Left Ad
Sonu Gowda’s Exclusive Open Talk - Chittara news
# Tags

Sonu Gowda’s Exclusive Open Talk

ಸೋನುವಿನ ಬಂಗಾರದ0ತಹ ದಾಂಪತ್ಯ ಜೀವನ ಎಡವಿದ್ದೆಲ್ಲಿ?

‘ಇಂತಿ ನಿನ್ನ ಪ್ರೀತಿಯ’ ಸಿನಿಮಾದ ಬಳಿಕ ಶ್ರೀನಗರ ಕಿಟ್ಟಿ ಸ್ನೇಹಿತ ಮನು ಎಂಬುವವರ ಜೊತೆ ಪರಿಚಯವಾಗಿತ್ತು. ಇಬ್ಬರ ನಡುವೆ ಸ್ನೇಹ ಬೆಳೆದು, ಅದು ಪ್ರೀತಿಗೆ ತಿರುಗಿತ್ತು. ಇಬ್ಬರೂ ಡೇಟಿಂಗ್ ಮಾಡುವುದಕ್ಕೆ ಶುರು ಮಾಡಿದ್ದರು. ಆದರೆ ದಿನ ಕಳೆದಂತೆ ಇಬ್ಬರ ನಡುವೆ ಏನೂ ಸರಿ ಹೋಗುತ್ತಿರಲಿಲ್ಲ. ಒಂದು ಹಂತದಲ್ಲಿ ಈ ಸಂಬಂಧವೇ ಬೇಡ ಅಂತ ಸೋನು ಗೌಡ ನಿರ್ಧರಿಸಿದ್ದರು. ಅದೊಂದು ಡೈಲಾಗ್ ಹೊಡೆಯದೇ ಇದ್ದಿದ್ದರೆ, ಈ ಸಂಬಂಧ ಮುಂದುವರೆಯುತ್ತಿರಲಿಲ್ಲ.

ಇಬ್ಬರಿಗೂ ಯಾಕೋ ಸರಿ ಹೋಗುತ್ತಿಲ್ಲ ಅಂತ ಅನಿಸಿದಾಗ, ಸೋನು ಗೌಡ ತಿರುಪತಿಗೆ ಹೋಗಿ ತಪ್ಪು ಕಾಣಿಕೆ ಹಾಕಿ ಬಂದಿದ್ದರು. ಈ ಸಂಬಂಧ ಮುಂದುವರೆಯದ ಹಾಗೆ ಮಾಡು ಅಂತ ಹೇಳಿದ್ದರು. ಆದರೆ, ಸೋನು ಗೌಡಗೆ ಮಾಜಿ ಪತಿ ಫೋನ್ ಮಾಡುತ್ತಲೇ ಇದ್ದರು. ಒಮ್ಮೆ ಅವರ ಕರೆ ಸ್ವೀಕರಿಸದೇ ಇದ್ದಾಗ ಸ್ನೇಹಿತರೊಂದಿಗೆ ಫೋನ್ ಮಾಡಿದ್ದರು. ಆಗ “ಸಾಯೋ ಹಾಗಿದ್ರೆ ಸಾಯಿ, ಭೂಮಿಗೆ ಬಾರ ಕಡಿಮೆ ಆಗುತ್ತೆ” ಅಂತ ಡೈಲಾಗ್ ಬಿಟ್ಟಿದ್ದರು. ಅದನ್ನು ಮಾಜಿ ಪತಿ ಗಂಭೀರವಾಗಿ ತೆಗೆದುಕೊಂಡು ಕೈ ಕುಯ್ತು. ಈ ಘಟನೆ ಮದುವೆಗೆ ನಾಂದಿ ಹಾಡಿತ್ತು. ಆ ಬಳಿಕ ಮನಸ್ತಾಪ, ವಿಚ್ಛೇದನ, ಖಾಸಗಿ ಫೋಟೊಗಳು ಲೀಕ್, ಇವರ ಜೀವನದಲ್ಲಿ ನಡೆಯಬಾರದ ಘಟನೆ ನಡೆದು ಹೋಯ್ತು.

ಸೋನು ಗೌಡ ತಮ್ಮ ಮದುವೆ ಬಗ್ಗೆ ಹೇಗಾಯ್ತು  ಹೇಳಿಕೊಂಡಿದ್ದಾರೆ. “ತುಂಬಾ ಪ್ರೀತಿಸುತ್ತಾನೆ ಅಂತ ಅಂದುಕೊಂಡೆ. ಅವರ ಪ್ರೀತಿ ಮುಂದೆ ಏನೂ ಕಾಣಿಸಲಿಲ್ಲ. ನಾನು ದುಡಿಬೇಕು. ನಾನು ದುಡ್ಡು ಮಾಡಬೇಕು ಅಂತ ಅನಿಸಲಿಲ್ಲ. ಇವನ ಜೊತೆ ಚೆನ್ನಾಗಿದ್ದರೆ ಸಾಕು, ಇವನು ಚೆನ್ನಾಗಿ ನೋಡಿಕೊಳ್ತಾನೆ. ಅದೇ ಸಮಯದಲ್ಲಿ ನನಗೆ ಮೂರ್ನಾಲ್ಕು ಪ್ರಪೋಸಲ್ ಬರುತ್ತಿತ್ತು. ಅದರಲ್ಲಿ ಇಬ್ಬರು ಮನೆಗೆ ಬಂದು ನಿಮ್ಮ ಅಪ್ಪನ ಜೊತೆ ಮಾತಾಡುತ್ತೇನೆ ಅಂದಿದ್ದರು. ಎಲ್ಲಿ ಅವರೊಂದಿಗೆ ಮದುವೆ ಆಗುತ್ತೋ ಅನ್ನೋ ಆತಂಕ ಶುರುವಾಗಿತ್ತು. ಆದರೆ, ನನ್ನ ಮಾಜಿ ಗಂಡನ ಮನೆಯಲ್ಲಿ ಒತ್ತಡವಿತ್ತು. ಯಾಕಂದ್ರೆ ನನಗೂ ನನ್ನ ಪತಿಗೂ ತುಂಬಾನೇ ವಯಸ್ಸಿನ ಅಂತರವಿತ್ತು.” ಎಂದಿದ್ದಾರೆ.

“ನಾವಿಬ್ಬರೂ ಪ್ರಬುದ್ಧರಾಗಿರಲಿಲ್ಲ. ನಾನು ಮದುವೆ ಆದಾಗ ನನಗೆ 20 ವರ್ಷ. ಅವರಿಗೆ 28-29 ವರ್ಷ ಆಗಿತ್ತೇನೋ. ನನಗೆ ಪ್ರಬುದ್ಧತೆ ಇರಲ್ಲಿಲ್ಲ. ಇದ್ದಿದ್ದರೆ, ನಾನು ಸತ್ತು ಹೋಗು ಅಂತ ಹೇಳುತ್ತಿರಲಿಲ್ಲ. ಅವರನ್ನು ಕೆರಳಿಸುತ್ತಿರಲಿಲ್ಲ. ನಾನು ಇಷ್ಟ ಇಲ್ಲ ಅಂದರೆ ಬಿಡಿ ಅಂತೇನೋ ಹೇಳುತ್ತಿದ್ದೆ. ನಾನು ಹೇಗೋ ಜಾರಿಕೊಂಡು, ಅವರಿಂದ ದೂರು ಬಂದು ಬಿಡುತ್ತಿದ್ದೆ. ಇನ್ನು ಮದುವೆ ಆಗಿ ಮೂರು ತಿಂಗಳಿಗೆ ನಾನು ಡಿವೋರ್ಸ್ ತೆಗೆದುಕೊಂಡವಳಲ್ಲ. ಏಳು ವರ್ಷ ಆದ್ಮೇಲೆ ಇದೆಲ್ಲ ನಡೆದಿದ್ದು.” ಎಂದು  ಮದುವೆ ಬಗ್ಗೆ ರಿವೀಲ್ ಮಾಡಿದ್ದಾರೆ.

“ಜಗಳ ಆಡುತ್ತಿದ್ವಿ. ಮತ್ತೆ ಸರಿ ಹೋಗುತ್ತಿದ್ವಿ. ಹೀಗೆ ನಡೀತಾ ಇತ್ತು. ಇದೇ ವರ್ಷ ಆರು ವರ್ಷನೂ ನಡೀತಾನೇ ಇತ್ತು. ಲೈಫ್‌ನಲ್ಲಿ ಏನೋ ಬದಲಾವಣೆ ಆಗುತ್ತೆ ಅನ್ನುವಂತಹದ್ದು ಏನೂ ಇರಲಿಲ್ಲ. ನಾನು ಕೆಲವು ಪ್ರಾಜೆಕ್ಟ್‌ಗಳಲ್ಲಿ ಕೆಲಸ ಶುರು ಮಾಡಿದ್ದೆ. ಆಗ ನಾನು ಮನೆ ಮಾಡುತ್ತೇನೆ ಅಂತ ಹೇಳಿದ್ದರು. 2011ರಲ್ಲಿ ಮನೆ ಬಿಟ್ಟಿದ್ದಕ್ಕೆ ನಾನು ಮತ್ತೆ ಹೋಗಿದ್ದೇ 2016ರಲ್ಲಿ. ಎಲ್ಲವೂ ಸಾಮಾನ್ಯವಾಗಿತ್ತು. ಆದರೆ, ಒಂದು ಘಟನೆ ನಮ್ಮಿಬ್ಬರನ್ನು ವಿಚಲಿತರನ್ನಾಗಿ ಮಾಡಿತ್ತು. ಎಲ್ಲರೂ ಅವನನ್ನೇ ದೂರುವುದಕ್ಕೆ ಶುರು ಮಾಡಿದ್ದರು. ಫೋಟೊಗಳನ್ನು ಲೀಕ್ ಮಾಡಿದ್ದು ಅವನೇ ಅಂತ. ಆದರೆ, ನನಗೆ ಗೊತ್ತಿರೋ ಹಾಗೆ ಅವರು ಮಾಡಿರುವುದಕ್ಕೆ ಸಾಧ್ಯವಿಲ್ಲ. ಅವರನ್ನು ನಾನು ಅಷ್ಟು ಇಷ್ಟ ಪಟ್ಟಿದ್ದೆ. ಹೀಗಾಗಿ ಅವನು ಆತರ ಮಾಡುವುದಕ್ಕೆ ಸಾಧ್ಯವೇ ಇಲ್ಲ” ಎನ್ನುತ್ತಾರೆ.

“ಅವರ ಮನೆಯವರು ನಿನ್ನಿಂದಲೇ ನಮ್ಮ ಮನೆ ಮಾನ ಮರ್ಯಾದೆ ಹೋಯ್ತು ಅಂದರು. ಆ ವೇಳೆ ನನ್ನ ಪತಿ ಮಾತಾಡುತ್ತಾರೆ ಅಂತ ನಿರೀಕ್ಷೆ ಮಾಡಿದ್ದೆ. ನಿನಗೆ ಏನು ಅನಿಸುತ್ತಿದೆ ಅಂತ ಕೇಳಿದಾಗ, ನಿನ್ನಿಂದ ನನ್ನ ಲೈಫ್ ಹಾಳಾಗಿ ಹೋಯ್ತು ಅಂತ ಅಂದರು. ನನ್ನಿಂದ ಯಾರ ಲೈಫ್ ಹಾಳಾಗುವುದು ಬೇಡ ಅಂತ ಅವತ್ತು ವಾಪಸ್ ಮನೆಗೆ ಬಂದು ಬಿಟ್ಟೆ. ನಾನು ಅವರಿಂದ ಒಂದು ರೂಪಾಯಿ ಜೀವನಾಂಶವನ್ನೂ ತೆಗೆದುಕೊಂಡಿಲ್ಲ. ನೀನು ದುಡಿಯುತ್ತಿಲ್ಲ ಅಂತ ಹೇಳುತ್ತಿದ್ದೆ ಬಿಟ್ಟರೆ, ನಮ್ಮ ನಡುವೆ ದುಡ್ಡು ಬಂದೇ ಇಲ್ಲ.”

“ಇವತ್ತೂ ನಾನು ಯೋಚನೆ ಮಾಡೋದು ಏನಂದ್ರೆ, ಅದೊಂದು ಘಟನೆ ನನ್ನ ಲೈಫ್‌ನಲ್ಲಿ ಆಗಬಾರದಿತ್ತು ದೇವರೇ ಅಂತ ಕೇಳಿಕೊಳ್ಳುತ್ತೇನೆ. ಆ ಘಟನೆ ಬಳಿಕ ನಾನು ದೇವಸ್ಥಾನಕ್ಕೆ ಹೋಗುವುದನ್ನೇ ಬಿಟ್ಟುಬಿಟ್ಟಿದ್ದೆ. ನಾನು ಫೋಟೊಗಳನ್ನು ತೆಗೆದುಕೊಂಡಿದ್ದಿ. ಇವಾಗ ಯಾರು ಕ್ಲಿಕ್ ಮಾಡಲ್ಲ. ಎಲ್ಲರೂ ಕ್ಲಿಕ್ ಮಾಡಿರುತ್ತಾರೆ. 2010, ಮದುವೆ ಹೊಸತರಲ್ಲಿ ಆ ಫೋಟೊಗಳನ್ನು ಕ್ಲಿಕ್ ಮಾಡಿದ್ದು. ಅದನ್ನು ತಕ್ಷಣಕ್ಕೆ ಡಿಲೀಟ್ ಮಾಡಿದ್ವಿ. ಅದು ಗೂಗಲ್ ಫೋಟೋಸ್, ಗೂಗಲ್ ಡ್ರೈವ್‌ಗೋ ಹೋಗಿ ಬ್ಯಾಕಪ್‌ ತರ ಆಗಿ, ಇಷ್ಟೆಲ್ಲ ಅವಾಂತರ ಸೃಷ್ಟಿಸಿತ್ತು. ಅದನ್ನು ನನ್ನ ಅಕೌಂಟ್‌ನಿಂದಲೇ ಹ್ಯಾಕ್ ಆಗಿರೋದು. ಖಂಡಿತವಾಗಿಯೂ ಅವರು ಲೀಕ್ ಮಾಡಿದ್ದು ಅಲ್ಲ.”

“ಇವತ್ತು ಮನು (ಮಾಜಿ ಪತಿ) ಸ್ವತಂತ್ರವಾಗಿ ಬದುಕುತ್ತಿದ್ದಾನೆ. ಎಲ್ಲಾ ಸರಿ ಹೋಗಿದೆ. ಮತ್ತೆ ಈ ರಿಲೇಷನ್‌ಶಿಪ್ ಅನ್ನು ಶುರು ಮಾಡುತ್ತೀಯಾ ಅಂತ ಕೇಳಿದರೆ, ನಾನು ಇಲ್ಲ ಅಂತಾನೇ ಹೇಳುತ್ತೇನೆ. ಯಾಕಂದ್ರೆ ಅವರು ನನ್ನನ್ನು ತುಂಬಾನೇ ಸ್ವತಂತ್ರಳನ್ನಾಗಿ ಮಾಡಿದ್ದಾರೆ.” ಎನ್ನುತ್ತಾರೆ. ಈಗ ಮತ್ತೆ ಪ್ರೀತಿ, ಪ್ರೇಮ ಮದುವೆ ಅಂದರೆ ಆತಂಕವಿದೆ. ಹಳೆಯ ಘಟನೆಗಳೇ ಕಣ್ಮುಂದೆ ಬರುತ್ತವೆ ಎಂದು ನಟಿ ಸೋನು ಗೌಡ  ರಿವೀಲ್ ಮಾಡಿದ್ದಾರೆ.  ಮದುವೆ ಆಗಿ ಮಕ್ಕಳಿರುವ ಆಟೋ ಡ್ರೈವರ್ ಪ್ರೀತಿಸುವಂತೆ ಪ್ರೀಡಿಸುತ್ತಿದ್ದ ಘಟನೆಯನ್ನು ರಿವೀಲ್ ಮಾಡಿದ್ದಾರೆ. ಖಾಸಗಿ ಫೋಟೊಗಳು ಲೀಕ್ ಆದಾಗ ಅನುಭವಿಸಿದ ನೋವುಗಳು, ಅವಮಾನಗಳನ್ನು ನೆನೆದು ಭಾವುಕರಾಗಿದ್ದಾರೆ. ಪ್ರೀತಿ, ಪ್ರೇಮ, ಮದುವೆ, ವಿಚ್ಛೇದನ, ಅದರ ನಂತರದ ಬದುಕು, ವೃತ್ತಿ ಬದುಕಿನ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ.

Spread the love
Translate »
Right Ad