Sandalwood Leading OnlineMedia

ಮತ್ತೆ ಒಂದಾಯ್ತು ‘ಸೂರರೈ ಪೋಟ್ರು’ ಟೀ…ಸೂರ್ಯ 43ನೇ ಸಿನಿಮಾಗೆ ಸುಧಾ ಕೊಂಗರ ಆಕ್ಷನ್ ಕಟ್

ತಮಿಳಿನ ಖ್ಯಾತ ನಟ ಸೂರ್ಯ ಹಾಗೂ ನಿರ್ದೇಶಕಿ ಸುಧಾ ಕೊಂಗರ ಮತ್ತೊಮ್ಮೆ ಕೈ ಜೋಡಿಸಿದ್ದಾರೆ. ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಜೀವನ ಆಧಾರಿತ ಸಿನಿಮಾ ಸೂರರೈ ಪೋಟ್ರು ಮೂಲಕ ಸಂಚಲನ ಸೃಷ್ಟಿಸಿದ್ದ ಈ ಜೋಡಿ ಮಗದೊಮ್ಮೆ ಒಂದಾಗಿದ್ದಾರೆ. ಸೂರ್ಯ ನಟಿಸಲಿರುವ 43ನೇ ಸಿನಿಮಾಗೆ ಸುಧಾ ಕೊಂಗರ ಆಕ್ಷನ್ ಕಟ್ ಹೇಳ್ತಿದ್ದಾರೆ.

ಇದನ್ನೂ ಒದಿ  ದಸರಾ ಅಂಗವಾಗಿ ಸೆಟ್ಟೇರಿತು ನಾನಿ 31ನೇ ಸಿನಿಮಾ…’ಸೂರ್ಯನ ಶನಿವಾರ’ ಚಿತ್ರಕ್ಕೆ RRR ಪ್ರೊಡ್ಯೂಸರ್ ಬಂಡವಾಳ

ಸೂರರೈ ಪೋಟ್ರು ಸಿನಿಮಾ ಪ್ರೇಕ್ಷಕರು ಹಾಗೂ ವಿಮರ್ಷಕರಿಂದಲೂ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಆಸ್ಕರ್ ರೇಸ್ ಗೂ ಇಳಿದಿದ್ದ ಈ ಚಿತ್ರ ಹಲವು ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಬಾಚಿಕೊಂಡಿತ್ತು. ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ಹಿನ್ನೆಲೆ ಸಂಗೀತ, ಅತ್ಯುತ್ತಮ ಚಿತ್ರ ಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ಈ ತಂಡ ಹೊಸ ಪ್ರಾಜೆಕ್ಟ್ ಗೆ ಒಂದಾಗಿದೆ.

ಇದನ್ನೂ ಒದಿ  ಪ್ರಿಯಾಂಕಾ ಉಪೇಂದ್ರ ಮಗಳಾಗಿ ಮಾನ್ವಿತಾ ಎಂಟ್ರಿ

ಸೂರರೈ ಪೋಟ್ರೂ ಮೂಲಕ ಧಮಾಕ ಎಬ್ಬಿಸಿದ್ದ ಸೂರ್ಯ ಹಾಗೂ ಸುಧಾ ಕೊಂಗರ ಹೊಸ ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇದೆ. ಮಾಲಿವುಡ್ ಹ್ಯಾಂಡ್ಸಮ್ ಹಂಕ್ ದುಲ್ಕರ್ ಸಲ್ಮಾನ್, ನಜ್ರಿಯಾ ಫಹದ್ ಹಾಗೂ ವಿಜಯ್ ವರ್ಮಾ ಸೂರ್ಯ 43 ಚಿತ್ರದ ಭಾಗವಾಗಿದ್ದಾರೆ.

ಇದನ್ನೂ ಒದಿ 175 ಥಿಯೇಟರ್ ಗಳಲ್ಲಿ ಟಗರು ಪಲ್ಯ ಮೆರವಣಿಗೆ….ಅಕ್ಟೋಬರ್ 27ಕ್ಕೆ ತೆರೆಗೆ ಬರ್ತಿದೆ ಡಾಲಿ ಪಿಕ್ಚರ್ಸ್ ಮೂರನೇ‌ ಕೊಡುಗೆ

ತಾತ್ಕಾಲಿಕವಾಗಿ #Suriya43 ಎಂದು ಟೈಟಲ್ ಇಡಲಾಗಿದೆ. ಸೂರ್ಯ ಒಡೆತನದ 2D ಎಂಟರ್‌ಟೈನ್‌ಮೆಂಟ್ ನಡಿ ಜ್ಯೋತಿಕಾ, ಸೂರ್ಯ ಮತ್ತು ರಾಜಶೇಖರ್ ಕರ್ಪೂರಸುಂದರಪಾಂಡಿಯನ್ ನಿರ್ಮಿಸಲಿದ್ದಾರೆ. ಮ್ಯೂಸಿಕ್ ಮಾಂತ್ರಿಕ ಜಿವಿ ಪ್ರಕಾಶ್ ಸಂಗೀತ ನಿರ್ದೇಶಿಸ್ತಿರುವ 100 ಚಿತ್ರ ಇದಾಗಿರೋದು ಮತ್ತೊಂದು ವಿಶೇಷ..ಸೂರರೈ ಪೋಟ್ರೂ ಮೂಲಕ ಮೋಡಿ ಮಾಡಿದ್ದ ಸೂರ್ಯ, ಸುಧಾ ಹಾಗೂ ಜಿವಿ ಪ್ರಕಾಶ್ ಹೊಸ ಪ್ರಾಜೆಕ್ಟ್ ಮೇಲೆ ನಿರೀಕ್ಷೆ ಇಮ್ಮಡಿಯಾಗಿದೆ.

Share this post:

Related Posts

To Subscribe to our News Letter.

Translate »