Parimalavanu Beeruva Lyrical | Sambhrama | Sonu Nigam | Abhayveer| Jayant Kaikini| Mano Murthy|Shree
ಸ0ಭ್ರಮ ಒಂದು ಯೂತ್ ಫುಲ್ ಎಂಟರ್ ಟೈನರ್ ಸಿನಿಮಾವಾಗಿದೆ. ಈ ಚಿತ್ರಕ್ಕೆ ಮ್ಯೂಸಿಕಲ್ ಮಾಂತ್ರಿಕ ಮನೋಮೂರ್ತಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಂಭ್ರಮ ಸಿನಿಮಾ ಫೀನಿಕ್ಸ್ ಪ್ರೊಡಕ್ಷನ್ ಬ್ಯಾನರ್ ನಡಿ ಅನಿಲ್‌ರಾಜ್ ಸಂಕೇತ್ ಹಾಗೂ ಉಮೇಶ್ ಎಲ್ ಧರ್ಮಶಿ ನಿರ್ಮಾಣದಲ್ಲಿ ಮೂಡಿ ಬರುತ್ತಿದೆ. ರಂಗಭೂಮಿ ಕಲಾವಿದ ಶ್ರೀ ಸಂಭ್ರಮ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ವೀರೇಂದ್ರ ಶೆಟ್ಟಿ ಮತ್ತು ಅಭಯ್ ವೀರ್ ಜೊತೆಗೆ ಹೊಸ ಪ್ರತಿಭೆಗಳಾದ, ರಿಧಿ ರಾಥೋರ್, ಕಿರಣ್ ಕುಮಾರ್, ಯಶವಂತ್, ರಾಘವೇಂದ್ರ , ಸ್ಪೂರ್ತಿ ಹಾಗೂ ಸವಿತಾ ಚಿತ್ರದಲ್ಲಿ ನಟಿಸಿದ್ದಾರೆ.
ನಿರೀಕ್ಷೆ ಹೆಚ್ಚಿಸಿದ `ಟೆಂಪರ್’ ಟ್ರೈಲರ್
ಈಗಾಗಲೇ ಶೂಟಿಂಗ್ ಕಂಪ್ಲೀಟ್ ಮಾಡಿರುವ ಸಂಭ್ರಮ ಸಿನಿಮಾದಲ್ಲಿ ಒಟ್ಟು ೧೦ ಹತ್ತು ಹಾಡುಗಳಿದ್ದು, ಜಯಂತ್ ಕಾಯ್ಕಿಣಿ ಮೂರು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಚಿನ್ಮಯ್ ಭಾವಿಕೆರೆ, ವೀರೇಂದ್ರ ಶೆಟ್ಟಿ, ಶ್ರೀ ಸಂಭ್ರಮ ಸಾಹಿತ್ಯದ ಹಾಡುಗಳು ಸಿನಿಮಾದಲ್ಲಿರಲಿವೆ.ಸಿಂಕ್ ಸೌಂಡ್ ಬಳಸಿ ಸಿನಿಮಾವನ್ನು ಶೂಟ್ ಮಾಡಲಾಗಿದೆ. ವಿನಯ್ ಕುಮಾರ್ ಎಸ್ ವಿಕೆ, ಮಂಜುನಾಥ್ ಹೆಗ್ಡೆ ಕ್ಯಾಮೆರಾ ವರ್ಕ್, ತೇಜಸ್ ರಾಜ್ ಸಂಕಲನ ಸಿನಿಮಾಕ್ಕಿದ್ದು, ಮಾಡಿದ್ದು, ರಾಮಕೃಷ್ಣ ನಿಗಾದೆ, ನಾಗರಾಜ್ ಗುಡಿ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.
‘ಟಗರು ಪಲ್ಯ’ ಮೂಲಕ ಚಿತ್ರರಂಗಕ್ಕೆ ಲವ್ ಲಿ ಸ್ಟಾರ್ ಪ್ರೇಮ್ ಪುತ್ರಿ ಅಮೃತ ಎಂಟ್ರಿ
ಸಂಭ್ರಮ, ಟೈಟಲ್ಲೇ ಹೇಳುವಂತೆ ಇಡೀ ಸಿನಿಮಾದುದ್ದಕ್ಕೂ ಪ್ರೇಮದ ಸಂಭ್ರಮ ಇದೆ. ಸಿನಿಮಾ ರೆಗ್ಯೂಲರ್ ಫಾರ್ಮೇಟ್‌ನಿಂದ ಹೊರತಾಗಿದ್ದು, ಹೊಸತನ್ನು ಬಯಸುವ ಪ್ರೇಕ್ಷಕನಿಗೆ ಹತ್ತಿರವಾಗಲಿದೆ. ಒಂದು ನವಿರಾದ ಪ್ರೇಮ ಕಥೆಯ ಮೂಲಕ ಮಾನವೀಯ ಮೌಲ್ಯಗಳನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ಇಡೀ ಸಿನಿಮಾ ಅತ್ಯಂತ ನ್ಯಾಚುರಲ್ ಆಗಿ ಚಿತ್ರೀಕರಣವಾಗಿದ್ದು, ಸಿಂಕ್ ಸೌಂಡ್ ಟೆಕ್ನಾಲಜಿ ಕಥೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ನೋಡುಗನನ್ನು ತಲುಪಲು ಸಹಯಾಕವಾಗಲಿದೆ.