ಆರ್‌ಜೆ, ನಿರೂಪಕಿ, ನಟಿಯಾಗಿ ಗುರುತಿಸಿಕೊಂಡಿರುವ ಸಿರಿ ರವಿಕುಮಾರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಮಹರ್ಷಿ ಎಂಬುವವರ ಜತೆ ಹಸೆಮಣೆ ಏರಿದ್ದಾರೆ. ಆದರೆ ತನ್ನ ಮದುವೆಯ ವಿಚಾರ ಎಲ್ಲಿಯೂ ನಟಿ ಸಿರಿ ಬಹಿರಂಗ ಪಡಿಸಿರಲಿಲ್ಲ.
ಈಗ ಸಿರಿ ಮತ್ತು ಮಹರ್ಷಿ ಅವರ ಮದುವೆ ಸುಂದರ ಕ್ಷಣಗಳ ಫೋಟೋಗಳು ವೈರಲ್ ಆಗಿದೆ.
ಬೆಂಗಳೂರಿನ ಬನಶಂಕರಿಯ ನಿವಾಸಿಯಾಗಿರುವ ಸಿರಿ, ರವಿಕುಮಾರ್ ಎಂಬುವವರ ಕೈಹಿಡಿದಿದ್ದಾರೆ.
ಗುರುಹಿರಿಯರ ಸಮ್ಮುಖದಲ್ಲಿ ಕಳೆದ ವರ್ಷದ ಕೊನೆಯಲ್ಲಿ ಹಸೆಮಣೆ ಏರಿದ್ದಾರೆ. ಇನ್ನು ಕಿರುತೆರೆಯಲ್ಲೂ ಖ್ಯಾತಿ ಗಳಿಸಿರುವ ಕನ್ನಡ ಕೋಗಿಲೆ ರಿಯಾಲಿಟಿ ಶೋ ಮೂಲಕ ಮನೆಮಾತಾಗಿದ್ದರು. ಈ ಶೋ ಸಿರಿ ಅವರಿಗೆ ದೊಡ್ಡ ಮಟ್ಟದಲ್ಲಿ ಖ್ಯಾತಿಯನ್ನ ತಂದುಕೊಟ್ಟಿತ್ತು.
ಇತ್ತೀಚೆಗೆ ರಕ್ಷಿತ್ ಶೆಟ್ಟಿ ನಿರ್ಮಾಣದ `ಸಕುಟುಂಬ ಸಮೇತ’ ಚಿತ್ರದ ಮೂಲಕ ಗುರುತಿಸಿಕೊಂಡಿದ್ದರು. ಖಾಸಗಿ ಜೀವನಕ್ಕೂ ಸಮಯ ಕೊಡತ್ತಾ ಸಿನಿಮಾದತ್ತ ಬ್ಯುಸಿಯಾಗಿದ್ದಾರೆ.