Sandalwood Leading OnlineMedia

“ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ” ಚಿತ್ರಕ್ಕೆ ಸುಧಾಮೂರ್ತಿ ಮೆಚ್ಚುಗೆ

 

 

ಸರಳತೆ, ಸಜ್ಜನಿಕೆಗೆ ಮತ್ತೊಂದು ಹೆಸರು ಸುಧಾಮೂರ್ತಿ. ಪ್ರತಿಷ್ಠಿತ ಇನ್ಫೋಸಿಸ್ ಸಂಸ್ಥೆಯ ಮುಖ್ಯಸ್ಥರಾಗಿದ್ದರೂ ಅವರ ಜೀವನಶೈಲಿ ಎಲ್ಲರಿಗೂ ಮಾಧರಿ. ಈಗಿನ ಮಕ್ಕಳು ಹೆಚ್ಚು ಮೊಬೈಲ್ ಬಳಸುವುದರಿಂದ ಆಗುವ ಪರಿಣಾಮಗಳ ಸುತ್ತ ಹೆಣೆಯಲಾಗಿರುವ, ಮಧುಚಂದ್ರ ನಿರ್ದೇಶನದಲ್ಲಿ ಸೃಜನ್ ಲೋಕೇಶ್ ಹಾಗೂ ಮೇಘನಾರಾಜ್ ನಟಿಸಿರುವ “ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ” ಚಿತ್ರವನ್ನು ಸುಧಾಮೂರ್ತಿ ಅವರು ಇತ್ತೀಚೆಗೆ ವೀಕ್ಷಿಸಿದರು.

ಈ ಸಿನಿಮಾವು ಒಂದು ಹೊಸ ರೀತಿಯ ಪ್ರಯೋಗ,  ನಾನು ನಿಜ ಜೀವನದಲ್ಲಿ ನೋಡಿದ್ದೀನಿ. ನಾವು ಈಗ  ಮಕ್ಕಳ ಅಡಿಕ್ಷನ್ ನೋಡಿ ಅಯ್ಯೋ ಮಕ್ಕಳು ಅಂದುಕೊಳ್ಳುತ್ತೇವೆ.  ಆದರೆ ನಿಜವಾಗಲೂ ಅದು ಸಮಸ್ಯೆ ಆಗುತ್ತಿದೆ.  ನಮ್ಮ ಸಮಾಜದಲ್ಲಿ . ಮೊಟ್ಟ ಮೊದಲ ಬಾರಿಗೆ ಈ ರೀತಿಯ ಪ್ರಯತ್ನ ಮಾಡಿದ್ದಾರೆ. ಸಿನಿಮಾ ಬಹಳ ಚೆನ್ನಾಗಿದೆ, humour ಆಗಿ ಮಾಡಿದ್ದಾರೆ, ಒಳ್ಳೆಯ ಕಾನ್ಸೆಪ್ಟ್. ಮತ್ತೆ ಸದ್ಯದ ಸಾಮಾಜಿಕ ಪರಿಸ್ಥಿತಿ ಕುರಿತಾಗಿ ಮಾಡಿರೋದಿಕ್ಕೆ ಅಭಿನಂದನೆಗಳು.

ಎಲ್ಲರೂ ಬಹಳ ಚೆನ್ನಾಗಿ ಅಭಿನಯಿಸಿದ್ದಾರೆ, ನಿರ್ದೇಶಕರಿಗೆ ವಿಶೇಷವಾಗಿ ಅಭಿನಂದನೆಗಳು ಯಾಕೆ ಅಂದರೆ, ಇದರಲ್ಲಿ  ಲವ್ ಸ್ಟೋರಿ ಅಲ್ಲ, ರೊಮ್ಯಾಂಟಿಕ್ ಸೀನ್ಸ್ ಇಲ್ಲ,  ಹೊಸ ತರ ಇದೆ. ಒಂದು ಅದ್ಭುತವಾದ ಕಲ್ಪನಾಶಕ್ತಿ ಹಾಗೂ ಕಠಿಣವಾದ ಸಮಸ್ಯೆಗೆ ಅದ್ಭುತವಾದ ಸೊಲ್ಯೂಷನ್ ಇದೆ.

ಇದು ಬೇರೆ ಬೇರೆ ಭಾಷೆಯಲ್ಲಿ ಬರಬೇಕು ಅಂತ ನನ್ನ ಅಭಿಪ್ರಾಯ. ಹಿಂದಿ ,ಬೆಂಗಾಲಿ,ಮರಾಠಿ ,ತಮಿಳು, ತೆಲುಗು, ಕಾಶ್ಮೀರ ಯಿಂದ ಕನ್ಯಾಕುಮಾರಿಯ ವರೆಗೂ ಇದು ಸಾಮಾನ್ಯ ಸಮಸ್ಯೆ,  ಅದಕ್ಕೆ ಇದೇ ತರ ಹೊಸ ಹೊಸ ಪ್ರಯೋಗಗಳು ಸಿನೆಮಾ ಮೂಲಕ ಹೊರ ಬರಲಿ ಅಂತ ನಾನು ಆಶಿಸುತ್ತೇನೆ, ಇಡೀ ತಂಡಕ್ಕೆ ಅಭಿನಂದನೆಗಳು ಎಂದರು ಸುಧಾಮೂರ್ತಿ.

Share this post:

Related Posts

To Subscribe to our News Letter.

Translate »