ದಕ್ಷಿಣ ಭಾರತ ಸಿನಿಮಾಗಳ ಹಬ್ಬ – ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ಈ ಬಾರಿ ಸೆಪ್ಟಂಬರ್ 15 ಮತ್ತು 16 ರಂದು ದುಬೈನಲ್ಲಿ ನಡೆಯಲಿದೆ.ಕನ್ನಡ, ತೆಲುಗು, ತಮಿಳು, ಮಲೆಯಾಳಂ ಸಿನಿಮಾಗಳಲ್ಲಿ ಅತ್ಯತ್ತುಮ ನಟನೆ, ನಿರ್ದೇಶನ, ನಿರ್ಮಾಣ ಹೀಗೆ ವಿಭಾಗದಲ್ಲಿ ಹಲವು ಪ್ರಶಸ್ತಿಗಳನ್ನು ನೀಡುವ ಸಿನಿಮಾ ಮಂದಿಯನ್ನು ಪ್ರೋತ್ಸಾಹಿಸಲು ನಿರ್ಧರಿಸಲಾಗಿದೆ.
ಇನ್ನೂ ಓದಿ *”ಟೇಲ್ಸ್ ಆಫ್ ಮಹಾನಗರ” ಚಿತ್ರದ ಟೀಸರ್ ಗೆ ಕಿಚ್ಚ ಸುದೀಪ್ ಧ್ವನಿ* .
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಹುಭಾಷಾ ನಟಿನಟಿ ಶೃತಿ ಹಾಸನ್ , ಬೆಂಗಳೂರಿಗೆ ಮರಳಿ ಬಂದಿರುವುದು ಖುಷಿ ಆಗಿದೆ. ಮೊದಲ ವರ್ಷ ಕಾರ್ಯಕ್ರಮದಲ್ಲಿ ನೃತ್ಯ ಮಾಡಿದ್ದೆ. ಸೈಮಾ ಮತ್ತಷ್ಟು ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಚಿತ್ರರಂಗದ ಮಂದಿಯನ್ನು , ಪ್ರತಿಭಾವಂತರನ್ನು ಗೌರವಿಸುವ ಕೆಲಸ ಮುಂದುವರಿಸಲಿ ಎಂದು ಹಾರೈಸಿದರು. .ನಟ ಡಾಲಿ ಧನಂಜಯ ಮಾತನಾಡಿ ಎರಡನೇ ಸೈಮಾ ದಿಂದ ಸಂಪರ್ಕವಿದೆ , ನಟಿ ಪ್ರಣೀತಾ ಪ್ರಣೀತಾ ಸುಭಾಷ್ ಅವರನ್ನು ನಾನು ಸೈಮಾದಲ್ಲಿ ಭೇಟಿಯಾಗಿದೆ ಎಂದರು.ನಟಿ ಪ್ರಣೀತಾ ಸುಭಾಷ್ ಮಾತನಾಡಿ ಸೈಮಾ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.
ಇನ್ನೂ ಓದಿ *ಶ್ರೀ ಸುನಿಲ್ ಸಿ ಸ್ ಅವರಿಗೆ ಚಿತ್ತಾರ ವತಿಯಿಂದ ಹುಟ್ಟುಹಬ್ಬದ ಶುಭಾಶಯಗಳು*
ಸೈಮಾ ಅಧ್ಯಕ್ಷೆ ಬೃಂದಾ ಪ್ರಸಾದ್, ಮಾತನಾಡಿ , ಸತತ 11 ನೇ ವರ್ಷದಿಂದ “ಸೈಮಾ” ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗುತ್ತಿದೆ. ದಕ್ಷಿಣ ಭಾರತದಲ್ಲಿ ಪ್ರಶಸ್ತಿ ನೀಡುವಲ್ಲಿ ಮುಂಚೂಣಿಯಲ್ಲಿದ್ದೇವೆ. ಜಾಗತಿಕ ಮಟ್ಟದಲ್ಲಿ ದಕ್ಷಿಣ ಭಾರತದ ಸಿನಿಮಾಗಳನ್ನು ಗುರುತಿಸಿ ಪ್ರೋತ್ಸಾಹ ನೀಡಲಾಗುವುದು. ಈ ಬಾರಿ “ಸೈಮಾ” ಅದ್ದೂರಿ ಪ್ರಶಸ್ತಿ ಪ್ರದಾನ ಸಮಾರಂಭದ ದುಬೈ ನಲ್ಲಿ ನಡೆಯಲಿದೆ. ದಕ್ಷಿಣ ಭಾರತದ ಪ್ರತಿಭೆಗಳನ್ನು ಈ ಬಾರಿ ಹೆಚ್ಚು ಹೆಚ್ಚು ಪ್ರದರ್ಶನ ಮಾಡಲಾಗುವುದು. ಈ ಬಾರಿ ಹೆಚ್ಚು ಚಿತ್ರಗಳಿವೆ ಎಂದರು.