ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಉದ್ಘಾಟನೆಗೆ ದಿನಗಣನೆ ಆರಂಭಗೊಂಡಿದೆ.ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಕೋಟ್ಯಂತರ ಭಕ್ತರು ಕಾತುರದ ಕಣ್ಣುಗಳಿಂದ ಕಾಯುತ್ತಿದ್ದಾರೆ. ಈಗಾಗ್ಲೇ ಸಿದ್ಧತೆಗಳು ಭರದಿಂದ ನಡೆಯುತ್ತಿದ್ದು,ಸಾವಿರಾರು ಮಂದಿ ಇದಕ್ಕಾಗಿ ಹಗಲಿರುಳು ಎನ್ನದೇ ಪ್ರಯತ್ನ ಮಾಡುತ್ತಿದ್ದಾರೆ.ಇತ್ತ ಖ್ಯಾತ ಗಾಯಕಿ ಕೆ.ಎಸ್. ಚಿತ್ರಾ ಅವರು ರಾಮಮಂದಿರ ಉದ್ಘಾಟನೆ ಸಮಯದಲ್ಲಿ ಜನರು ರಾಮನಾಮ ಜಪಿಸಿ ದೀಪಗಳನ್ನು ಬೆಳಗಿಸುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ “ಒಬ್ಬ ನಿರ್ದೇಶಕ ತಲೆಕೆಡಿಸ್ಕೊಂಡು ನಿಂತ್ರೆ…ಎಂಥಹ ಅದ್ಭುತವನ್ನೇ ಮಾಡಬಹುದು ಅನ್ನೋದಿಕ್ಕೆ ಈ ಚಿತ್ರವೇ ಸಾಕ್ಷಿ”
ಗಾಯಕಿ ಚಿತ್ರಾ ಅವರು ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ಬೆಂಬಲಿಸುವಂತೆ ಕರೆ ನೀಡಿರುವ ವಿಡಿಯೊಗೆ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಚಿತ್ರಾ ಅವರ ಹೇಳಿಕೆಯನ್ನು ಟೀಕಿಸಿದ್ದು, ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ.ಜನವರಿ 22 ರಂದು ಮಧ್ಯಾಹ್ನ 12:20 ಕ್ಕೆ ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾ ಸಮಾರಂಭ ನಡೆದಾಗ, ಪ್ರತಿಯೊಬ್ಬರೂ ‘ಶ್ರೀರಾಮ, ಜಯ ರಾಮ, ಜಯ ಜಯ ರಾಮ’ ಎಂಬ ಮಂತ್ರವನ್ನು ಪಠಿಸಬೇಕು. ಹಾಗೆಯೇ ಸಂಜೆಯ ವೇಳೆ ಮನೆಯ ಎಲ್ಲಾ ಭಾಗಗಳಲ್ಲಿ ಐದು ಬತ್ತಿಯ ದೀಪಗಳನ್ನು ಹಚ್ಚಬೇಕು. ದೇವರ ಆಶೀರ್ವಾದ ಎಲ್ಲರಿಗೂ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಲೋಕಾ ಸಮಸ್ತಾ ಸುಖಿನೋ ಭವಂತು ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.