Sandalwood Leading OnlineMedia

ಸನ್ಮಾನ್ಯ ಸಚಿವರಿಂದ ವ್ಯೋಮಕಾಯ ಸಿದ್ದ “ಶ್ರೀಅಲ್ಲಮಪ್ರಭು” ಚಿತ್ರದ ಟೀಸರ್ ಬಿಡುಗಡೆ.

ಸನ್ಮಾನ್ಯ ಸಚಿವರಿಂದ ವ್ಯೋಮಕಾಯ ಸಿದ್ದ “ಶ್ರೀಅಲ್ಲಮಪ್ರಭು” ಚಿತ್ರದ ಟೀಸರ್ ಬಿಡುಗಡೆ.

ಅಮರಜ್ಯೋತಿ ಪಿಕ್ಚರ್ಸ್ ಸಂಸ್ಥೆಯ ಅಡಿಯಲ್ಲಿ ನಿರ್ಮಾಣಗೊಂಡಿರುವ 12ನೇ ಶತಮಾನದ ಇತಿಹಾಸವುಳ್ಳ ವ್ಯೋಮಕಾಯ ಸಿದ್ಧ “ಶ್ರೀ ಅಲ್ಲಮ ಪ್ರಭು” ಚಲನಚಿತ್ರದ ಟೀಸರ್ ಅನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರಾದ ಸನ್ಮಾನ್ಯ ಮುರಗೇಶ್ ನಿರಾಣಿ ಯವರು ಬಿಡುಗಡೆ ಮಾಡಿದರು.ಶ್ರೀ ಶಂಕರ ಬಿದರಿ ನಿವೃತ್ತ ಪೋಲಿಸ್ ಮಹಾನಿರ್ದೇಶಕರು ಶುಭ ಹಾರೈಸಿದರು.

ಈ ಚಿತ್ರದ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ವಿಷಯ ಸಂಗ್ರಹಿಸಿ, ಕಥೆ ಹಾಗೂ ಸಂಭಾಷಣೆ ಬರೆದಿರುವ ಮಾಧವಾನಂದ ಯೋ ಶೇಗುಣಿಸಿ, ನಿರ್ಮಾಣ ಕೂಡ ಮಾಡಿದ್ದಾರೆ. ಶ್ರೀ ಮಹಾವೀರ ಪ್ರಭುರವರು ಮಾಧವಾನಂದ ಅವರಿಗೆ ನಿರ್ಮಾಣಕ್ಕೆ ಜೊತೆಯಾಗಿದ್ದಾರೆ.

ಚಿತ್ರದ ತಾರಾಬಳಗದಲ್ಲಿ ಸಚಿನ್ ಸುವರ್ಣ, ನಿನಾಸಂ ಅಶ್ವಥ್, ರಮೇಶ ಪಂಡಿತ್, ಗಣೇಶ ರಾವ್ ಕೇಸರ್ಕರ್ ,ನಾರಾಯಣ ಸ್ವಾಮಿ, ವಿಕ್ರಂ ಸೂರಿ, ರಘು ಭಟ್,ಯತೀರಾಜ್, ಶೃಂಗೇರಿ ರಾಮಣ್ಣ, ಶಿವಮೊಗ್ಗ ಭಾಸ್ಕರ್, ಕಾವೇರಿ ಶ್ರೀಧರ್, ಶಿವಕುಮಾರ್ ಆರಾಧ್ಯ, ಡಾ. ಚಿಕ್ಕಹೆಜ್ಜಾಜಿ ಮಹಾದೇವ, ಸಂದೇಶ ರಾಜ್, ಸಂದೀಪ್ ಮಲಾನಿ, ಗುಬ್ಬಿ ನಟರಾಜ್ ಮುಂತಾದವರಿದ್ದಾರೆ.

ಈ ಚಿತ್ರಕ್ಕೆ ಚಿತ್ರರಂಗದಲ್ಲಿ ಹಲವು ಖ್ಯಾತ ನಿರ್ದೇಶಕರ ಜೊತೆ ಕೆಲಸ ಮಾಡಿದ ಅನುಭವಿ ಶರಣ್ ಗದ್ವಾಲ್ ರವರು ಆಕ್ಷನ್ ಕಟ್ ಹೇಳಿದ್ದಾರೆ, ಕಥೆ, ಚಿತ್ರಕಥೆ, ಪರಿಕಲ್ಪನೆ ಮಾಧವಾನಂದ y.
ಆರ್ ಗಿರಿ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ರವಿಶಂಕರ್ ಹಾಗೂ ಮಾಧವಾನಂದ ಸೇರಿ ಸಂಭಾಷಣೆ ಬರೆದಿದ್ದಾರೆ, ಕುಮಾರ್ ಈಶ್ವರ್ ಸಂಗೀತ ನೀಡಿದ್ದಾರೆ. ಬಿ. ಎಸ್. ಕೆಂಪರಾಜ್ ಈ ಚಿತ್ರದ ಸಂಕಲನಕಾರರು.
ಶುಕ್ರ ಫಿಲಂಸ್ ಸೋಮಣ್ಣರವರು ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.

 

Share this post:

Related Posts

To Subscribe to our News Letter.

Translate »