ಬಾಲಿವುಡ್ ನಲ್ಲಿ ಹಲವು ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿರುವ ನಟಿ ಸೋನಾಲಿ ಬೇಂದ್ರೆ ಅವರು 2013ರಿಂದ ಯಾವುದೇ ಚಿತ್ರಗಳಲ್ಲಿ ನಟಿಸಿಲ್ಲ. ಆದರೆ ಇದೀಗ ದಿ ಬ್ರೋಕನ್ ನ್ಯೂಸ್ ವೆಬ್ ಸರಣಿ ಮೂಲಕ ಕಂಬ್ಯಾಕ್ ಮಾಡುತ್ತಿರುವ ನಟಿ ಬಾಲಿವುಡ್ ಮೇಲೆ ಅಂಡರ್ವರ್ಲ್ಡ್ ನಿಯಂತ್ರಣವಿದ್ದು ಇದರಿಂದಾಗಿ ನಾನು ಹಲವು ಚಿತ್ರಗಳ ಅವಕಾಶ ಕಳೆದುಕೊಂಡೆ ಎಂದು ಹೇಳಿದ್ದಾರೆ.
ಪ್ರೇಕ್ಷಕನಿಗೆ ಸಿಹಿಕೊಟ್ಟ `ಶುಗರ್‌ಲೆಸ್’ ಟ್ರೈಲರ್
1994ರಲ್ಲಿ ಬಿಡುಗಡೆಯಾಗಿದ್ದ ಆಗ್ ಚಿತ್ರದ ಮೂಲಕ ಸೋನಾಲಿ ಬೇಂದ್ರೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಒಟ್ಟಾರೆ 46 ಚಿತ್ರಗಳಲ್ಲಿ ನಟಿಸಿರುವ ಸೋನಾಲಿ ಬೇಂದ್ರೆ ಅವರು 2013ರಲ್ಲಿ ಬಿಡುಗಡೆಯಾಗಿದ್ದ ಓನ್ಸ್ ಅಪನ್ ಎ ಟೈಮ್ ಇನ್ ಮುಂಬೈ ದರ್ಬಾರ್ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು.
ಕೆಲ ಸಿನಿಮಾಗಳಲ್ಲಿ ನನಗೆ ನಟಿಸಲು ಅವಕಾಶ ಬರುತ್ತಿತ್ತು. ಆದರೆ ನಂತರ ಆ ಪಾತ್ರಕ್ಕೆ ಬೇರೆ ನಟಿಯರು ಆಯ್ಕೆಯಾಗುತ್ತಿದ್ದರು. ಈ ಬಗ್ಗೆ ಕೇಳಿದಾಗ ನಿರ್ದೇಶಕರು ನಮಗೆ ಬೇರೆ ಕಡೆಯಿಂದ ಒತ್ತಡವಿದೆ. ಹೀಗಾಗಿ ಬೇರೆ ನಟಿಯನ್ನು ಆಯ್ಕೆ ಮಾಡಿದ್ದಾಗಿ ಹೇಳುತ್ತಿದ್ದರು. ಇಲ್ಲಿ ಕೆಲ ಸಿನಿಮಾ ನಿರ್ಮಾಣ ಸಂಸ್ಥೆಗಳು ಬಂಡವಾಳ ಹೂಡುತ್ತವೆ. ಅದೇ ರೀತಿ ಭೂಗತಲೋಕದಿಂದಲೂ ಸಿನಿಮಾ ನಿರ್ಮಾಣಕ್ಕೆ ಹಣ ಬರುತ್ತಿತ್ತು ಎಂದು ನಟಿ ಹೇಳಿದ್ದಾರೆ.