ಸ್ನೇಹಿತರೆ, ಕನ್ನಡ ಸಿನಿಮಾ ರಂಗದ ಮೂಲಕ ತಮ್ಮ ನಟನೆಯ ಚಾಪು ಎಂತದ್ದು ಎಂಬುದನ್ನು ಜನರ ಮುಂದೆ ತೋರ್ಪಡಿಸಿ ಬಹುದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದ ನಂತರ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕೊಡನೆ ಕನ್ನಡ ಸಿನಿಮಾ ರಂಗವನ್ನು ತೊರೆದು ಇಂದು ಬೇರೆ ಭಾಷೆಗಳ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವಂತಹ ಸಾಕಷ್ಟು ನಟ ನಟಿಯರನ್ನು ನೋಡಿದ್ದೇವೆ.ಈಗ ಈ ಪಟ್ಟಿಗೆ ಕಿಸ್ ನಾಯಕಿ ಶ್ರೀಲೀಲಾ ಕೂಡ ಸೇರ್ಪಡೆಯಾಗಿದ್ದು, ಅದಾಗಲೇ ತೆಲುಗಿನ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.ಹೀಗಿರುವಾಗ ಟಾಲಿವುಡ್ ಕಿಸ್ ಕಿಂಗ್ ವಿಜಯ್ ದೇವರಕೊಂಡ ಅವರೊಂದಿಗೆ ಮುಂದಿನ ಸಿನಿಮಾದಲ್ಲಿ ನಟಿ ಶ್ರೀಲೀಲಾ ಅಭಿನಯಿಸೋಕೆ ಸಜ್ಜಾಗುತ್ತಿದ್ದು, ಬಾರಿ ಸಂಭಾವನೆಯನ್ನೇ ಡಿಮ್ಯಾಂಡ್ ಮಾಡಿರುವ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.
ಹೌದು ಗೆಳೆಯರೇ ನಟ ವಿಜಯ್ ದೇವರಕೊಂಡ ರಶ್ಮಿಕಾ ಮಂದಣ್ಣ ಅವರೊಂದಿಗೆ ನಟಿಸಿದ್ದ ಗೀತಾ ಗೋವಿಂದಂ ಮತ್ತು ಡಿಯರ್ ಕಾಮ್ರೇಡ್ ಎಂಬ ಸಿನಿಮಾದ ಮೂಲಕ ಟಾಲಿವುಡ್ನಲ್ಲಿ ಬಾರಿ ಬೇಡಿಕೆಯನ್ನು ಪಡೆದುಕೊಂಡಿದ್ದರು. ಆದರೆ ಈ ಸಿನಿಮಾಗಳಾದ ಬಳಿಕ ವಿಜಯ್ ಅವರಿಂದ ಯಾವುದೇ ಹೇಳಿಕೊಳ್ಳುವಂತಹ ಯಶಸ್ವಿ ಸಿನಿಮಾಗಳು ಬರಲಿಲ್ಲ. ಅಲ್ಲದೆ ಬಹುಕೋಟಿ ವೆಚ್ಚದಲ್ಲಿ ತಯಾರು ಮಾಡಲಾದ ಲೈಗರ್ ಸಿನಿಮಾ ಕೂಡ ನೆಲಕಚ್ಚಿತ್ತು.
*ಕನಸಿನ ರಾಣಿ ಮಾಲಾಶ್ರೀ ನಟನೆಯ ಕೆಂಡದ ಸೆರಗು ಸಿನಿಮಾದ ಎರಡನೇ ಹಾಡು ರಿಲೀಸ್…ಈ ಹುಡುಗಿ ಎಷ್ಟು ಚೆಂದ ಎಂದಿದ್ಯಾರು?*
ಹೀಗೆ ಬ್ಯಾಕ್ ಟು ಬ್ಯಾಕ್ ಸೋಲನ್ನು ಕಾಣುತ್ತಿರುವ ವಿಜಯ್ ಸದ್ಯ ನಟಿ ಸಮಂತಾ ಋತು ಪ್ರಭು ಅವರೊಂದಿಗೆ ಖುಷಿ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಸಿನಿಮಾದ ಎರಡನೇ ಹಂತದ ಶೂಟಿಂಗ್ ಕೆಲಸಗಳು ಮುಗಿಯುವ ಹಂತಕ್ಕೆ ಬಂದು ಕೆಲವೇ ಕೆಲವು ದಿನಗಳಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ.’ಇದರ ಬೆನ್ನಲ್ಲೇ ವಿಜಯ್ ದೇವರಕೊಂಡ ಸದ್ಯ ಶಾಹಿದ್ ಕಪೂರ್ ಮತ್ತು ಮೃಣಾಲ್ ಠಾಕೂರ್ ಅವರ ಜರ್ಸಿ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದ ಗೌತಮ ತಿನ್ನನೂರಿ ಎಂಬುವರೊಂದಿಗೆ ಮುಂದಿನ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ..
ಈ ಸಿನಿಮಾಗೆ ಕನ್ನಡದ ಸ್ಟಾರ್ ನಟಿ ಶ್ರೀಲೀಲಾ ಅಭಿನಯಸಲಿರುವ ಮಾಹಿತಿ ಹೊರಬಂದಿದ್ದು, ಸಿನಿಮಾದ ಮುಹೂರ್ತದ ಕಾರ್ಯಕ್ರಮವು ಜರುಗಿದೆ. ಹೌದು ಗೆಳೆಯರೇ ಪೆಳ್ಳಿ ಸಂದಡು ಎಂಬ ಸಿನಿಮಾದ ಮೂಲಕ ತೆಲುಗಿಗೆ ಕಾಲಿಟ್ಟ ಶ್ರೀಲೀಲಾ ಅನಂತರ ರವಿತೇಜ ಅವರೊಂದಿಗಿನ ಧಮಾಕ ಸಿನಿಮಾದಲ್ಲಿ ಅಭಿನಯಿಸುವಂತಹ ಅವಕಾಶ ಗಿಟ್ಟಿಸಿಕೊಂಡು ಮಿಂಚಿದರು.ಇದೀಗ ವಿಜಯ್ ದೇವರಕೊಂಡ ಅವರೊಂದಿಗೆ ಅಭಿನಯಿಸಲಿದ್ದಾರೆ ಎಂಬ ಮಾಹಿತಿ ಹೊರ ಬರುತ್ತಾ ಇದ್ದ ಹಾಗೆ ಅಭಿಮಾನಿಗಳು ಇವರ ಮೇಲಿಟ್ಟಿರುವಂತಹ ನೀರಿಕ್ಷೆ ದುಪ್ಪಟ್ಟಾಗುತ್ತಿದೆ. ಇನ್ನು ತೆಲುಗಿನ ಮೂರನೇ ಸಿನಿಮಾದಲ್ಲಿ ಅಭಿನಯಿಸಲು ನಟಿ ಶ್ರೀಲೀಲಾ ದುಬಾರಿ 1. 7 ಕೋಟಿ ಸಂಭಾವನೆಯನ್ನು ಡಿಮ್ಯಾಂಡ್ ಮಾಡಿದ್ದಾರೆ ಎಂಬ ಮಾಹಿತಿಯು ಮೂಲಗಳಿಂದ ತಿಳಿದುಬಂದಿದೆ.