ಪತ್ರಕರ್ತ ಸಂತೋಷ್ ಮಠಗಳನ್ನು ಭೇಟಿಯಾಗುದರ ಮೂಲಕ `ಮಠ’ ಚಿತ್ರ ಆರಂಭವನ್ನು ಪಡೆಯುತ್ತದೆ. ಮಠಗಳನ್ನು ಶೋಧಿಸುವ ಒಂದು ಹಂತದಲ್ಲಿ ಚಿತ್ರದ ಕಥಾ ನಾಯಕ ಇದ್ದಕ್ಕಿದ್ದ ಹಾಗೆ ಅರೆಸ್ಟ್ ಆಗುತ್ತಾನೆ. ಅವನನ್ನು ಜೈಲಿಂದ ಹೊರ ತರಲು ಪ್ರಭಾವಿ ರಾಜಕಾರಣಿಗಳು ಹರ ಸಾಹಸ ಮಾಡುತ್ತಿರುತ್ತಾರೆ. ಅಸಲಿಗೆ `ಮಠ’ ಸಿನಿಮಾ ಇಲ್ಲಿಂದ ಪ್ರೇಕ್ಷಕರನ್ನು ತನ್ನೊಳಗೆ ಸೆಳೆದುಕೊಳ್ಳಲು ಆರಂಭಿಸುತ್ತದೆ.
ಪತ್ರಕರ್ತ ಸಂತೋಷ್ ಮಠಗಳನ್ನು ಭೇಟಿ ಮಾಡುತ್ತಾ ಅವುಗಳು ಇತಿಹಾಸ, ಮತ್ತು ಮಠಗಳಿಂದ ಸಮಾಜಕ್ಕೆ ಆದ ಉಪಯೋಗಗಳ ಬಗ್ಗೆ ಅಧ್ಯಯನ ಮಾಡುತ್ತಲೇ ಹೋಗುತ್ತಿರುತ್ತಾನೆ. ಹೀಗೆ ಮಠಗಳನ್ನು ಭೇಟಿ ಮಾಡುವಾಗ ಒಂದು ಮಠದೆಡೆಗೆ ಆ ಮಠ ಮಾಡುತ್ತಿರುವ ಸಮಾಜ ಸೇವೆಯ ಬಗ್ಗೆ ಅರಿತು ಆಕರ್ಶಿತನಾಗುತ್ತಾನೆ. ಆದರೆ, ಅದೇ ಮಠವನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿರುವ ರಾಜಕೀಯ ಶಕ್ತಿಗಳ ಬಗ್ಗೆಯೂ ಅರಿಯುತ್ತಾನೆ. ಇದರ ಮಧ್ಯೆ ಆತ ಪ್ರೇಮ-ಪ್ರಣಯ ಎಂದು ಸಂತೋಷವಾಗಿರುತ್ತಾನೆ. ಆದರೆ, ಆತನ ಸಂತೋಷ್ ಹೆಚ್ಚು ದಿನ ಉಳಿಯುವುದಿಲ್ಲ, ಕಾರಣ ಆತನ ಪ್ರೇಯಸಿಗೆ ಈತನ `ಮಠ ಸಂಚಾರ’ದ ಬಗ್ಗೆ ಬಿನ್ನಾಭಿಪ್ರಾಯವಿರುತ್ತದೆ. ತನ್ನ ಸಮಾಜಮುಖೀ ಕಾರ್ಯಕ್ಕಾಗಿ ಪ್ರೇಯಸಿಯನ್ನೇ ದೂರ ಮಾಡುವ ಸಂತೋಷ್ ಒಂದು ರೀತಿಯಲ್ಲಿ `ತ್ಯಾಗಿ’ ಕೂಡ.
Abbara Review: ಅಬ್ಬರದ `ತ್ರಿಬಲ್ ರೈಡಿಂಗ್’!
ನೈಜ ಕಥೆಗಳನ್ನು ಆಧರಿಸಿದ ಚಿತ್ರ `ಮಠ’ವನ್ನುಇ ಯಾವುದೇ ಮಸಾಲೆ ಸೇರಿಸದೆ ತರೆಯ ಮೇಲೆ ತಂದಿರೋದರಿAದ ನಿರ್ದೇಶಕ ರವೀಂದ್ರ ವೆಂಶಿ ಅವರ ಕೆಲಸ ಮೆಚ್ಚುಗೆಯಾಗುತ್ತದೆ. ಇಲ್ಲಿ ಗುರು ಪ್ರಸಾದ್ ನಿರ್ದೇಶನದ ಸೂಪರ್ ಹಿಟ್ ಸಿನಿಮಾ `ಮಠ’ ಮತ್ತು ರವೀಂದ್ರ ವೆಂಶಿ ಸಿನಿಮಾವನ್ನು ತುಲನೆ ಮಾಡಿ ನೋಡುವ ಅಗತ್ಯವಿಲ್ಲ, ಎರಡೂ ಚಿತ್ರಗಳೂ ಕಂಟೆAಟ್ ವಿಚಾರದಲ್ಲಿ ವಿಭಿನ್ನವಾಗಿ ನಿಲ್ಲುತ್ತವೆ. ಈ ಹಿಂದೆ `ಮಠ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದು ಸಿನಿಮಾ ನೋಡಿದಾಗ ಹುಸಿಯಾಗುವುದಿಲ್ಲ.
ನವೆಂಬರ್ 25 ರಿಂದ ರಾಜ್ಯಾದ್ಯಂತ “ತ್ರಿಬಲ್ ರೈಡಿಂಗ್” ಹೊರಡಲಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್
ಫಿಲಾಸಫಿಕಲ್ ಹಾಗೂ ಹಾಸ್ಯದ ಮೂಲಕ ಸಮಾಜದ ಕಲ್ಮಶವನ್ನು ಎತ್ತಿ ತೋರಿಸುವ `ಮಠ’ ಹಲವು ಆಯಾಮಗಳಲ್ಲಿ ಪ್ರಸ್ತುತತೆಯನ್ನು ಪಡೆದುಕೊಳ್ಳುತ್ತದೆ. ಕರ್ನಾಟಕದಲ್ಲಿರುವ ಮಠಗಳ ಬಗ್ಗೆ ಹಾಗೂ ಅಲ್ಲಿ ನಡೆದಂತ ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ನಿರ್ದೇಶಕ ರವೀಂದ್ರ ವೆಂಶಿ ಬರೆದಿರುವ ಚಿತ್ರಕಥೆ ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಬಹುದಿತ್ತು ಎಂದು ಅಲ್ಲಲ್ಲಿ ಅನ್ನಿಸುತ್ತದೆ. ರವೀಂದ್ರ ವೆಂಶಿ ಈ ಹಿಂದೆ ನಿರ್ದೇಶನ ಮಾಡಿದ್ದ`’ಪುಟಾಣಿ ಸಫಾರಿ’, `ವರ್ಣಮಯ’, ಸಿನಿಮಾಗಳಿಗಿಂತ `ಮಠ’ ಹೆಚ್ಚು ಮಾರ್ಕ್ ಪಡೆದುಕೊಳ್ಲುತ್ತದೆ.
300 ಕೇಂದ್ರಗಳಲ್ಲಿ 50 ದಿನಗಳನ್ನು ಮುಗಿಸಿ ಮುನ್ನುಗ್ಗುತ್ತಿರುವ ಹೊಂಬಾಳೆ ಫಿಲಂಸ್ ನಿರ್ಮಾಣದ `ಕಾಂತಾರ’
ವಿ ಆರ್ ಕಂಬೈನ್ಸ್ ಬ್ಯಾನರ್ ನಡಿ ಆರ್.ರಮೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು ನಿಜಕ್ಕೂ ಮೆಚ್ಚಬೇಕಾದ ಸಂಗತಿ, ಏಕೆಂದರೆ `ಮಾಸ್-ಕಾಸು’ ಅನ್ನುವ ಕಾಲದಲ್ಲಿ ಕ್ಲಾಸ್ ಕಥೆಗೆ ಒತ್ತುಕೊಟ್ಟಿದ್ದಾರೆ. ಬಹು ತಾರಾಗಣ ಒಳಗೊಂಡ ಈ ಚಿತ್ರದಲ್ಲಿ ಸಂತೋಷ್ ದಾವಣಗೆರೆ ನಾಯಕ ನಟನಾಗಿ ನಟಿಸಿದ್ದು, ನಿರ್ದೇಶಕರು ಸಂತೋಷ್ ನಟನೆಯ ಬಗ್ಗೆ ಹೆಚು ಗಮನ ಹರಿಸಿದ್ದರೆ ಆ ಪಾತ್ರ ಇನ್ನಷ್ಟು ಅರ್ಥಪೂರ್ಣ ಅನ್ನಿಸುತ್ತಿತ್ತು. ಇನ್ನು ಸಾಧುಕೋಕಿಲ, ರಮೇಶ್ ಭಟ್, ತಬಲ ನಾಣಿ, ಶರತ್ ಲೋಹಿತಾಶ್ವ, ಬ್ಯಾಂಕ್ ಜನಾರ್ಧನ್, ರಾಜು ತಾಳಿಕೋಟೆ, ಮಂಡ್ಯ ರಮೇಶ್, ಗುರುಪ್ರಸಾದ್, ಬಿರಾದರ್ ಎಲ್ಲರೂ ರವೀಂದ್ರ ವೆಂಶಿ ಹೇಳ ಹೊರಟ ಕಥೆಗೆ ಶಕ್ತಿ ತುಂಬಿದ್ದಾರೆ. ಜೀವನ್ ಗೌಡ ಛಾಯಾಗ್ರಾಹಣ ಜಿತ್ರದ ಜೀವಾಳ. ಶ್ರೀ ಗುರು ಸಂಗೀತ ಅಲಲ್ಲಿ ಆಪ್ತವೆನಿಸುತ್ತದೆ. ಇನ್ನು, ಯೋಗ ರಾಜ್ ಭಟ್, ವಿ.ನಾಗೇಂದ್ರ ಪ್ರಸಾದ್, ಗೌಸ್ ಫಿರ್ ಸಾಹಿತ್ಯ ಕಥೆಯ ಓಘವನ್ನು ಹೆಚ್ಚಿಸಿದೆ.
ಒಟ್ಟಿನಲ್ಲಿ, ಸದ್ಯಕ್ಕೆ ಮಟ ಮಟ ಮಧ್ಯಾಹ್ನವೇ ಮಾಡಬಾರದ ಕೆಲಸಕ್ಕೆ ಇಳಿದಿರುವ ಕೆಲವು ಮಠಗಳ ಹಿಂದಿನ ಅಗೋಚರ ಕೈಗಳನ್ನು ದಿಟ್ಟವಾಗಿ ತೆರೆಯ ಮೇಲೆ ತೆರದಿಟ್ಟಿರುವ ರವೀಂದ್ರ ವೆಂಶಿ ಮತ್ತು ತಂಡದ ಕೆಲಸ ನಿಜಕ್ಕೂ ಸ್ವಾಹತಾರ್ಹ.