Sandalwood Leading OnlineMedia

ಅರ್ಥಪೂರ್ಣ ಮಹಿಳಾ ದಿನಾಚರಣೆ; ಪ್ರತಿಷ್ಠಿತ `Silver screen women achievers award-2023’  ಪ್ರಧಾನ

ಇತ್ತೀಚಿಗೆ ಯುನಿವರ್ಸಲ್ ಫಿಲಂ ಮೇಕರ್ಸ್ ಕೌನ್ಸಿಲ್ ಹಾಗೂ ನವ ಕರ್ನಾಟಕ ಫಿಲಂ ಅಕಾಡೆಮಿ ಸಹಯೋಗದೊಂದಿಗೆ ಬೆಂಗಳೂರಿನ ಟೌನ್ ಹಾಲ್ ಸಭಾಂಗಣದಲ್ಲಿ` ವಿಶ್ವ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಏರ್ಪ ಡಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಪ್ರೆಸ್ ಕೌನ್ಸಿಲ್ ಅಧ್ಯಕ್ಷ ರಾದ ಟಿ.ಶಿವಕುಮಾರ್ ನಾಗರ ನವಿಲೆ ಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಕೋರಿದರು. ಸಂದರ್ಭದಲ್ಲಿ ಸಾಧಕ ಮಹಿಳೆಯರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಖ್ಯಾತ ತೆಲುಗು ನಾಯಕ ನಟ ಡಾ.ಸುಮನ್ ತಲ್ವಾರ್ ರವರಿಗೆ ಸಂಸ್ಥೆ ವತಿಯಿಂದ ಗೌರವ ಸನ್ಮಾನ ಮಾಡಲಾಯಿತು.

 ‘ಪೆಂಟಗನ್’ ಸಿನಿಮಾದ ಥೀಮ್ ಸಾಂಗ್ ಮೂಲಕ ಮಣಿಕಾಂತ್ ಕದ್ರಿ ಮ್ಯಾಜಿಕ್: ಬಹುನಿರೀಕ್ಷಿತ ಚಿತ್ರ ಎಪ್ರಿಲ್ 7ಕ್ಕೆ ರಿಲೀಸ್

 

ಸುಮನ್ ರವರು ಕನ್ನಡ, ತೆಲುಗು, ತಮಿಳ್ ಇನ್ನು ಹಲವಾರು ಭಾಷೆ ಗಳಲ್ಲಿ ೭೦೦ ಕ್ಕೂ ಅಧಿಕ ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷರು, ಸಂಸ್ಥೆ ರಾಷ್ಟ್ರೀಯ ಮತ್ತು ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡುತ್ತಾ, ಎಲೆಮರೆ ಕಾಯಿಯಂತೆ ಇರುವ ಕಲಾವಿದರನ್ನು ಗುರುತಿಸಿ, ಅವರನ್ನು ಗೌರವಿಸಿ ಸಾನಿಸುವ ಕೆಲಸ ಮಾಡಿವೆ. ಸಂಸ್ಥೆಯ ಅಧ್ಯಕ್ಷರಾದ ಡಾ . ಎಮ್.. ಮಮ್ಮಿಗಟ್ಟಿಯವರು ಕಾರ್ಯಕ್ರಮವನ್ನು ಬಹಳ ಅದ್ದೂರಿಯಾಗಿ ಆಯೋಜನೆ ಮಾಡಿ, ಇಂದು ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಹಿರಿಯ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಮಾಡಿರುವುದು ಶ್ಲಾಘನೀಯ. ಖ್ಯಾತ ತೆಲುಗು ನಾಯಕ ನಟರಾದ ಡಾ.ಸುಮನ ತಲ್ವಾರ್ ರವರು ಹಾಗೂ ಸಭಾಪತಿಗಳಾದ ಬಸವರಾಜ್ ಹೊರಟ್ಟಿಯಂತಹ ಮಹಾನ್ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ವಿಶೇಷ ಇದೊಂದು ಅರ್ಥಪೂರ್ಣ ಕಾರ್ಯಕ್ರಮ, ಶುಭವಾಗಲಿ ಎಂದು ಹಾರೈಸಿದರು. ಇದೇ ಸಂದರ್ಭದಲ್ಲಿ ಮಹೇಶ್ ಲಲಿತ ಕಲಾ ತಂಡದವರು ಕಾಂತಾರ ಚಿತ್ರದ ಗೀತೆಗೆ ಯಕ್ಷಗಾನ ಮಾಡುವ ಮೂಲಕ ವೀಕ್ಷಕರ ಮನ ರಂಜಿಸಿದರು.

 

ಕುತೂಹಲ ಮೂಡಿಸಿದೆ “ಗ್ರೇ ಗೇಮ್ಸ್” ಚಿತ್ರದ ಟೀಸರ್

 

ಕಾರ್ಯಕ್ರಮದಲ್ಲಿ ಶ್ರೀ ಬಸವರಾಜ್ ಹೊರಟ್ಟಿ, ಡಾ|| ಸುಮನ್ ತಳವಾರ್, ಶ್ರೀ ಬಾ ಮಾ ಹರೀಶ್, ಶ್ರೀಮತಿ ಭವ್ಯ, ಶ್ರೀ ಲಹರಿ ವೇಲು, ಶ್ರೀಮತಿ ಅನುಷಾ, ಲಯನ್ ಡಾ|| ಸಾಯಿ ವೆಂಕಟೇಶ್. ಡಾ|| ನಾಗರಾಜ್.ವಿ ಮತ್ತು ಡಾ||ರಾಘವೇಂದ್ರ ಮೋಕ್ಷಗುಂಡಮ್ ಅಥಿತಿಗಳಾಗಿ ಬಾಗವಹಿಸಿದ್ದರುವಿಜಯಲಕ್ಷಿಸಿಂಗ್, ಅರ್ಚನಾ ಉಡುಪ, ಜ್ಯೋತಿ.ಬಿ, ರಾಧಾ ರಾಮಚಂದ್ರ. ಜಯಶ್ರೀ.ಎಸ್.ರಾಜ್, ಭವಾನಿ ಪ್ರಕಾಶ್, ಜ್ಯೋತಿ.ಎಸ್.ಮುರೂರ್, ಸ್ವಾತಿ, ಪ್ರೀತಿ.ಎಸ್.ಬಾಬು, ಪರಿಮಳ ಸುಬ್ರಮಣ್ಯಂ, ಚಂದ್ರಿಕಾ ಗೌಡ, ಡಾ|| ಪ್ರಿಯದರ್ಶಿನಿ, ದೀಪಾ.ಡಿ.ಕೆ. ಮೇಘಾ ಶೆಟ್ಟಿ, ಡಾ|| ಜಲದಿ ವಿಜಯ, ಪ್ರಗ್ಯಾ ನಯನ್ ಮತ್ತು ಸನ ಆಲಿ ಖಾನ್, ಪ್ರತಿಷ್ಠಿತ `Silver screen women achievers award-2023’ ಗೆ ಭಾಜನರಾದರು.

Share this post:

Related Posts

To Subscribe to our News Letter.

Translate »