ಸ್ಯಾಂಡಲ್ ವುಡ್ ಗಾಯಕ, ಸಂಗೀತ ನಿರ್ದೇಶಕ ವಾಸುಕಿ ವೈಭವ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಸುದ್ದಿಯನ್ನು ಅವರೇ ಈಗ ಖಚಿತಪಡಿಸಿದ್ದಾರೆ.
ಇದನ್ನೂ ಓದಿ ನಾಳೆ ತೆರೆಗೆ ಬರಲಿದೆ ಎಸ್ತರ್ ನರೋನ್ಹಾ ಹೊಸ ಕನಸು ‘ದಿ ವೆಕೆಂಟ್ ಹೌಸ್’ ರಿಲೀಸ್
ತಮ್ಮ ಬಹುಕಾಲದ ಗೆಳತಿ ಬೃಂದಾ ವಿಕ್ರಮ್ ಜೊತೆ ವಾಸುಕಿ ಹಸೆಮಣೆ ಏರುತ್ತಿದ್ದಾರೆ. ಈಗಾಗಲೇ ಮದುವೆ ಶಾಸ್ತ್ರಗಳು ಆರಂಭವಾಗಿದೆ. ಬೃಂದಾ ಜೊತೆಗಿರುವ ಫೋಟೋವನ್ನೂ ವಾಸುಕಿ ಪ್ರಕಟಿಸಿದ್ದು, ಹೊಸ ಪಯಣ ಆರಂಭವಾಗಿದೆ. ನಿಮ್ಮೆಲ್ಲರ ಆಶೀರ್ವಾದ ಮತ್ತು ಹಾರೈಕೆ ಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ ದೀಪಾವಳಿಗೆ ಬಂತು ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾದ ಹೊಸ ಪೋಸ್ಟರ್…ಶೀಘ್ರದಲ್ಲೇ ಥಿಯೇಟರ್ ನಲ್ಲಿ ದಿಗಂತ್ ದರ್ಬಾರ್
ರಂಗಭೂಮಿ ಹಿನ್ನಲೆಯುಳ್ಳ ಬೃಂದಾ ಶಿಕ್ಷಕಿಯೂ ಹೌದು. ಬಹಳ ಸಮಯದಿಂದ ವಾಸುಕಿ ಮತ್ತು ಬೃಂದಾ ಪರಸ್ಪರ ಪ್ರೀತಿಸುತ್ತಿದ್ದರು. ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.