ಬಿಗ್ಬಾಸ್ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ಬಂಧನವಾಗಿದೆ. ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದಾರೆ. ಸೋನು ಗೌಡ ಜನಪ್ರಿಯತೆಗಾಗಿ ಚಿತ್ರ ವಿಚಿತ್ರ ಪೋಸ್ಟ್ಗಳನ್ನು ಮಾಡುತ್ತಿರುತ್ತಾರೆ. ಇತ್ತಿಚೆಗಂತು ಸೋನು ಗೌಡ ಸಾವಿತ್ರಿ ಎಂಬ ಮಗುವಿನೊಂದಿಗೆ ವಿಡಿಯೋಗಳನ್ನು ಮಾಡಿ ಹಾಕುತ್ತಿದ್ದರು. ಆ ಮಗುವನ್ನು ದತ್ತು ಪಡೆದಿದ್ದಾರೆ ಎನ್ನಲಾಗಿದ್ದು, ಕಾನೂನು ಬಾಹಿರವಾಗಿ ದತ್ತು ಪಡೆದಿದ್ದಾರೆ ಎಂಬ ಆರೋಪದಡಿ ಆಕೆಯನ್ನು ಬಂಧಿಸಲಾಗಿದೆ. ಈ ಬಗ್ಗೆ ರಾಜ್ಯ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೀತಾ ದೂರು ನೀಡಿದ್ದರು. ಈ ಸಂಬಂಧ ಜೆ.ಜೆ.ಆ್ಯಕ್ಟ್ ಅಡಿ ಬ್ಯಾಡರಹಳ್ಳಿ ಪೊಲೀಸರು FIR ದಾಖಲಿಸಿಕೊಂಡಿದ್ದಾರೆ. ಸೋನು ಶ್ರೀನಿವಾಸ್ ಗೌಡ ಮಗುವನ್ನು ದತ್ತುಪಡೆಯಲು ಅವಕಾಶವಿಲ್ಲ, ಒಂದು ವೇಳೆ ಮಗು ದತ್ತು ಪಡೆದರೂ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿ ಪ್ರಚಾರ ಪಡೆಯುವಂತಿಲ್ಲ, ಇದು ಕಾನೂನು ಬಾಹಿರವಾಗುತ್ತದೆ ಎಂದು ಗೀತಾ ದೂರಿದ್ದಾರೆ.
ದತ್ತು ಪಡೆಯುವುದಕ್ಕೆ ಯಾರು ಅರ್ಹರು..?
* ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಸ್ಥಿರವಾಗಿರುವ, ಆರ್ಥಿಕವಾಗಿ ವ್ಯಕ್ತಿ ಸಮರ್ಥವಾಗಿರಬೇಕು.
* ಯಾವುದೇ ರೀತಿಯ ಜೀವಕ್ಕೆ ಅಪಾಯಕಾರಿ ವೈದ್ಯಕೀಯ ಸ್ಥಿತಿಯಿಂದ ಬಳಲುತ್ತಿರುವ ವ್ಯಕ್ತಿ; ಸ್ಥಿರ ಮದುವೆಯ 2 ಯೀಸ್ಟ್ ಅನ್ನು ಪೂರ್ಣಗೊಳಿಸಿದ ವಿವಾಹಿತ ದಂಪತಿಗಳು
* ವಿವಾಹಿತ ದಂಪತಿಗಳ ಸಂದರ್ಭದಲ್ಲಿ, ಎರಡೂ ಸಂಗಾತಿಗಳು ದತ್ತು ತೆಗೆದುಕೊಳ್ಳಲು ಒಪ್ಪಿಗೆ ನೀಡಿದರೆ
* ಒಬ್ಬ ಮಹಿಳೆ 2 ಲಿಂಗಗಳ ಮಕ್ಕಳನ್ನು ದತ್ತು ಪಡೆಯಬಹುದು (ಗಂಡು ಮತ್ತು ಹೆಣ್ಣು ಮಗು); ಒಂಟಿ ಪುರುಷ ಗಂಡು ಮಗುವನ್ನು ಮಾತ್ರ ದತ್ತು ಪಡೆಯಬಹುದು
* 3 ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ದಂಪತಿಗಳು ವಿಶೇಷ ಅಗತ್ಯತೆಗಳನ್ನು ಹೊಂದಿರುವ ಮಕ್ಕಳು ಅಥವಾ ಸಂಬಂಧಿ ಅಥವಾ ಮಲ
* ಪೋಷಕರ ದತ್ತು ಪಡೆದ ಪೋಷಕರ ಹೊರತು ಮತ್ತೊಂದು ಮಗುವನ್ನು ದತ್ತು ತೆಗೆದುಕೊಳ್ಳುವಂತಿಲ್ಲ.
ಪಾಲಿಸಬೇಕಾದ ನಿಯಮಗಳೇನು..?
* ದತ್ತು ತೆಗೆದುಕೊಳ್ಳಬೇಕಾದ್ರೆ ಕೆಲವೊಂದು ನಿಯಮ ಪಾಲಿಸಬೇಕಾಗುತ್ತದೆ. ದತ್ತು ತೆಗೆದುಕೊಳ್ಳುವ ತಾಯಿ ಮತ್ತು ಮಗುವಿಗೆ 25 ವರ್ಷಗಳ ಅಂತರವಿರಬೇಕು. ಆದರೆ ಇಲ್ಲಿ ಸೋನುಗೌಡ ಕೇಸ್ನಲ್ಲಿ ಮಗುವಿಗೆ 8 ವರ್ಷ ಮತ್ತು ಆಕೆಗೆ 23 ವರ್ಷ. ಇದರಿಂದ ಈ ಕೇಸ್ನಲ್ಲಿ ನಿಯಮ ಉಲ್ಲಂಘನೆ ಮಾಡಿದ್ದಾರೆ ಅಂತ ತಿಳಿಯುತ್ತದೆ. ರೀಲ್ಸ್ ಮಾಡುವ ಉದ್ದೇಶದಿಂದ ಮಗುವನ್ನು ತನ್ನಿಷ್ಟ ಬಂದಂತೆ ಬಳಸಿಕೊಂಡಿದ್ದಾರೆಂಬ ಆರೋಪ. ಇನ್ನು CWCಯ ಕೆಲವೊಂದು ನಿಯಮವನ್ನು ಸಹ ಇಲ್ಲ ಉಲ್ಲಂಘನೆಯ ಆರೋಪ ಸೋನು ಮೇಲೆ ಇದೆ.