ವಿಜಯ ರಾಘವೇಂದ್ರ ಪತ್ನಿ ಸ್ಪಂದನ ಇನ್ನಿಲ್ಲಾ
ಸ್ಪಂದನ ಹಿರಿಯ ಪೊಲೀಸ್ ಅಧಿಕಾರಿ ಬಿ. ಕೆ. ಶಿವರಾಮ್ ಪುತ್ರಿ
ಸ್ಪಂದನಾ-ವಿಜಯ್ ಜೋಡಿಯ ಸುಂದರ ಚಿತ್ರಗಳು!
ಪ್ರೀತಿಸಿ ಮದುವೆಯಾಗಿದ್ದ ಜೋಡಿ
ವಿಜಯರಾಘವೇಂದ್ರ-ಸ್ಪಂದನಾ ಒಬ್ಬರಿಗೊಬ್ಬರು ಪ್ರೀತಿಸಿ ಮದುವೆಯಾಗಿದ್ದರು.
ಮದುವೆ ಬಳಿಕವೂ ಇಬ್ಬರು ಪ್ರೇಮಿಗಳಂತೆಯೇ ಇದ್ದರು.
‘ವಿಜಯ ಸ್ಪಂದನ’
ಪ್ರೇಮಕಥೆ ಶುರುವಾಗಿದ್ದು ಹೇಗೆ ಗೊತ್ತಾ?
ವಿಜಯ್ ರಾಘವೇಂದ್ರ ರವರಿಗೆ ಮೊದಲಿಗೆ ಸ್ಪಂದನ ಅವರು ಪರಿಚಯವಾಗಿದ್ದು ಮಲ್ಲೇಶ್ವರಂನ ಕಾಫಿ ಡೇಯಲ್ಲಿ. ಸ್ವಂದನ ಅವರನ್ನು ನೋಡುತ್ತಿದ್ದ ಹಾಗೆ ವಿಜಯರಾಘವೇಂದ್ರ ಅವರು ಅಲ್ಲೇ ಕಳೆದು ಹೋಗುತ್ತಾರೆ. ಅವರನ್ನು ನೋಡಿದ ಕೂಡಲೇ ಆಕಸ್ಮಿಕವಾಗಿ ಮಾತನಾಡಿಸಲು ಶುರುಮಾಡುತ್ತಾರೆ ವಿಜಯ ರಾಘವೇಂದ್ರ.
ನಂತರ 2007ರಲ್ಲಿ ಮತ್ತೊಮ್ಮೆ ಶೇಷಾದ್ರಿಪುರಂನ ಕಾಫಿ ಡೇಯಲ್ಲಿ ವಿಜಯರಾಘವೇಂದ್ರ ಹಾಗೂ ಸ್ಪಂದನ ಭೇಟಿಯಾಗುತ್ತಾರೆ.
ಎರಡನೇ ಬಾರಿ ಭೇಟಿಯಾದ ನಂತರ ಏನಾದರೂ ಮಾಡಿ ಅವರ ಬಳಿ ಪ್ರೀತಿಯನ್ನು ಹೇಳಿಕೊಳ್ಳಬೇಕು ಎಂದು ನಿರ್ಧರಿಸಿ ಕೆಲವೇ ದಿನಗಳಲ್ಲಿ ಅವರ ಪ್ರೀತಿಯನ್ನು ಸ್ಪಂದನ ಅವರ ಬಳಿ ಹೇಳಿಕೊಳ್ಳುತ್ತಾರೆ. ವಿಜಯ ರಾಘವೇಂದ್ರ ಅವರ ಪ್ರೀತಿಯನ್ನು ಸ್ಪಂದನ ಅವರು ಕೂಡ ಒಪ್ಪಿಕೊಳ್ಳುತ್ತಾರೆ, ತದನಂತರ ವಿಜಯ ರಾಘವೇಂದ್ರ ಅವರಿಗೆ ತಿಳಿಯುತ್ತದೆ ಸ್ಪಂದನಾ ಅವರ ತಂದೆ ಎಸಿಪಿ ಆಗಿದ್ದ ಬಿಕೆ ಶಿವರಾಂ ಅವರ ಮಗಳು ಎಂದು. ಕರ್ನಾಟಕದಲ್ಲಿ ಒಳ್ಳೆ ಹೆಸರನ್ನು ಮಾಡಿದ್ದ ಅಧಿಕಾರಿ.
ಬಿ.ಕೆ ಶಿವರಾಂ ಹಾಗೂ ಚನ್ನೇಗೌಡರ ನಡುವೆ ಉತ್ತಮ ಬಾಂಧವ್ಯವಿತ್ತು, ಹಾಗೂ ಅದೇ ಸಂದರ್ಭದಲ್ಲಿ ಇವರಿಬ್ಬರ ಮನೆಯಲ್ಲಿ ಮದುವೆಗಾಗಿ ಹುಡುಗ, ಹುಡುಗಿಯನ್ನು ಹುಡುಕುತ್ತಿದ್ದರು. ಆ ಸಂದರ್ಭದಲ್ಲಿ ಇವರಿಬ್ಬರ ಪ್ರೀತಿ ಇಬ್ಬರ ಮನೆಯವರಿಗೂ ತಿಳಿದು ಇವರಿಬ್ಬರ ಮದುವೆಗೆ ಒಪ್ಪಿಕೊಳ್ಳುತ್ತಾರೆ.
ಆಗಸ್ಟ್ 26 2007 ರಲ್ಲಿ ಇಬ್ಬರೂ ಮದುವೆಯಾಗಿ ಪ್ರೇಮಿಗಳಾಗೆ ಇರುತ್ತಾರೆ.