇಶಕನ ಅಪರೂಪದ ಕಥೆ ಹೊತ್ತ ಸಿನಿಮಾ ‘ಗುಂಮ್ಟಿ’
ಶ್ರೀನಿವಾಸ ರಾಜು ಸದ್ಯ ಸ್ಯಾಂಡಲ್ವುಡ್ನಲ್ಲಿಯೇ ಬಿಗ್ ಬಜೆಟ್ ಸಿನಿಮಾವೊಂದನ್ನು ಮಾಡುತ್ತಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ʻಕೃಷ್ಣಂ ಪ್ರಣಯ ಸಖಿʼ ಸಿನಿಮಾ ರಿಲೀಸ್ಗೆ ರೆಡಿಯಾಗಿದೆ. ಈ ಸಿನಿಮಾಗೆ ತ್ರಿಶೂಲ್ ಬ್ಯಾನರ್ನಡಿ ಜಿ ಪ್ರಶಾಂತ್ ರುದ್ರಪ್ಪ ನಿರ್ಮಾಣ ಮಾಡುತ್ತಿದ್ದಾರೆ. ಇದೀಗ ಅನೌನ್ಸ್ ಆಗಿರುವ ಅಯೋಧ್ಯೆಯ ರಾಮ ಮಂದಿರದ ಬಯೋಪಿಕ್ ಸಿನಿಮಾವನ್ನು ಪ್ರಶಾಂತ್ ಜಿ ರುದ್ರಪ್ಪ ಅವರೇ ನಿರ್ಮಾಣ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಮೂಲಕ ಇಬ್ಬರು ಸ್ನೇಹಿತರು ದಂಡುಪಾಳ್ಯ ಸಿನಿಮಾದಿಂದಾನೂ ಜೊತೆ ಜೊತೆಗೆ ಸಾಗುತ್ತಿದ್ದಾರೆ.
ಇದನ್ನೂ ಓದಿ :ಕನ್ನಡ ಹಿರಿಯ ನಟ ದ್ವಾರಕೀಶ್ ನಿಧನ
ಈ ಹೊಸ ವಿಚಾರದ ಬಗ್ಗೆ ಮಾತನಾಡಿದ ನಿರ್ದೇಶಕ ಶ್ರೀನಿವಾಸ್ ರಾಜು, ಬಾಬರಿ ಮಸೀದಿಗೂ ಮೊದಲು ರಾಜಾ ವಿಕ್ರಮಾದಿತ್ಯ ನಿರ್ಮಿಸಿದ ರಾಮ ಮಂದಿರದಿಂದ ಈ ಸಿನಿಮಾದ ಕಥೆ ಆರಂಭವಾಗುತ್ತದೆ. ಅದರ ಜೊತೆಗೆ ರಾಮಾಯಣದ ಕೆಲವು ಅಂಶಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ಹಾಗಂತ, ಇದು ಸಂಪೂರ್ಣ ರಾಮಾಯಣದ ಕಥೆಯಲ್ಲ. ದಶರಥ ಮಹಾರಾಜ, ಶ್ರೀರಾಮ, ಸೀತಾ, ಹನುಮಂತ, ವಾಲಿ ಮತ್ತು ವಾಲ್ಮೀಕಿ ಈ ಆರು ಪಾತ್ರಗಳು ಮಾತ್ರ ಇರುತ್ತವೆ.
ತುಳಿಸಿದಾಸರ ಪಾತ್ರ ಕೂಡ ನಮ್ಮ ಸಿನಿಮಾದಲ್ಲಿ ಇರಲಿದೆ. ಪ್ರಭು ಶ್ರೀರಾಮನ ಆದರ್ಶದ ಗುಣಗಳನ್ನು ಈ ಚಿತ್ರದಲ್ಲಿ ತೋರಿಸಲಾಗುತ್ತದೆ. ನಮ್ಮ ಸಿನಿಮಾವನ್ನು ಬಹಳ ಅದ್ದೂರಿಯಾಗಿ ನಿರ್ಮಾಣ ಮಾಡುವುದಕ್ಕೆ ಪ್ಲ್ಯಾನ್ ಮಾಡಿಕೊಂಡಿದ್ದೇವೆ. ಭಾರತದ ಹೆಸರಾಂತ ಕಲಾವಿದರು ಹಾಗೂ ತಂತ್ರಜ್ಞರು ಈ ಬಯೋಪಿಕ್ಗಾಗಿ ಕೆಲಸ ಮಾಡಲಿದ್ದಾರೆ. ಶ್ರೀ ರಾಮ ನವಮಿಯ ಈ ಸಂದರ್ಭದಲ್ಲಿ ಮಾಹಿತಿ ಹಂಚಿಕೊಂಡಿದ್ದೇವೆ. ತಾರಾಬಳಗ ದೊಡ್ಡ ಮಟ್ಟದಲ್ಲಿ ಇರುತ್ತದೆ.
ವ್ಯಕ್ತಿಗಿಂತ ದೇವರು ದೊಡ್ಡವನು ಅಲ್ವಾ. ಅದಕ್ಕೆ ದೇವರ ಬಯೋಪಿಕ್ ಮಾಡಲು ಹೊರಟಿದ್ದೇನೆ. ಸದ್ಯ ಕೃಷ್ಣಂ ಪ್ರಣಯ ಸಖಿ ಸಿನಿಮಾ ರಿಲೀಸ್ಗೆ ರೆಡಿಯಾಗಿದೆ. ಸಿನಿಮಾ ರಿಲೀಸ್ ಆದಮೇಲೆ ಅಯೋಧ್ಯೆಯ ರಾಮಮಂದಿರ ಬಯೋಪಿಕ್ ಕೈಗೆತ್ತಿಕೊಳ್ಳುತ್ತೇನೆ ಎಂದಿದ್ದಾರೆ.