Left Ad
ತೆಲುಗಿನಲ್ಲಿ ಸಕ್ಸಸ್ ಸಿಕ್ಕ ಬೆನ್ನಲ್ಲೇ ಶ್ರೀಲೀಲಾ ಮೇಲೆ ಕಿರಿಕ್ ಆರೋಪ - Chittara news
# Tags

ತೆಲುಗಿನಲ್ಲಿ ಸಕ್ಸಸ್ ಸಿಕ್ಕ ಬೆನ್ನಲ್ಲೇ ಶ್ರೀಲೀಲಾ ಮೇಲೆ ಕಿರಿಕ್ ಆರೋಪ

ಕನ್ನಡತಿ ನಟಿ ಶ್ರೀಲೀಲಾ ತೆಲುಗಿನಲ್ಲಿ ಈಗ ಬಿಗ್ ಸ್ಟಾರ್ ಗಳಿಗೆ ನಾಯಕಿಯಾಗುವ ಅವಕಾಶ ಪಡೆಯುವ ಮೂಲಕ ಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ.ಆದರೆ ಈ ನಡುವೆ ಶ್ರೀಲೀಲಾ ಮೇಲೆ ಸಿನಿಮಾ ಪ್ರಚಾರಕ್ಕೆ ಬರದ ಆರೋಪವೊಂದು ಬಂದಿದೆ. ಶ್ರೀಲೀಲಾ-ವೈಷ್ಣವ್ ತೇಜ್ ಜೊತೆಯಾಗಿ ನಟಿಸಿರುವ ಆದಿಕೇಶವ ಸಿನಿಮಾ ಬಿಡುಗಡೆಯಾಗುತ್ತಿದೆ. ಆದರೆ ಚಿತ್ರದ ಪ್ರಚಾರಕ್ಕೆ ಶ್ರೀಲೀಲಾ ಬರುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ ರಣ್‌ಬೀರ್ ಕಪೂರ್‌ನೊಂದಿಗಿನ ರಹಸ್ಯ ಬಿಚ್ಚಿಟ್ಟ ದೀಪಿಕಾ ಪಡುಕೋಣೆ

ಸದ್ಯಕ್ಕೆ ಪ್ರಿನ್ಸ್ ಮಹೇಶ್ ಬಾಬು, ಅಲ್ಲು ಅರ್ಜುನ್ ರಂತಹ ಬಿಗ್ ಸ್ಟಾರ್ ಗಳ ಸಿನಿಮಾದಲ್ಲಿ ಅವಕಾಶ ಪಡೆದಿರುವ ಶ್ರೀಲೀಲಾ ದೊಡ್ಡ ಬ್ಯಾನರ್ ಗಳ ಸಿನಿಮಾ ಸಿಕ್ಕಿದೆಯೆಂದು ಬೇರೆಯವರನ್ನು ಅಲಕ್ಷಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಹಾಗಿದ್ದರೂ ಸಿನಿಮಾ ಗೆಲ್ಲುತ್ತದೆ ಎಂಬ ವಿಶ್ವಾಸದಲ್ಲಿ ಚಿತ್ರತಂಡವಿದೆ.ಶ್ರೀಲೀಲಾ ಇದೀಗ ತೆಲುಗಿನಲ್ಲಿ ಲಕ್ಕಿ ಹೀರೋಯಿನ್. ಆಕೆಯಿದ್ದರೆ ಸಿನಿಮಾ ಗೆಲ್ಲುತ್ತದೆ ಎಂಬುದು ಸ್ಟಾರ್ ಗಳ ನಂಬಿಕೆ. ಹೀಗಾಗಿ ಆಕೆ ಬಗ್ಗೆ ಏನೇ ಆರೋಪಗಳಿದ್ದರೂ ಸ್ಟಾರ್ ನಟರೇ ಆಕೆಯ ಹಿಂದೆ ಬಿದ್ದಿರುವುದು ಸುಳ್ಳಲ್ಲ.

Spread the love
Translate »
Right Ad