Sandalwood Leading OnlineMedia

ಬೆಂಗಳೂರಿನಲ್ಲಿ ಸ್ಪೈ ಸಿನಿಮಾ ಪ್ರಚಾರಕ್ಕಾಗಿ ಬಂದಿಳಿದ ನಿಖಿಲ್ ಸಿದ್ಧಾರ್ಥ್ ಹಾಗೂ ಐಶ್ವರ್ಯ ಮೆನನ್

ಟಾಲಿವುಡ್ ಚಿತ್ರರಂಗದ ಟ್ಯಾಲೆಂಟೆಡ್ ನಟ ಅಖಿಲ್ ಸಿದ್ಧಾರ್ಥ್ ನಟನೆಯ ಬಹು ನಿರೀಕ್ಷಿತ ಸಿನಿಮಾ ಸ್ಪೈ ಇದೇ 29ರಂದು ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆ ಚಿತ್ರತಂಡ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಮುಂಬೈನಲ್ಲಿ ಪ್ರಮೋಷನ್ ಮುಗಿಸಿರುವ ಸ್ಪೈ ಟೀಂ ಈಗ ಬೆಂಗಳೂರಿಗೆ ಬಂದಿಳಿದಿದೆ. ನಾಯಕ ನಿಖಿಲ್ ಸಿದ್ಧಾರ್ಥ್, ನಾಯಕಿ ಐಶ್ವರ್ಯ ಮೆನನ್ ಸಿಲಿಕಾನ್ ಸಿಟಿಯಲ್ಲಿ ಪ್ರಚಾರ ನಡೆಸಲಿದ್ದಾರೆ.

ಇದನ್ನೂ ಓದಿ:  `ಧೂಮಂ’ಸಿನಿಮಾದ ನೆಗೆಟಿವ್ ವಿಮರ್ಶೆಗಳಿಗೆ ಬೇಸತ್ತು`ಕಾಂತಾರ’ ವಿರುದ್ಧ ಮಾತಾಡಿದ್ರಾ ಪವನ್?!

ಸುಭಾಷ್ ಚಂದ್ರ ಬೋಸ್ ಸಾವಿನ ರಹಸ್ಯ ಕಥಾಹಂದರ ಹೊಂದಿರುವ ಸ್ಪೈ ಸಿನಿಮಾಗೆ ಖ್ಯಾತ ನಿರ್ದೇಶಕ ಹಾಗೂ ಸಂಕಲನಕಾರರು ಆಗಿರುವ ಗ್ಯಾರಿ ಬಿ ಹೆಚ್‌ ಸ್ಪೈ ಸಿನಿಮಾಗೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಎವರು ಮತ್ತು ಹಿಟ್‌ ಸಿನಿಮಾಗಳ ನಿರ್ಮಾಪಕ ಕೆ.ರಾಜಶೇಖರ್‌ ರೆಡ್ಡಿ, ಚರಣ್‌ ರಾಜ್‌ ಉಪ್ಪಲಪತಿ ಚಿತ್ರ ನಿರ್ಮಿಸಿದ್ದಾರೆ. ಸನ್ಯಾ ಠಾಕೂರ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಸ್ಪೆಷಲ್‌ ರೋಲ್‌ ನಲ್ಲಿ ಬಾಹುಬಲಿ ಬಲ್ಲಾಳದೇವ ರಾಣಾ ದಗ್ಗುಭಾಟಿ ಕೂಡ ಕಾಣಿಸಿಕೊಂಡಿದ್ದಾರೆ. ಅಭಿನವ್‌ ಗೋಮತಮ್, ಮಕರಂದ್‌ ದೇಶಪಾಂಡೆ, ನಿತಿನ್‌ ಮೆಹ್ತಾ, ರವಿವರ್ಮ, ಕೃಷ್ಣ ತೇಜ, ಪ್ರಿಶಾ ಸಿಂಗ್‌, ಸೋನಿಯಾ ನರೇಶ್‌ ಮತ್ತು ಇತರರು ತಾರಾಬಳಗದಲ್ಲಿದ್ದಾರೆ. ಈಗಾಗಲೇ ಕಾರ್ತಿಕೇಯ, ಕಾರ್ತಿಕೇಯ-2 ನಂತಹ ಮೆಗಾ ಬ್ಲಾಕ್ ಬಸ್ಟರ್ ಹಿಟ್ ಕೊಟ್ಟಿರುವ ನಿಖಿಲ್ ಸಿದ್ಧಾರ್ಥ್ ಸ್ಪೈ ಮೇಲೆ ನಿರೀಕ್ಷೆ ಹೆಚ್ಚಿದೆ.

Share this post:

Translate »