Sandalwood Leading OnlineMedia

ಮನಸೂರೆಗೊಳ್ಳುತ್ತಿದೆ ತನುಷ್ ಶಿವಣ್ಣ – ಸೋನಾಲ್ ಮೊಂತೆರೊ ಅಭಿನಯಿಸಿರುವ “Mr ನಟ್ವರ್ ಲಾಲ್” ಚಿತ್ರದ ಯುಗಳಗೀತೆ .

ತನುಷ್ ಸಿನಿಮಾಸ್ ಲಾಂಛನದಲ್ಲಿ ತನುಷ್ ಶಿವಣ್ಣ ನಿರ್ಮಿಸಿ, ನಾಯಕನಾಗಿ ನಟಿಸಿರುವ ಹಾಗೂ ವಿ.ಲವ ನಿರ್ದೇಶನದ “Mr ನಟ್ವರ್ ಲಾಲ್” ಚಿತ್ರದ ಯುಗಳಗೀತೆಯೊಂದು ಬಿಡುಗಡೆಯಾಗಿದೆ.

ಇದನ್ನೂ ಒದಿ “ಎಲೆಕ್ಟ್ರಾನಿಕ್ ಸಿಟಿ”ಯಲ್ಲಿದೆ ಐಟಿ ಉದ್ಯೋಗಿಯ ವರ್ಕ್ ಲೈಫ್ . ಬೆಂಗಳೂರಿನ ಪ್ರಸಿದ್ದ ಬಡಾವಣೆಯ ಹೆಸರೆ ಈಗ ಚಿತ್ರದ ಶೀರ್ಷಿಕೆ

ಈ ಚಿತ್ರಕ್ಕಾಗಿ ಬಹದ್ದೂರ್ ಚೇತನ್ ಕುಮಾರ್ ಬರೆದಿರುವ “ಅಚ್ಚಚ್ಚಚ್ಚು ಅಚ್ಚುಮೆಚ್ಚು” ಎಂಬ ಪ್ರೇಮಗೀತೆ ಆನಂದ್ ಆಡಿಯೋ ಮೂಲಕ ಹೊರಬಂದಿದ್ದು ಎಲ್ಲರ ಮನ ಗೆಲ್ಲುತ್ತಿದೆ. ಧರ್ಮವಿಶ್ ಸಂಗೀತ ಸಂಯೋಜಿಸಿರುವ ಈ ಯುಗಳಗೀತೆ ಗಾಯಕ ಸಾಯಿವಿಘ್ನೇಶ್ ಕಂಠಸಿರಿಯಲ್ಲಿ ಸುಮಧುರವಾಗಿ ಮೂಡಿಬಂದಿದೆ. ತನುಷ್ ಶಿವಣ್ಣ ಹಾಗೂ ಸೋನಾಲ್ ಮೊಂತೆರೊ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಒದಿ  ಆನಂದ್ ನಾ ಕೋಳಿಕೆ ರಂಗ ನವೆಂಬರ್ 10ಕ್ಕೆ ಬಿಡುಗಡೆ..

ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ವಿ.ಲವ ನಿರ್ದೇಶಿಸಿದ್ದಾರೆ. ವಿಲಿಯಂ ಡೇವಿಡ್ ಛಾಯಾಗ್ರಹಣ, ಧರ್ಮವಿಶ್ ಸಂಗೀತ ನಿರ್ದೇಶನ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ಡಿಫರೆಂಟ್ ಡ್ಯಾನಿ, ಥ್ರಿಲ್ಲರ್ ಮಂಜು, ರಾ ಪುಷ್ಪರಾಜು ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಇದನ್ನೂ ಒದಿ  “ಯಾವ ಮೋಹನ ಮುರಳಿ ಕರೆಯಿತು” ಚಿತ್ರದ ಟೈಟಲ್ ಸಾಂಗ್ ಬಿಡುಗಡೆ .

ತನುಷ್ ಶಿವಣ್ಣ, ಸೋನಾಲ್ ಮೊಂತೆರೊ, ನಾಗಭೂಷಣ, ಕಾಕ್ರೋಜ್ ಸುಧಿ, ಯಶ್ ಶೆಟ್ಟಿ, ರಾಜೇಶ್ ನಟರಂಗ, ರಘು ರಾಮನಕೊಪ್ಪ, ಹರಿಣಿ ಶ್ರೀಕಾಂತ್, ಸುಂದರರಾಜ್, ಕಾಂತರಾಜು ಕಡ್ಡಿಪುಡಿ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.


ಇದನ್ನೂ ಒದಿ  ಮೊದಲ ಹಂತದ ಚಿತ್ರೀಕರಣ ಪೂರ್ಣಗೊಳಿಸಿದ “ಇದು ನಮ್ ಶಾಲೆ”

ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ಜನಪ್ರಿಯವಾಗಿರುವ “Mr ನಟ್ವರ್ ಲಾಲ್” ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ.

Share this post:

Related Posts

To Subscribe to our News Letter.

Translate »