ಕನ್ನಡದಲ್ಲಿ ಬಂದ First Rank Raju ಸೂಪರ್ ಆಗಿತ್ತು. ಕನ್ನಡಿಗರಲ್ಲಿ ಹೊಸ ನಗೆಯ ಅಲೆ ಎಬ್ವಿಸಿತ್ತು. ನಾಯಕ ನಟ ಗುರು ಅಭಿನಯದ ಈ ಚಿತ್ರವನ್ನ ನಿರ್ದೇಶಕ ನರೇಶ್ ಡೈರೆಕ್ಟ್ ಮಾಡಿದ್ದರು. ಇದೇ ಜೋಡಿ ರಾಜು ಕನ್ನಡ ಮೀಡಿಯಂ ಹೆಸರಿನ ಚಿತ್ರವನ್ನೂ ಮಾಡಿ ಜನರನ್ನ ವಿಭಿನ್ನವಾಗಿಯೇ ರಂಚಿಸಿತು. ಈಗ ಇದೇ ನಿರ್ದೇಶಕ ನರೇಶ್ ` ಸೌತ್ ಇಂಡಿಯನ್ ಹೀರೋ’ ಸಿನಿಮಾ ಮೂಲಕ ಬಂದಿದ್ದಾರೆ. ಸೌತ್ ಇಂಡಿಯನ್ ಹೀರೊ ಚಿತ್ರದಲ್ಲಿ ಇಬ್ಬರು ನಾಯಕಿಯರು ಇದ್ದಾರೆ. ಊರ್ವಶಿ ಹಾಗೂ ಕಶಿಮಾ ಅನ್ನೋ ಯುವ ನಟಿಯರೂ ಈ ಮೂಲಕ ಎಂಟ್ರಿ ಆಗುತ್ತಿದ್ದಾರೆ. ಇನ್ನು ಈ ಚಿತ್ರದ ಮೂಲಕ ಸಾರ್ಥಕ್ ಎಂಬ ನವ ನಟ ನಾಯಕನಾಗಿ ಚಂದನವನಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ಈ ಚಿತ್ರದ `ಪಕ್ಕ ಲೋಕಲ್ ಸುಕ್ಕ ಹೀರೋ’ ಎಂಬ ಹಾಡನ್ನು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಬಿಡುಗಡೆಗೊಳಿಸಿದ್ದು. ಇದೊಂದು ಎನರ್ಜಿಟಿಕ್ ಸಾಂಗ್ ಎಂದು ಹೇಳಿದ್ದಾರೆ.ಈ ಚಿತ್ರದ ನಾಯಕರದ ಸಾರ್ಥಕ ಹಾಗೂ ಚಿತ್ರದ ನಾಯಕಿ ಕಾಶಿಮಾ ಮತ್ತು ಇದರ ನಿರ್ದೇಶಕರಾದ ನರೇಶ್ ಕುಮಾರ್ ಎಚ್ ಎನ್ ಅವರ ಸಿನಿಮಾಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದು, ಇದಲ್ಲದೆ ಈ ಚಿತ್ರದ ಟೀಸರ್ ನೋಡಿ ಅದರಲ್ಲಿ ಬರುವ ಕಾಮಿಡಿ ಸೀನ್ ಗಳನ್ನು ನೋಡಿ ತುಂಬಾ ಖುಷಿಪಟ್ಟಿದ್ದಾರೆ. ಈ ಚಿತ್ರಕ್ಕೆ ಬೆಂಬಲ ನೀಡಿ. ಸೌತ್ ಇಂಡಿಯನ್ ಹೀರೋಗೆ ಸಾತ್ ಕೊಟ್ಟಿದ್ದಾರೆ
ನ್ಯಾಚುರಲ್ ಸ್ಟಾರ್ ನಾನಿ ಮೂವತ್ತನೇ ಚಿತ್ರಕ್ಕೆ ಮೆಗಾ ಸ್ಟಾರ್ ಚಿರಂಜೀವಿ ಸಾಥ್
`ಪಕ್ಕಾ ಲೋಕಲ್ ಸುಕ್ಕ ಹೀರೋ’ ಹಾಡು ಹರ್ಷವರ್ಧನ್ ರಾಜ್ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿದ್ದು, ವಿಜಯ್ ಈಶ್ವರ್ ಅವರ ಸಾಹಿತ್ಯವಿದೆ. ಹಾಡನ್ನು ಜೆಸ್ಸಿ ಗಿಫ್ಟ್ ಹಾಡಿದ್ದು, ಶಿಲ್ಪಾ.ಎಲ್.ಎಸ್ ನಿರ್ಮಾಣ ಚಿತ್ರಕ್ಕಿದೆ.