ಕನ್ನಡ ಚಿತ್ರರಂಗದಿಂದ ಟಾಲಿವುಡ್ ಗೆ ಹಾರಿದವರಲ್ಲಿ ಶ್ರೀಲೀಲಾ ಕೂಡಾ ಒಬ್ಬರು. ಧಮಾಕಾ ಚಿತ್ರದ ಮೂಲಕ ರವಿತೇಜಾ ಜೊತೆ ಟಾಲಿವುಡ್ಗೆ ಧಮಾಕೇಧಾರ್ ಎಂಟ್ರಿ ಕೊಟ್ಟಿದ್ದ ಶ್ರೀಲೀಲಾ , ಕೇವಲ ಒಂದೂವರೆ ವರ್ಷದಲ್ಲಿಯೇ ಅರ್ಧ ಡಜನ್ ತೆಲುಗು ಹೀರೋಗಳ ಜೊತೆ ಕಾಣಿಸಿಕೊಂಡು ದಾಖಲೆ ಬರೆದರು.
ಕಳೆದ ಕೆಲ ದಿನಗಳಿಂದ.. ತಮ್ಮ ಚಿತ್ರ ಚಟುವಟಿಕೆಗಳಿಗೆ ಅಲ್ಪ ವಿರಾಮ ಹಾಕಿದ್ದರು. ಸೋಲುಗಳಿಂದ ಪಾಠ ಕಲಿತು ಲೆಕ್ಕ ಹಾಕಿ ಚಿತ್ರ ಆಯ್ಕೆ ಮಾಡಿಕೊಳ್ಳಲು ಮುಂದಾದರು. ಆ ಪೈಕಿ ಈಗ ರವಿತೇಜಾ ಜೊತೆ ಇನ್ನೊಂದು ಚಿತ್ರವನ್ನ ಶ್ರೀಲೀಲಾ ಮಾಡುತ್ತಿದ್ದಾರೆ.
ಶ್ರೀಲೀಲಾ ಈಗ ಟಾಲಿವುಡ್ಡಿಗೂ ಟಾಟಾ ಹೇಳಿ ಬಾಲಿವುಡ್ನ ಹೋಗಲು ಸಿದ್ಧರಾಗಿದ್ದಾರೆ. ಶ್ರೀಲೀಲಾಗೆ ಹೀರೋ ಆಗ್ತಿರುವುದು ಸೈಫ್ ಅಲಿಖಾನ್ ಮಗ ಅನ್ನೋದು ವಿಶೇಷ. ಬಾಲಿವುಡ್ನ ಚೋಟೆ ನವಾಬ್ ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಅಲಿ ಖಾನ್ ಕೂಡ ಬಣ್ಣದ ಪ್ರಪಂಚಕ್ಕೆ ಬರಲು ಸಕಲ ತಯಾರಿಗಳನ್ನ ಮಾಡಿಕೊಂಡು ಸಿದ್ಧರಾಗಿದ್ದಾರೆ.
ಡೈಲರ್ ಎಂಬ ಚಿತ್ರವನ್ನ ಒಪ್ಪಿಕೊಂಡು ಈ ಆಗಸ್ಟ್ನಿಂದ ಅಖಾಡಕ್ಕಿಳಿಯಲಿದ್ದಾರೆ. ಇದೇ ಚಿತ್ರಕ್ಕೆ ಶ್ರೀಲೀಲಾ ನಾಯಕಿ ಅನ್ನುವ ಸುದ್ದಿ ಸದ್ಯಕ್ಕೆ ಗುಲ್ಲಾಗಿದೆ.
ಸೈಫ್- ಅಮೃತಾ ದಂಪತಿ ಮಗಳು ಸಾರಾ ಅಲಿ ಖಾನ್ ಈಗಾಗಲೇ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೀಗಾಗಿಯೇ ಕ್ರಿಕೆಟ್ ಲೋಕದಲ್ಲಿ ಒಂದು ಕೈ ನೋಡಿಯೇ ಬಿಡೋಣ ಎಂಬ ತೀರ್ಮಾನಕ್ಕೆ ಇಬ್ರಾಹಿಂ ಬಂದಿದ್ದಾರೆ. ಕ್ರಿಕೆಟ್ ಕೈ ಹಿಡಿಯದಿದ್ದರೆ ಬಣ್ಣದ ಲೋಕದಲ್ಲಿ ಅದೃಷ್ಟ ಪರೀಕ್ಷೆಗಿಳಿಯಲು ನವಾಬ ಕುಡಿ ಪ್ಲ್ಯಾನ್ ಮಾಡಿಕೊಂಡಿದ್ದಾರೆ ಎಂಬೆಲ್ಲ ಸುದ್ದಿ ಕೇಳಿ ಬಂದಿತ್ತು.ಅದೃಷ್ಟ ಅಲ್ಲಿ ಕೈಹಿಡಿಯಲಿಲ್ಲವಾ ಗೊತ್ತಿಲ್ಲ.
ಆದರೆ ಸದ್ಯಕ್ಕೆ ಇಬ್ರಾಹಿಂ ಮೈದಾನದ ಹೊರ ಬಂದು ಚಿತ್ರರಂಗ ಎಂಬ ಮಾಯಾಪ್ರಪಂಚಕ್ಕೆ ಬರಲು ಸಿದ್ಧರಾಗಿದ್ದಾರೆ ಉಳಿದಂತೆ ಈ ಸೈಫ್ ಅಲಿ ಖಾನ್ ಮಗ ಇಬ್ರಾಹಿಂ ಅಲಿ ಖಾನ್ ಮತ್ತು ಶ್ರೀಲೀಲಾ ಅಭಿನಯದ ಈ ಚಿತ್ರಕ್ಕೆ ನಿರ್ದೇಶಕ ಯಾರು, ನಿರ್ಮಾಪಕ ಯಾರು ಎಂಬ ಪ್ರಶ್ನೆಗಳಿಗೆ ಉತ್ತರ ಇನ್ನೂ ಸಿಕ್ಕಿಲ್ಲ. ಹರಿದಾಡುತ್ತಿರುವ ಈ ಸುದ್ದಿಯ ಕುರಿತು ಶ್ರೀಲೀಲಾ ಕೂಡ ಇನ್ನೂ ಏನು ಮಾತನಾಡಿಲ್ಲ.