ನಟ ಶ್ರೀಮುರುಳಿ ಪದೇ ಪದೇ ಒಂದೇ ಕಾಲಿಗೆ ಪೆಟ್ಟು ಮಾಡಿಕೊಳ್ಳುತ್ತಿದ್ದಾರೆ. ಶೂಟಿಂಗ್ ವೇಳೆ ಮತ್ತೆ ಕಾಲಿಗೆ ಪೆಟ್ಟು ಮಾಡಿಕೊಂಡು, ಇದೀಗ ಆಸ್ಪತ್ರೆ ಸೇರಿದ್ದಾರೆ. ಬಘೀರ ಸಿನಿಮಾದಲ್ಲಿ ಶ್ರೀಮುರಳಿ ನಟಿಸುತ್ತಿದ್ದು, ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡುತ್ತಿರುವ ಸಿನಿಮಾ. ಸಿಕ್ಕಾಪಟ್ಟೆ ನಿರೀಕ್ಷೆ ಇರುವಂತ ಚಿತ್ರ, ಈ ಚಿತ್ರದ ಶೂಟಿಂಗ್ ಕೂಡ ಭರದಿಂದ ಸಾಗ್ತಿತ್ತು. ಆದ್ರೆ, ಶೂಟಿಂಗ್ನ ನಡುವೆಯೇ ಚಿತ್ರಕ್ಕೆ ಬಿಗ್ ಶಾಕ್ ಎದುರಾಗಿದೆ. ನಾಯಕ ನಟ ಶ್ರೀಮುರಳಿ ಆಸ್ಪತ್ರೆ ಸೇರುವಂತಾಗಿದೆ.
ಈ ಟೀಸರ್ ರಿಲೀಸ್ನಿಂದ ರೋರಿಂಗ್ ಸ್ಟಾರ್ ಶ್ರೀ ಮುರಳಿ ನಟನೆಯ ಬಘೀರ ಚಿತ್ರ ಸಖತ್ ಹೈಪ್ ಕ್ರಿಯೇಟ್ ಮಾಡಿತ್ತು. ನಿರೀಕ್ಷೆಯನ್ನೂ ಹುಟ್ಟಿಸಿತ್ತು. ಚಿತ್ರೀಕರಣವೂ ಭರದಿಂದ ಸಾಗ್ತಿತ್ತು. ಈ ವೇಳೆ ಅವಘಡವೊಂದು ಸಂಭವಿಸಿದೆ. ಚಿತ್ರದ ನಾಯಕ ನಟ ಶ್ರೀಮುರಳಿ ಗಾಯಗೊಂಡು ಆಸ್ಪತ್ರೆ ಸೇರುವಂತಾಗಿದೆ.ಬಘೀರ ಚಿತ್ರದ ಶೂಟಿಂಗ್ ವೇಳೆ ನಟ ಶ್ರೀಮುರಳಿ ಕಾಲಿಗೆ ಪೆಟ್ಟಾಗಿದೆ. ಫೈಟಿಂಗ್ ಸೀನ್ ಚಿತ್ರೀಕರಿಸುವ ವೇಳೆ ಶ್ರೀಮುರಳಿ ಕಾಲಿಗೆ ಗಾಯವಾಗಿದೆ.
ಎಡ ಗಾಲಿಗೆ ಗಂಭೀರ ಗಾಯವಾಗಿದ್ರೆ ಕೈಗೂ ಸಣ್ಣ ಪೆಟ್ಟು ಆಗಿದೆ. ಮೈಸೂರಿನಲ್ಲಿ ಬಘೀರ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಈ ವೇಳೆ ಅವಘಡ ಸಂಭವಿಸಿದೆ. ಸದ್ಯ ಗಾಯಗೊಂಡಿರೋ ಶ್ರೀಮುರಳಿಯನ್ನ ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ.
ಬಘೀರ ಸಿನಿಮಾದ ಬಹು ದೊಡ್ಡ ಸ್ಟಂಟ್ ಸೀನ್ ಶೂಟಿಂಗ್ ಮಾಡಲಾಗುತ್ತಿತ್ತು. ಈ ವೇಳೆ ರೋರಿಂಗ್ ಸ್ಟಾರ್ ಶ್ರೀಮುರಳಿ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದು, ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಪದೇ ಪದೆ ಪೆಟ್ಟು ಮಾಡಿಕೊಳ್ತಿರೋದು ಆತಂಕವನ್ನ ಹೆಚ್ಚಾಗಿಸಿದೆ. ಸದ್ಯ ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಶ್ರೀಮುರಳಿಗೆ ಚಿಕಿತ್ಸೆ ಕೊಡಿಸಲಾಗ್ತಿದ್ದು, ಬೇಗ ಗುಣಮುಖರಾಗಲಿ ಅಂತಾ ಫ್ಯಾನ್ಸ್ ಹಾರೈಸ್ತಿದ್ದಾರೆ.