ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಯಂತ್ ನಡವಳಿಕೆಗೆ ಹೆಣ್ಣು ಮಕ್ಕಳು ಆತಂಕಗೊಂಡಿದ್ದಾರೆ. ಜಯಂತ್ ಒಬ್ಬ ಸೈಕೋ ಪ್ರೇಮಿ. ತನ್ನ ಪ್ರೀತಿಯ ಚಿನ್ನುಮರಿ ಜಾಹ್ನವಿಯನ್ನು ಹೊರಗಡೆ ಸುತ್ತಾಡುವ ಎಂದು ಮನೆಯಿಂದ ಹೊರಕ್ಕೆ ಕರೆದುಕೊಂಡು ಬಂದಿರುವ ಜಯಂತ್, ಅವಳನ್ನು ಸ್ವಿಮ್ಮಿಂಗ್ ಪೂಲ್ಗೆ ತಳ್ಳಿ ಮಜ ನೋಡಿದ್ದಾನೆ.
ಇದನ್ನೂ ಓದಿ :12 ಖ್ಯಾತನಾಮ ನಿರ್ದೇಶಕರಲ್ಲಿ ಯಾರ ಪಾಲಾಗುತ್ತೆ `ಚಿತ್ತಾರ ಅತ್ಯುತ್ತಮ ನಿರ್ದೇಶಕ’ ಪ್ರಶಸ್ತಿ?; ಇಲ್ಲಿದೆ ಸಂಪೂರ್ಣ ಮಾಹಿತಿ
ವಾಕ್ ಬಂದಾಗ ಜಾಹ್ನವಿ ಪಂಜರದ ಗಿಳಿ ಹೊರಗೆ ಬಂದಿರೋ ತರ ಅನಿಸ್ತಿದೆ ಅಂತಾಳೆ, ಅದಕ್ಕೆ ಉತ್ತರವಾಗಿ ಜಯಂತ್, ಹಾಗಂದ್ರೆ ನನ್ನ ಹೃದಯ ಗೂಡಿದ್ದಾಗೆ, ತುಂಬಾ ಸಣ್ಣದು, ನಿಮಗೆ ಅಲ್ಲಿ ಜಾಗ ಇಲ್ಲ ಅಂತ ಅರ್ಥಾನಾ ಅಂತ ಕೇಳ್ತಾನೆ, ಹಾಗೆ ಹೇಳಿ ಮಾತನಾಡುತ್ತಲೇ ಜಾಹ್ನವಿಯನ್ನು ಸ್ವಿಮ್ಮಿಂಗ್ ಪೂಲ್ಗೆ ತಳ್ಳುತ್ತಾನೆ ಪಾಗಲ್ ಪ್ರೇಮಿ ಜಯಂತ್. ತಕ್ಷಣ ಅವಳಿಗೆ ಈಜು ಬರಲ್ಲ ಎಂದು ಗೊತ್ತಾದ ಮೇಲೆ ಕಾಪಾಡುತ್ತಾನೆ.
ಜಯಂತ್ ಸೈಕೋ ಕ್ಯಾರೆಕ್ಟರ್ ನೋಡಿ ವೀಕ್ಷಕರು ಪರ ವಿರೋಧ ಚರ್ಚೆಯಲ್ಲಿ ತೊಡಗಿದ್ದಾರೆ. ಜಾನು ನೀನು ಇವನ ಬದುಕಿನಲ್ಲಿ ಪಂಜರದ ಗಿಳಿ ನೇ ಹಾರಡೋ ಹಕ್ಕಿಗೆ ರೆಕ್ಕೆ ಕತ್ತರಿಸಿ ಬಿಟ್ಟ ಹಾಗೆ ಆಯ್ತು ನಿನ್ನ ಪಾಡು. ಈ ಸೈಕೋ ಜೊತೆ ಅದು ಹೇಗೆ ಬದುಕುತ್ತಿಯೋ? ಇದಿನ್ನೂ ಆರಂಭ ಮುಂದೆ ಎನ್ ಇದೀಯೋ ಕರ್ಮ. ಡೈರೆಕ್ಟರ್ ಇವರ ಕಥೆಯನ್ನು ರದ್ದು ಮಾಡಿ. ಇವರ ಅವಶ್ಯಕತೆ ಇಲ್ಲ ಅನ್ಸುತ್ತೆ ಇಲ್ಲಿ ಎಂದಿದ್ದಾರೆ ಒಬ್ಬರು.
ಇದನ್ನೂ ಓದಿ :ಪ್ರೇಕ್ಷಕರ ಮನಗೆದ್ದ 12 ನಾಯಕ ನಟರಲ್ಲಿ ಯಾರ ಪಾಲಾಗುತ್ತೆ `Best Actor In A Leading Role – Male’ ಪ್ರಶಸ್ತಿ? VOTE NOW!!
ಇನ್ನೊಬ್ರು ಥೂ ರಾಕ್ಷಸ ಜಾನು ನ ಸ್ವಿಮ್ಮಿಂಗ್ ಪೂಲ್ನಲ್ಲಿ ತಳ್ಳಿದ ಇವನು ನಾಗವಲ್ಲಿ ತರ ಸಡನ್ ಆಗಿ ಬದಲಾಗೋದನ್ನ ಜಾನು ಅರ್ಥ ಮಾಡಿಕೋ, ಇವನು ಸರಿ ಇಲ್ಲ. ಇವನು ಮನುಷ್ಯ ರೂಪದ ರಾಕ್ಷಸ. ಜಯಂತ್ ಬಂದ್ರೆ ಆ ಧಾರಾವಾಹಿ ನೋಡೋ ಇಂಟ್ರೆಸ್ಟ್ ಇರೋದಿಲ್ಲ ಅಂದಿದ್ದಾರೆ.
ಇನ್ನೂ ಕೆಲವರು ಜಯಂತ್ ನಂತಹ ಗಂಡಂದಿರುವ ನಮ್ಮ ನಿಮ್ಮ ನಡುವೆ ಈ ಸಮಾಜದಲ್ಲಿ ಇದ್ದಾರೆ. ಅವರ ಸೈಕೋ ಪ್ರೀತಿ, ಸಂಶಯದಿಂದ ಎಷ್ಟೋ ಜನ ಹೆಣ್ಣುಮಕ್ಕಳು ಪ್ರತಿನಿತ್ಯ ನರಳುತ್ತಲೂ ಇರಬಹುದು. ಆದರೆ ಅವರು ಅದನ್ನು ಯಾರ ಬಳಿಯೂ ಹೇಳೋದಕ್ಕೆ ಸಾಧ್ಯವಾಗದೆ ಒಳಗೊಳಗೆ ಕೊರಗ್ತಿದ್ದಾರೆ. ಇಂತಹ ಪಾತ್ರ ಪರಿಚಯಿಸಿದ್ದು ಒಳ್ಳೆಯದೇ ಆಯ್ತು ಎಂದಿದ್ದಾರೆ.