ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಾ ಬಿಗ್ಬಾಸ್ (Bigg Boss) ಸೇರಿರುವ ಸೋನು ಶ್ರೀನಿವಾಸ್ ಗೌಡ ಅವರ ವಿಡಿಯೋ ವೈರಲ್ ಆಗಿದ್ದು, ಇದೀಗ ಆ ವಿಡಿಯೋ ಲೀಕ್ ಆಗಿರುವ ಬಗ್ಗೆ ಸ್ವತಃ ಸೋನು ಎಳೆ-ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಕೆಲವೇ ತಿಂಗಳ ಸೋನು ಶ್ರೀನಿವಾಸ್ ಗೌಡ (Sonu Srinivas Gowda ) ಹಿಂದೆ ಅವರ ಖಾಸಗಿ ವಿಡಿಯೋ ಲೀಕ್ ಆಗಿತ್ತು. ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿತ್ತು.
ಖಾಸಗಿ ಅಂಗಗಳನ್ನು ಪ್ರದರ್ಶನ ಮಾಡಿದ ಇಂಥವರಿಗೆಲ್ಲ ‘ಬಿಗ್ ಬಾಸ್ ಕನ್ನಡ ಒಟಿಟಿ’ (Bigg Boss OTT Kannada) ವೇದಿಕೆಯಲ್ಲಿ ಅವಕಾಶ ನೀಡಿದ್ದು ಸರಿಯಲ್ಲ ಎಂದು ಕಮೆಂಟ್ಗಳ ಮೂಲಕ ಜನರು ಅಸಮಾಧಾನ ಹೊರಹಾಕುತ್ತಿದ್ದಾರೆ. ಈಗ ಅದೇ ವಿಚಾರದ ಬಗ್ಗೆ ಸೋನು ಶ್ರೀನಿವಾಸ್ ಗೌಡ (Sonu Srinivas Gowda ) ಮಾತನಾಡಿದ್ದಾರೆ. ತಮ್ಮ ಖಾಸಗಿ ವಿಡಿಯೋ (Sonu Srinivas Gowda Viral Video) ಲೀಕ್ ಆಗಿದ್ದಕ್ಕೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ. ಎಲ್ಲವನ್ನೂ ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ.
ತಮ್ಮ ಜೀವನದ ಬಗ್ಗೆ ಮಾತನಾಡಿರೋ ಸೋನು ಶ್ರೀನಿವಾಸ್ ಗೌಡ, ನಮ್ಮ ಮನೆಯಲ್ಲಿ ನೀನು ಯಾರನ್ನಾದರೂ ಲವ್ ಮಾಡು ಎಂದು ಸ್ವಾತಂತ್ರ್ಯ ಕೊಟ್ಟಿದ್ರು.. ಹಾಗಾಗಿ ನಾನು ಒಂದು ಹುಡುಗನನ್ನು ಇಷ್ಟಪಟ್ಟೇ, ಅವರನ್ನು ಮದುವೆ ಆಗ್ತೀನಿ ಅಂತ ಮನೆಯಲ್ಲಿ ಹೇಳಿದ್ದೆ. ಒಂದು ದಿನ ವಿಡಿಯೋ ಕಾಲ್ ಮಾಡು ಅಂದ. ಹೇಗೂ ಮದುವೆ ಆಗುತ್ತೇವಲ್ಲ ಅಂತ ನಾನು ವಿಡಿಯೋ ಕಾಲ್ನಲ್ಲಿ ಹಾಗೆ ಮಾಡಿದೆ. ಅದನ್ನು ಅವನು ರೆಕಾರ್ಡ್ ಮಾಡಿಕೊಂಡ. ಒಂದು ವಾರದ ನಂತರ ಅವನು ರೂಡ್ ಆಗಿ ನಡೆದುಕೊಳ್ಳಲು ಶುರು ಮಾಡಿದ’ ಎಂದು ಆತನ ಬಗ್ಗೆ ಸೂನು ಗೌಡ ವಿವರಿಸಿದ್ದಾರೆ.
‘ನನ್ನ ನಂಬಿಕೆಗೆ ಮೋಸ ಆಯ್ತು. ನಾನು ಇದುವರೆಗೆ ಯಾವ ಹುಡುಗನನ್ನೂ ಕೈ ಹಿಡಿದುಕೊಂಡು ಮಾತನಾಡಿಸಿಲ್ಲ. ಇಲ್ಲಿ ಯಾರೂ ಸಾಚಾ ಅಲ್ಲ. ಎಲ್ಲರೂ ಇದನ್ನು ಮಾಡಿಕೊಂಡಿರುತ್ತಾರೆ. ಆದರೆ ನಂದು ಹೊರಗೆ ಬಂತು. ನಾನು ಪಬ್ಗೆ ಹೋಗುತ್ತೇನೆ. ಎಲ್ಲ ಕಡೆ ಎಂಜಾಯ್ ಮಾಡ್ತೀನಿ. ಆದರೆ ನಮ್ಮ ಅಮ್ಮ ಹಳ್ಳಿ ಕಡೆಯಿಂದ ಬಂದೋರು. ಅವರು ಅಷ್ಟು ದುಡ್ಡು ಮಾಡಿಟ್ಟಿರುವುದು ನಮಗೋಸ್ಕರ. ನಾನು ಅವರ ಮಾನ ಮರ್ಯಾದೆ ತೆಗೆದೆ ಎಂಬ ಫೀಲ್ ನನ್ನನ್ನು ತುಂಬ ಕಾಡುತ್ತಿದೆ’ ಎಂದಿದ್ದಾರೆ ಸೋನು ಶ್ರೀನಿವಾಸ್ ಗೌಡ.
‘ಆ ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ. ಆಗಲೇ ನಾನು ಅಮ್ಮನ ಬಳಿಕ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಿದೆ. ಒಂದೂವರೆ ವರ್ಷದ ಬಳಿಕ ಮೆಸೇಜ್ ಮಾಡಿ ಹೆದರಿಸಿದ. ವಿಡಿಯೋ ಲೀಕ್ ಮಾಡ್ತೀನಿ ಅಂತ ಬೆದರಿಸಿದ. ಅಳುತ್ತಾ ನಾನು ಡಿಪ್ರೆಷನ್ಗೆ ಹೋದೆ. ಆ ವಿಡಿಯೋ ಲೀಕ್ ಆದ ಬಳಿಕ ನಾನು ನಮ್ಮ ಊರಿಗೆ ಹೋಗಿಲ್ಲ’ ಎಂದು ಸೋನು ಗೌಡ ಕಣ್ಣೀರು ಹಾಕಿದ್ದಾರೆ.
‘ನನ್ನ ನಂಬಿಕೆಗೆ ಮೋಸ ಆಯ್ತು.ಇಲ್ಲಿ ಯಾರೂ ಸಾಚಾ ಅಲ್ಲ. ಎಲ್ಲರೂ ಇದನ್ನು ಮಾಡಿಕೊಂಡಿರುತ್ತಾರೆ. ಆದರೆ ನಂದು ಹೊರಗೆ ಬಂತು. ನಾನು ಪಬ್ಗೆ ಹೋಗುತ್ತೇನೆ. ಎಲ್ಲ ಕಡೆ ಎಂಜಾಯ್ ಮಾಡ್ತೀನಿ. ಆದರೆ ನಮ್ಮ ಅಮ್ಮ ಹಳ್ಳಿ ಕಡೆಯಿಂದ ಬಂದೋರು. ಅವರು ಅಷ್ಟು ದುಡ್ಡು ಮಾಡಿಟ್ಟಿರುವುದು ನಮಗೋಸ್ಕರ. ನಾನು ಅವರ ಮಾನ ಮರ್ಯಾದೆ ತೆಗೆದೆ ಎಂಬ ಫೀಲ್ ನನ್ನನ್ನು ತುಂಬ ಕಾಡುತ್ತಿದೆ’ ಎಂದಿದ್ದಾರೆ ಸೋನು ಶ್ರೀನಿವಾಸ್ ಗೌಡ.