ಸ್ಯಾಂಡಲ್‌ವುಡ್ ಖ್ಯಾತ ನಿರ್ದೇಶಕ ಸಿಂಪಲ್ ಸುನಿ ‘ಅವತಾರ ಪುರುಷ 2’ ಸಿನಿಮಾದ ನಂತರ ‘ದೇವರು ರುಜು ಮಾಡಿದನು’ ಟೈಟಲ್‌ನ ಹೊಸ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ‘ದೇವರು ರುಜು ಮಾಡಿದನು’ ಎಂಬುದು ಕುವೆಂಪುರವರ ಕವಿತೆ ಸಾಲಾಗಿದ್ದು ಅದನ್ನೇ ಚಿತ್ರದ ಟೈಟಲ್ ಆಗಿ ಇಟ್ಟಿದ್ದಾರೆ, ಇನ್ನೂ ಚಿತ್ರದ ನಾಯಕ ವಿರಾಜ್ ರಂಗಭೂಮಿ ಪ್ರತಿಭೆಯಾಗಿದ್ದು ಚಿತ್ರಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ, ವಿರಾಜ್ ತಂದೆ ಗೋವಿಂದ್ ರಾಜ್ ರವರ ಗ್ರೀನ್ ಹೌಸ್, ಪ್ರೆಸ್ ಮೀಟ್ ಮತ್ತು ಇವೆಂಟ್ ಗಳಿಗೆ ಹೆಸರಾಗಿದ್ದು ಈಗ ಅವರದೇ ಗ್ರೀನ್ ಹೌಸ್ ಮೂವೀಸ್ ಬ್ಯಾನರ್ ಮೂಲಕ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ, ಚಿತ್ರದ ತಂಡ ನಾಯಕಿ ಮತ್ತು ಇನ್ನಿತರ ಕಲಾವಿದರ ಹುಡುಕಾಟದಲಿದ್ದು, ಶೂಟಿಂಗ್ ಅನ್ನು ಸೆಪ್ಟೆಂಬರ್ ನಲ್ಲಿ ಶುರು ಮಾಡಲು ಚಿತ್ರತಂಡ ತಯಾರಿ ನಡೆಸುತ್ತಿದೆ, ಮುಂದಿನ ಅಪ್ಡೇಟ್ ಗಳನ್ನು ಚಿತ್ರತಂಡ ಕೆಲವೇ ದಿನಗಳಲ್ಲಿ ಹಂಚಿಕೊಳ್ಳಲಿದ್ದಾರೆ.
ಸಪ್ತಸಾಗರದಾಚೆಯಲ್ಲೂ `ಕೆಂಡ’ದ ಬಿಸುಪು! ಕ್ಕೆ ವಿದೇಶಿ ಪ್ರೇಕ್ಷಕರೂ ಫಿದಾ
ಇದೊಂದು ಮ್ಯೂಸಿಕಲ್ ಲವ್ ಸ್ಟೋರಿಯಾಗಿದ್ದು, ಚಿತ್ರದ ನಾಯಕಿ ಕುವೆಂಪು ಅಭಿಮಾನಿಯಾಗಿರುತ್ತಾಳೆ. ‘ದೇವರು ರುಜು ಮಾಡಿದನು’ ಎಂಬ ಕುವೆಂಪು ಕವಿತೆಯ ಒಳಾರ್ಥ ಕಾಡುವಂತಿದೆ. ಜೀವನದಲ್ಲಿ ನಾವೆಂದುಕೊಂಡಂತೆ ನಡೆಯಲ್ಲ. ನಮಗೆ ದೇವರು ಮೊದಲೇ ಸ್ಕ್ರೀಪ್ಟ್ ಮಾಡಿರುತ್ತಾನೆ. ಅದರಲ್ಲಿ ನಾವು ನಟಿಸುತ್ತಿರುತ್ತೇವೆ. ನಾವೇನು ಬದಲಾವಣೆ ಮಾಡಲು ಹೊರಟರೂ ದೇವರ ನಿರ್ಧಾರವನ್ನು ಬದಲಿಸಲು ಸಾಧ್ಯವಿಲ್ಲ ಎಂಬುದೇ ಈ ಸಿನಿಮಾದ ಒನ್‌ಲೈನ್ ಕಥೆಯಾಗಿದೆ.