ನಂದಮೂರಿ ಬಾಲಕೃಷ್ಣ ಸಿನಿಮಾದಲ್ಲಿ `ಭರಾಟೆ’ ಬೆಡಗಿ ಶ್ರೀಲೀಲಾ
ಸ್ಯಾಂಡಲ್ವುಡ್ ಬ್ಯೂಟಿ ಶ್ರೀಲೀಲಾಗೆ ಟಾಲಿವುಡ್ ಸೂಪರ್‌ಸ್ಟಾರ್ ನಂದಮೂರಿ ಬಾಲಕೃಷ್ಣ ಜೊತೆ ನಟಿಸುವ ಅದೃಷ್ಟ ಖುಲಾಯಿಸಿದೆ. ಸ್ಯಾಂಡಲ್ವುಡ್ ಮಾತ್ರವಲ್ಲದೇ ಪರಭಾಷೆಯಿಂದಲೂ ಸಾಲು ಸಾಲು ಸಿನಿಮಾಗಳಿಗೆ ಆಫರ್‌ಗಳು ಅರಸಿ ಬರುತ್ತಿದೆ.
ಕಿಸ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್‌ಗೆ ಕಾಲಿಟ್ಟ ಶ್ರೀಲೀಲಾ ಬಳಿಕ ಭರಾಟೆ ಸಿನಿಮಾ ಮೂಲಕ ಶ್ರೀಮುರಳಿ ಜೊತೆ ಮಿಂಚಿದರು. ಈ ಎರಡು ಸಿನಿಮಾಗಳು ಶ್ರೀಲೀಲಾಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತು. ನಂತರ ಬೈ ಟು ಲವ್ ಸಿನಿಮಾ ಮೂಲಕ ಮತ್ತೆ ಕನ್ನಡಿಗರ ಮುಂದೆ ಬಂದರು. ತೆಲುಗಿನ ಲೆಜೆಂಡರಿ ಡೈರೆಕ್ಟರ್ ರಾಘವೇಂದ್ರ ರಾವ್ ಅವರ `ಪೆಳ್ಳಿ ಸಂದಡಿ’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಶ್ರೀಲೀಲಾ ನಟಿಸಿದ ಮೊದಲ ಚಿತ್ರದಲ್ಲೇ ಇವರ ನಟನೆಗೆ ಅಭಿಮಾನಿಗಳು ಫುಲ್ ಮಾರ್ಕ್ಸ್ ಕೊಟ್ರು. ಈಗ ನಂದಮೂರಿ ಬಾಲಕೃಷ ಅವರ ಜೊತೆ ನಟಿಸೋದಕ್ಕೆ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ.ಸೂಪರ್ ಸ್ಟಾರ್ ನಂದಮೂರಿ ಬಾಲಯ್ಯ ಅವರಿಗೆ `ಸರಿಲೇರು ನೀಕೆವ್ವರು’ ಖ್ಯಾತಿಯ ಅನಿಲ್ ರವಿಪುಡಿ ನಿರ್ದೇಶನ ಮಾಡ್ತಿದ್ದಾರೆ. ಡಿಫರೆಂಟ್ ಕಥೆಯಲ್ಲಿ ವಯೋವೃದ್ಧನ ಪಾತ್ರಕ್ಕೆ ಬಾಲಯ್ಯ ಜೀವ ತುಂಬ್ತಿದ್ದಾರೆ. ಈ ಚಿತ್ರದಲ್ಲಿ ಬಾಲಯ್ಯಗೆ ಮಗಳ ರೋಲ್‌ನಲ್ಲಿ ಶ್ರೀಲೀಲಾ ಮಿಂಚಲಿದ್ದಾರೆ. ಬಾಲಯ್ಯ ಈ ಚಿತ್ರದ ಹೈಲೆಟ್ ಆಗಿದ್ದು, ಪ್ರಮುಖ ಪಾತ್ರದಲ್ಲಿ ಭರಾಟೆ ಬ್ಯೂಟಿ ಶ್ರೀಲೀಲಾ ಕಾಣಿಸಿಕೊಳ್ತಿದ್ದಾರೆ.
ಇನ್ನು ಶ್ರೀಲೀಲಾ ಲಿಸ್ಟ್‌ನಲ್ಲಿ, ನವೀನ್ ಪೋಲಿಶೆಟ್ಟಿ ಜತೆ `ಜಾತಿರತ್ನಾಲು’, ರವಿತೇಜಾ ಜತೆ `ಧಮಾಕ’, ವೈಷ್ಣವ್ ತೇಜ್ ಜತೆ ಹೊಸ ಪ್ರಾಜೆಕ್ಟ್, ಮತ್ತು ಮಹೇಶ್ ಬಾಬು ಚಿತ್ರದಲ್ಲೂ ಕಿಸ್ ನಟಿ ಕಾಣಿಸಿಕೊಳ್ಳಲಿದ್ದಾರೆ. ಒಟ್ನಲ್ಲಿ ಕನ್ನಡದ ನಟಿ ಪರಭಾಷಾ ಚಿತ್ರಗಳಲ್ಲೂ ಸುದ್ದಿ ಮಾಡ್ತಿರೋದು ನೋಡಿ ಫ್ಯಾನ್ಸ್ ಥ್ರಿಲ್ ಅಗಿದ್ದಾರೆ. ಶ್ರೀಲೀಲಾ ಕನ್ನಡದಲ್ಲಿ ಯಾವ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸ್ಯಾಂಡಲ್ವುಡ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.