Sandalwood Leading OnlineMedia

ಸ್ಯಾಂಡಲ್‌ವುಡ್‌ ಚಿತ್ರ ನಿರ್ಮಾಪಕ, ಜೆಟ್‌ಲಾಗ್‌ ಪಬ್‌ ಮಾಲೀಕ,ಸೌಂದರ್ಯ ಜಗದೀಶ್‌ ಆತ್ಮಹತ್ಯೆ

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕ್‌ಲೈನ್‌ ವೆಂಕಟೇಶ್ ಸೇರಿದಂತೆ ಸೆಲೆಬ್ರಿಟಿಗಳ ಜತೆ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಖ್ಯಾತ ನಿರ್ಮಾಪಕ ಸೌಂದರ್ಯ ಜಗದೀಶ್​ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.ಅಪ್ಪು ಪಪ್ಪು, ಸ್ನೇಹಿತರು ಮುಂತಾದ ಸಿನಿಮಾಗಳನ್ನು ಅವರು ನಿರ್ಮಾಣ ಮಾಡಿದ್ದರು. ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ಇದನ್ನೂ ಒದಿ ಅಪರೂಪದ ಕಥೆ ಹೊತ್ತು ತಂದ ‘ಕಾಂಗರೂ’

ಬೆಂಗಳೂರಿನಲ್ಲಿ ಜೆಟ್​ಲಾಗ್​ ಪಬ್​ ಹೊಂದಿದ್ದ ಜಗದೀಶ್​ ಅವರು ಬಿಲ್ಡರ್​ ಕೂಡ ಆಗಿದ್ದರು. ಇನ್ನೂ ನಾನಾ ಕಾರಣಗಳಿಗೆ ವಿವಾದಕ್ಕೆ ಕಾರಣರಾಗಿದ್ದರು. ಈಚೆಗೆ ಇವರ ಒಡೆತನದ ಜೆಟ್‌ಲಾಗ್ ಪಬ್‌ನಲ್ಲಿ ‘ಕಾಟೇರ’ ಚಿತ್ರತಂಡ ಅವಧಿ ಮೀರಿ ಪಾರ್ಟಿ ಮಾಡಿದ ಆರೋಪವಾಗಿತ್ತು. ಅದರಲ್ಲಿ ದರ್ಶನ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಅವರ ಸ್ನೇಹಿತರು ಭಾಗಿಯಾಗಿದ್ದರು.ಆ ಬಳಿಕ 25 ದಿನಗಳ ಕಾಲ ರೆಸ್ಟೋ ಬಾರ್​ ಲೈಸೆನ್ಸ್​ ರದ್ದು ಮಾಡಲಾಗಿತ್ತು. ಮೂಲಗಳ ಪ್ರಕಾರ, ಕೆಲವೇ ದಿನಗಳ ಹಿಂದೆ ಬ್ಯಾಂಕ್​ನವರು ಸೌಂದರ್ಯ ಜಗದೀಶ್​ ಅವರ ಮನೆಯನ್ನು ಸೀಜ್​ ಮಾಡಿದ್ದರು ಎನ್ನಲಾಗಿದೆ. ಒಟ್ಟಿನಲ್ಲಿ ಯಾವ ಕಾರಣಕ್ಕಾಗಿ ಸೌಂದರ್ಯ ಜಗದೀಶ್​ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

ಇದನ್ನೂ ಒದಿ ಬೋಲ್ಡ್ ವೈಟ್ ಡ್ರೆಸ್ನಲ್ಲಿ ಸಂಜನಾ ಆನಂದ್ !!1

ನೆರೆಹೊರೆಯವರ ಜೊತೆ ಅವರ ಕುಟುಂಬದವರು ಗಲಾಟೆ ಮಾಡಿಕೊಂಡಿದ್ದು ಕೂಡ ಭಾರಿ ವಿವಾದ ಸೃಷ್ಟಿಸಿತ್ತು.ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನಲ್ಲಿ ಈ ಘಟನೆ ನಡೆದಿದ್ದು, ಸದ್ಯ ಸುಗುಣ ಆಸ್ಪತ್ರೆಯಲ್ಲಿ ಅವರ ಮೃತದೇಹ ಇಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.ಉದ್ಯಮಿಯಾಗಿದ್ದ ಜಗದೀಶ್‌ ಅವರು ಅಪ್ಪು & ಪಪ್ಪು, ಸ್ನೇಹಿತರು, ರಾಮ್ ಲೀಲಾ, ಮಸ್ತ್ ಮಜಾ ಮಾಡಿ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು.ಇತ್ತೀಚೆಗಷ್ಟೇ ಅದ್ಧೂರಿಯಾಗಿ ಮಗಳ ಮದುವೆ ಮಾಡಿದ್ದರು ಸೌಂದರ್ಯ ಜಗದೀಶ್. ಮಗಳ ಮದುವೆ ಸಂದರ್ಭದಲ್ಲಿ ಖುಷಿ ಖುಷಿಯಾಗಿಯೇ ಇದ್ದರು. ಇದೀಗ ಅವರ ಆತ್ಮಹತ್ಯೆಯ ಸುದ್ದಿ ಕೇಳಿ ಚಿತ್ರರಂಗದ ನಟ-ನಟಿಯರು ಸಂತಾಪ ಸೂಚಿಸಿದ್ದಾರೆ.

Share this post:

Related Posts

To Subscribe to our News Letter.

Translate »