‘ಸಂಜು ವೆಡ್ಸ್ ಗೀತಾ’ ಜನರು ಮೆಚ್ಚಿದ ಕನ್ನಡದ ಸಿನಿಮಾ. 2011ರಲ್ಲಿ ತೆರೆಕಂಡಿದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲೂ ಜೋರಾಗಿಯೇ ಸದ್ದು ಮಾಡಿತ್ತು. ಮೋಹಕತಾರೆ ರಮ್ಯಾ ಹಾಗೂ ಶ್ರೀನಗರ ಕಿಟ್ಟಿ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿದ್ದ ಈ ಸಿನಿಮಾಗೆ ಇಂದಿಗೂ ದೊಡ್ಡ ಅಭಿಮಾನಿ ಬಳಗವೇ ಇದೆ. ನಾಗಶೇಖರ್ ನಿರ್ದೇಶನ, ಜೆಸ್ಸಿ ಗಿಫ್ಟ್ ಮ್ಯೂಸಿಕ್ ಸಿಕ್ಕಾಪಟ್ಟೆ ಮೋಡಿ ಮಾಡಿತ್ತು. ಈಗ ಸುಮಾರು 12 ವರ್ಷಗಳ ಬಳಿಕ ‘ಸಂಜು ವೆಡ್ಸ್ ಗೀತಾ’ ಸಿನಿಮಾದ ಸೀಕ್ವೆಲ್ ನಿರ್ಮಾಣ ಆಗುತ್ತಿದೆ. ಮೋಹಕತಾರೆ ರಮ್ಯಾ ಜಾಗದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಎಂಟ್ರಿ ಆಗಿದೆ.
ಇದನ್ನೂ ಓದಿ ಟ್ರೇಲರ್ ಮೂಲಕ ಗಮನ ಸೆಳೆಯುತ್ತಿರುವ “ಎಲೆಕ್ಟ್ರಾನಿಕ್ ಸಿಟಿ” ನವೆಂಬರ್ 24 ರಂದು ತೆರೆಗೆ .
ಶ್ರೀನಗರ ಕಿಟ್ಟಿ, ರಚಿತಾ ರಾಮ್ ಜೋಡಿಯ ‘ಸಂಜು ವೆಡ್ಸ್ ಗೀತಾ 2’ ಸಿನಿಮಾದ ಶೂಟಿಂಗ್ ಈಗಾಗಲೇ ಭರ್ಜರಿಯಾಗಿ ಆರಂಭ ಆಗಿದೆ. ಬೆಂಗಳೂರಿನಲ್ಲಿ ಶೂಟಿಂಗ್ ನಡೆಯುತ್ತಿದ್ದು, ರಚಿತಾ ರಾಮ್, ಶ್ರೀನಗರ ಕಿಟ್ಟಿ, ಸಾಧು ಕೋಕಿಲಾ, ಅರುಣ್ ಸಾಗರ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಶ್ರೀನಗರ ಕಿಟ್ಟಿ ಹಾಗೂ ರಚಿತಾ ರಾಮ್ ಇಬ್ಬರೂ ಸಿನಿಮಾ ಮಾಹಿತಿ ಹಂಚಿಕೊಂಡಿದ್ದಾರೆ. ಈ ವೇಳೆ ರಚಿತಾ ರಾಮ್ ಲಕ್ಕಿ ಚಾರ್ಮ್ ಅಂತ ಶ್ರೀ ನಗರ ಕಿಟ್ಟಿ ಹೇಳಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ ಅಡಿವಿ ಶೇಷ್ ಗೆ ಸಿಕ್ಕಳು ಜೋಡಿ…’ಗೂಢಚಾರಿ-2’ ಸಿನಿಮಾಗೆ ಬನಿತಾ ಸಂಧು ನಾಯಕಿ
“ನಮ್ಮೊಂದಿಗೆ ರಚಿತಾ ರಾಮ್ ಜಾಯಿನ್ ಆಗಿದ್ದಾರೆ. ಸುದೀಪ್ ಅವರು ಹೇಳಿದ ಹಾಗೆ ಶುಭ ಸಂಕೇತ. ಸುದೀಪ್ ಅವರು ರನ್ನ ಸಿನಿಮಾದ ವೇಳೆ ಹೇಳಿದ್ದರು. ಅವರು ಲಕ್ಕಿ ಹೀರೊಯಿನ್. ಅದರಿಂದ ಸಿನಿಮಾ ಗೆಲ್ತು ಅಂತ. ಅದೆಲ್ಲ ಗಾಡ್ ಗಿಫ್ಟ್. ಈ ಸಿನಿಮಾನೂ ತುಂಬಾನೇ ಪಾಸಿಟಿವ್ ಆಗಿದೆ.” ಎಂದು ಶ್ರೀನಗರ ಕಿಟ್ಟಿ ಪತ್ರಿಕಾಗೋಷ್ಠಿಯಲ್ಲಿ ರಚಿತಾ ರಾಮ್ ಅವರನ್ನು ಹೊಗಳಿ ಅಟ್ಟಕ್ಕೇರಿಸಿದ್ದಾರೆ. “ಸತ್ಯ ಹೇಳಿದ ಹಾಗೆ ಫಸ್ಟ್ ಪಾರ್ಟ್ ಮಾಡಿದಾಗ, ಈ ಸಿನಿಮಾ ಮಾಡಿದಾಗ ಒಂದಷ್ಟು ಬದಲಾವಣೆಗಳಾಗಿವೆ. ಟೆಕ್ನಾಲಜಿ ಆಗಬಹುದು. ಸ್ಕ್ರಿಪ್ಟ್ ಆಗಬಹುದು. ಮೇಕಿಂಗ್ ಲೆವೆಲ್‌ನಲ್ಲಿ ಆಗಬಹುದು. ಅವರು ತೆಗೆಯುತ್ತಿರುವ ಶಾರ್ಟ್ಸ್ ಆಗಿರಬಹುದು ಪ್ರತಿಯೊಂದು ಬದಲಾವಣೆಯಾಗಿದೆ. ತುಂಬಾನೇ ಫ್ರೆಶ್ ನರೇಶನ್ ಇದೆ ಈ ಸಿನಿಮಾದಲ್ಲಿ.” ಎಂದು ಶ್ರೀನಗರ ಕಿಟ್ಟಿ ಹೇಳಿದ್ದಾರೆ.
ಇದನ್ನೂ ಓದಿ ‘ಡಂಕಿ’ ಡೈರೆಕ್ಟರ್ ಗಿಂದು ಹುಟ್ಟುಹಬ್ಬದ ಸಂಭ್ರಮ….ರಾಜ್ ಕುಮಾರ್ ಹಿರಾನಿ ಜನ್ಮದಿನಕ್ಕೆ ಹರಿದು ಬಂದ ಶುಭಾಶಯಗಳ ಮಹಾಪೂರ
ಒಂದೇ ಸ್ಟ್ರೆಚ್‌ನಲ್ಲಿ ‘ಸಂಜು ವೆಡ್ಸ್ ಗೀತಾ 2’ ಸಿನಿಮಾವನ್ನು ಶೂಟಿಂಗ್ ಮಾಡಲಾಗುತ್ತಿದೆ. ಏಪ್ರಿಲ್ 1ರಂದು ಸಿನಿಮಾ ರಿಲೀಸ್ ಮಾಡಬೇಕು ಅಂತ ಚಿತ್ರತಂಡ ಸಿದ್ಧತೆಗಳು ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಹಾಡಿನ ಒಂದು ಝಲಕ್ ಸಂಗೀತ ಪ್ರಿಯರಿಗೆ ಕಿಕ್ ಕೊಟ್ಟಿದೆ. ಶ್ರೀಧರ್ ವಿ ಸಂಭ್ರಮ್ ಸಂಗೀತ ಸಂಯೋಜಿಸಿದ್ದ ಟ್ಯೂನ್‌ನ ಝಲಕ್ ಎಲ್ಲರಿಗೂ ಇಷ್ಟ ಆಗಿದೆ.