ಸಿನಿಮಾ ಒಂದು ಉದ್ಯಮವೆಂದು ಪರಿಗಣಿಸಲ್ಪಟ್ಟಾಗ, ಪಾನ್ ಇಂಡಿಯಾ ಸಿನಿಮಾಗಳ ಮಧ್ಯೆ ಈ ನೆಲದ ಕಥೆ ಹೊತ್ತ ಚಿತ್ರಗಳಿಗೂ ತನ್ನದೇ ಆದ ಸ್ಥಾನವಿದೆ. ಈ ನಿಟ್ಟಿನಲ್ಲಿ ಇತ್ತೀಚಿಗೆ ರಿಲೀಸ್ ಆದ `ಸಿಂಹರೂಪಿಣಿ’ ಸಿನಿಮಾ ತನ್ನ ಸ್ಥಾನವನ್ನು ಬಿಗ್ ಬಜೆಟ್ ಚಿತ್ರಗಳ ನಡುವೆಯೂ ಉಳಿಸಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ. ಪ್ರಸ್ತುತ ದಿನಮಾನದಲ್ಲಿ ಹೊಡಿ-ಬಡಿ-ಕಡಿ ಚಿತ್ರಗಳ ಮಧ್ಯೆ ಭಕ್ತಿಪ್ರಧಾನ ಚಿತ್ರಗಳು ಬೇರೆ ಭಾಷೆಯಲ್ಲಿ ಸದ್ದು ಮಾಡುತ್ತಿದ್ದರೂ ನಮ್ಮಲ್ಲಿ ಬಲು ಅಪರೂಪ. `ಸಿಂಹರೂಪಿಣಿ’ ಸಿನಿಮಾ ಭಕ್ತಿ ಪ್ರಧಾನ ಚಿತ್ರದ ಕೊರತೆಯನ್ನು ನೀಗಿಸಿದೆ. ಹಿಂದು ಧರ್ಮದಲ್ಲಿ ಪ್ರತಿಯೊಂದು ದೇವರಿಗೂ ಹಿನ್ನಲೆ, ಪುರಾಣ ಇದ್ದೇ ಇರುತ್ತದೆ. ಈ ನಿಟ್ಟಿನಲ್ಲಿ ದೇವಿಯು ಮಹಾಲಕ್ಷೀ ರೂಪದಲ್ಲಿರುವವಳು ಮಾರಮ್ಮ ಯಾಕೆ ಆಗ್ತಾಳೆ? ಮಾರಮ್ಮನಾಗಿಗೂ ಕೋಣಕ್ಕೂ ಇರುವ ಸಂಬ0ಧವಾದರೂ ಏನು? ಭಕ್ತಿ ಪ್ರಧಾನ ಚಿತ್ರವೊಂದು ಮನೋರಂಜನಾತ್ಮಕವಾಗಿಯೂ ಹೇಗೆ ಸೈ ಅನ್ನಿಸಿಕೊಳ್ಳುತ್ತದೆ ಅನ್ನುವುದಕ್ಕೆ ಚಿತ್ರ ನೋಡಲೇಬೇಕು.
READ MORE ; Prakarana Tanikha Hantadallide Movie Review ; ಅಸಮಾನ್ಯ ಪ್ರಕರಣದಲ್ಲೊಂದು ಅದ್ಭುತ ಸಂದೇಶ
ಕೋಣ ಬಲಿ, ಪವಾಡ, ಮಹಿಮೆಗಳು ಮೂಲಕ ರೋಚಕತೆಯಿಂದ ಸಾಗುವ `ಸಿಂಹರೂಪಿಣಿ’, ತನ್ನ ವಿವಿಧ ರೂಪಾಂತರದ ಮೂಲಕ ಪರದೆಯ ಮೂಲಕ ಅದ್ಭುತವಾಗಿ ಕಥೆ ಕಟ್ಟಿಕೊಡುತ್ತಾಳೆ. ಇಡೀ ಸಿನಿಮಾ ಅತ್ಯಂತ ಸಹಜವಾಗಿ ಮೂಡಿ ಬಂದಿದ್ದು, ಪ್ರೇಕ್ಷಕರಿಗೆ ಮಾರಮ್ಮನ ಮಹಿಮೆಯನ್ನು ಹಲವು ಪಾತ್ರಗಳ ಮೂಲಕ ಪ್ರೇಕ್ಷಕರಿಗೆ ನಿರ್ದೇಶಕರು ಪ್ರಭಾವಶಾಲಿಯಾಗಿ ದಾಟಿಸಿದ್ದಾರೆ. ಇನ್ನೊಂದು ಮಹತ್ತರ ಸಂಗತಿಯೆ0ದರೆ ಮೇಲ್ನೋಟಕ್ಕೆ ಪ್ರೇಮ-ಪ್ರಣಯ ಎಪಿಸೋಡುಗಳು ಕೂಡ ಕಥೆಯೊಳಗೆಯೇ ಬೆರೆತುಕೊಂಡಿದೆ. ಅಲ್ಲಿನ ಊರ ಗೌಡ ದೇವಿಯ ವಿರುದ್ದ ಸಂಚನ್ನು ರೂಪಿಸಲು ಹೋದಾಗ ನಡೆಯುವ ಘಟನೆಗಳು, ಅಂತ್ಯದಲ್ಲಿ ಬರುವ ಸೀನುಗಳು ಚಿತ್ರದ ಚಿತ್ರಕಥೆಯ ಶಕ್ತಿಯನ್ನು ಎತ್ತಿಹಿಡಿದಿದೆ. `ಕೆಜಿಎಫ್’ ಖ್ಯಾತಿಯ ಕಿನ್ನಾಳ್ ರಾಜ್ ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿರುವ ಅವರ ಪ್ರಾಮಾಣಿಕ ಸಿನಿಮಾ ಪ್ರೀತಿ ಪ್ರತೀ ಶಾಟ್‌ನಲ್ಲೂ ಕಾಣುತ್ತದೆ. ಕಥೆ ಬರೆದು ನಿರ್ಮಾಣ ಮಾಡಿರುವ ಕೆ.ಎಂ.ನ0ಜುಡೇಶ್ವರ, ಅಮ್ಮನವರ ಭಕ್ತನಾಗಿದ್ದು ಈ ಸಿನಿಮಾ ನಿರ್ಮಿಸಿ ತಮ್ಮ ಭಕ್ತಿಯನ್ನು ಮೆರೆದಿದ್ದಾರೆ. ಇಂತಹ ಕಂಟೆಟ್‌ನ ಚಿತ್ರವನ್ನು ನಿರ್ಮಿಸಲು ಹಿಂದೂ ಮುಂದೂ ನೋಡುವವರ ಮಧ್ಯೆ ಈ ನೆಲದ ಕಥೆ ಹೊತ್ತ ಚಿತ್ರವನ್ನು ನಿರ್ಮಿಸಿರುವ ನಂಜುಡೇಶ್ವರ ಸಿನಿ ಪ್ರೇಮೆ ನಿಜಕ್ಕೂ ಮೆಚ್ಚ ತಕ್ಕದ್ದು.
READ MORE ; ಸೆಟ್ಟೇರಿತು ‘ಅಭಿಮನ್ಯು s/o ಕಾಶಿನಾಥ್’…ಕಾಶಿನಾಥ್ ಪುತ್ರನ ಸಿನಿಮಾಗೆ ಕೋಮಲ್ ಸಾಥ್
ನಾಯಕಿಯಾಗಿ ಅಂಕಿತಾ ಗೌಡ ಚೆಂದ ಅಭಿನಯ ನೀಡಿದ್ದಾರೆ. ಮಾರಮ್ಮ ದೇವಿಯಾಗಿ ಯಶಸ್ವಿನಿ ಸುಬ್ಬೆಗೌಡ, ವಂಚಕನಾಗಿ ಸುಮನ್, ದೇವಿಯ ಆರಾಧಕರಾಗಿ ಹರೀಶ್‌ರೈ, ಗೌಡನಾಗಿ ದಿನೇಶ್‌ಮಂಗಳೂರು, ದೇವಿಯ ಪತಿಯಾಗಿ ಯಶ್ ಶೆಟ್ಟಿ, ತಂದೆಯಾಗಿ ನೀನಾಸಂ ಅಶ್ವಥ್, ಬಾಲದೇವಿಯಾಗಿ ಖುಷಿ ಬಸ್ರೂರು, ಖಳನಾಗಿ ಆರವ್ ಲೋಹಿತ್ ಉಳಿದಂತೆ ವಿಜಯ್‌ಚೆಂಡೂರು, ತಬಲಾನಾಣಿ, ದಿವ್ಯಾ ಆಲೂರು, ಸಾಗರ್ ಸೇರಿದಂತೆ ನೂರ ಇಪ್ಪತ್ತ್ತನಾಲ್ಕು ಪೋಷಕ ಕಲಾವಿದರುಗಳಿಗೆ ಅವಕಾಶ ಮಾಡಿಕೊಡಲಾಗಿದ್ದು ,ನಿರ್ದೇಶಕ ಕಿನ್ನಾಳ್ ರಾಜ್ ಅವರ ಶ್ರಮ ಮೆಚ್ಚತಕ್ಕದ್ದು. ಹಾಡೊಂದರಲ್ಲಿ ಸಂಗೀತ ಸಂಯೋಜಕ ರವಿಬಸ್ರೂರು ಕಾಣಿಸಿಕೊಂಡಿದ್ದು, ಗೆಳೆಯ ಕಿನ್ನಾಳ್ ಜೊತೆ ನಿಂತಿದ್ದಾರೆ. ಆಕಾಶ್ ಪರ್ವ ಸಂಗೀತದ ಎರಡು ಹಾಡುಗಳು ಉತ್ತಮವಾಗಿ ಮೂಡಿಬಂದಿದ್ದು, ಕಿರಣ್‌ಕುಮಾರ್ ಛಾಯಾಗ್ರಹಣ ಚಿತ್ರದ ಜಾನರ್‌ಗೆ ಪೂರಕವಾಗಿದೆ. ವಲ್ಲಿ ವಸ್ತ್ರ ವಿನ್ಯಾಸ, ಪರಶುರಾಮ್ ವರ್ಣಾಲಂಕಾರ, ಪ್ರಭು ಬಡಿಗೇರ್ ಕಲಾ ನಿರ್ದೇಶನ ನಿರ್ದೇಶಕರು ಕಂಡ ಕನಸನ್ನು ನನಸು ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದೆ. ಚಿತ್ರದ ಕೊನೆಯಲ್ಲಿ ಇನ್ನೊಂದು ಭಾಗದಲ್ಲಿ ಬರಲಿದ್ದೇನೆ ಎಂದು ಕ್ಲೂ ಕೊಡುವ `ಸಿಂಹರೂಪಿಣಿ’ ಸಿನಿಮಾ ಆಸ್ತಿಕರ ಪಾಲಿಗೆ ಆಸ್ತಿಯಾಗಿದ್ದು, ನಾಸ್ತಿಕರಿಗೂ ಹೊಸ ಅನುಭವ ನೀಡುವ ಚಿತ್ರ.