Sandalwood Leading OnlineMedia

ಇಂಡೋ-ಪಾಕ್ ಕದನ ಹಿನ್ನೆಲೆ ಕುರಿತಾದ ಸಿನಿಮಾ `ಸಿಗ್ನಲ್ ಮ್ಯಾನ್ 1971 ‘ ಆಗಸ್ಟ್ ನಲ್ಲಿ ತೆರೆಗೆ

ಹಿಂದೂಸ್ಥಾನ್ ಮುಕ್ತ ಮೀಡಿಯಾ ಎಂಟರ್ ಟೈನರ್ ಲಾಂಛನದಲ್ಲಿ ಗಣೇಶ್ ಪ್ರಭು ಬಿ.ವಿ ಅವರು ನಿರ್ಮಿಸಿರುವ, ಕೆ. ಶಿವರುದ್ರಯ್ಯ ನಿರ್ದೇಶನದ ಹಾಗೂ ಪ್ರಕಾಶ್ ಬೆಳವಾಡಿ, ರಾಜೇಶ್ ನಟರಂಗ, ವೆಂಕಟೇಶ್ ಪ್ರಸಾದ್, ಡಿಂಪಿ ಪದ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಸಿಗ್ನಲ್ ಮ್ಯಾನ್ 1971’ ಚಿತ್ರ ಆಗಸ್ಟ್ ನಲ್ಲಿ ಬಿಡುಗಡೆಯಾಗಲಿದೆ. 1971ರಲ್ಲಿ ನಡೆದ ಇಂಡೋ – ಪಾಕ್ ಕದನದ ಹಿನ್ನೆಲೆಯಲ್ಲಿ ಈ ಚಿತ್ರದ ಕಥೆ ಸಾಗಲಿದೆ. ಈ ಚಿತ್ರದಲ್ಲಿ ಸಿಗ್ನಲ್‍ ಮ್ಯಾನ್‍ ಪಾತ್ರದಲ್ಲಿ ಪ್ರಕಾಶ್ ಬೆಳವಾಡಿ ಅಭಿನಯಿಸಿದ್ದಾರೆ. ಹೆಚ್ಚಿನ ಭಾಗದ ಚಿತ್ರೀಕರಣ ಊಟಿಯಲ್ಲಿ ಹಾಕಲಾಗಿದ್ದ ರೈಲ್ವೆ ನಿಲ್ದಾಣದ ಸೆಟ್ ನಲ್ಲೇ ನಡೆದಿದೆ. ಗಣೇಶ್ ಪ್ರಭು ಅವರ ನಿರ್ಮಾಣ, ಶೇಖರ್ ಚಂದ್ರು ಛಾಯಾಗ್ರಹಣ, ಸುರೇಶ್ ಅರಸ್ ಸಂಕಲನ, ಒಸೆಪಚ್ಚನ್ ಸಂಗೀತ ನಿರ್ದೇಶನ ಹಾಗೂ ಸಂತೋಷ್ ಪಾಂಚಾಲ್ ಕಲಾ ನಿರ್ದೇಶನ ಈ ಚತ್ರಕ್ಕಿದೆ.

`ಚಿತ್ತಾರ ಯೂತ್ ಐಕಾನ್’ ಪ್ರಶಸ್ತಿ ಸ್ವೀಕರಿಸಿ, ಕನ್ನಡದ ಬಗ್ಗೆ ಅಭಿಮಾನದ ಮಾತುಗಳನ್ನಾಡಿದ ಬಹುಭಾಷಾ ನಟಿ ಶಾನ್ವಿ ಶ್ರೀವಾಸ್ತವ್

1971ರಲ್ಲಿ ನಡೆದ ಇಂಡೋ – ಪಾಕ್ ಕದನದ ಹಿನ್ನೆಲೆಯನ್ನು ಈ ಚಿತ್ರದಲ್ಲಿ ಅಳವಡಿಸಿಕೊಡಲಾಗಿದೆ. ಜೊತೆಗೆ ಯಾರು ಇಳಿಯದ, ಹತ್ತದ ರೈಲ್ವೆ ನಿಲ್ದಾಣದಲ್ಲಿ ಇಪ್ಪತ್ತು ವರ್ಷಗಳ ಕಾಲ ಕಾರ್ಯ ನಿರ್ವಹಿಸುವ “ಸಿಗ್ನಲ್ ಮ್ಯಾನ್” ಒಬ್ಬನ ಜೀವನದ ಕಥಯೂ ಇದರಲ್ಲಿದೆ‌. ಇಪ್ಪತ್ತು ವರ್ಷಗಳ ಕಾಲ ಜನಸಂಪರ್ಕವಿಲ್ಲದ ಸ್ಥಳದಲ್ಲಿದ್ದ ಈತ ಗೊಂದಲಕ್ಕೀಡಾಗುತ್ತಾನೆ. ಗೊಂದಲದಿಂದ ಆಚೆ ಬಂದ ನಂತರ ರಾಜ್ಯ ಹಾಗೂ ರಾಷ್ಟ್ರಕ್ಕೆ ಬೇಕಾಗುವ ವ್ಯಕ್ತಿಯಾಗುತ್ತಾನೆ. ಈ ಪಾತ್ರದಲ್ಲಿ ಪ್ರಕಾಶ್ ಬೆಳವಾಡಿ ಅಭಿನಯಿಸಿದ್ದಾರೆ. ಹೆಚ್ಚಿನ ಭಾಗದ ಚಿತ್ರೀಕರಣ ಊಟಿಯಲ್ಲಿ ಹಾಕಲಾಗಿದ್ದ ರೈಲ್ವೆ ನಿಲ್ದಾಣದ ಸೆಟ್ ನಲ್ಲೇ ನಡೆದಿದೆ. ಗಣೇಶ್ ಪ್ರಭು ಅವರ ನಿರ್ಮಾಣ, ಶೇಖರ್ ಚಂದ್ರು ಛಾಯಾಗ್ರಹಣ, ಸುರೇಶ್ ಅರಸ್ ಸಂಕಲನ, ಒಸೆಪಚ್ಚನ್ ಸಂಗೀತ ನಿರ್ದೇಶನ ಹಾಗೂ ಸಂತೋಷ್ ಪಾಂಚಾಲ್ ಕಲಾ ನಿರ್ದೇಶನ ಈ ಚತ್ರಕ್ಕಿದೆ. ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಚೆನ್ನೈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಮುಂಬೈ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಹಾಗೂ ಬಾಂಗ್ಲಾದೇಶದಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ಅನೇಕ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಈ ಚಿತ್ರ ಪ್ರದರ್ಶನವಾಗಿದೆ ಎಂದರು ನಿರ್ದೇಶಕ ಕೆ.ಶಿವರುದ್ರಯ್ಯ.

 

ಕುತೂಹಲ ಮೂಡಿಸಿದೆ “ನಸಾಬ್” ಚಿತ್ರದ ಟ್ರೇಲರ್ ; ಅಪ್ಪನ ಕಥೆಗೆ ಮಗನೇ ನಾಯಕ ಹಾಗೂ ನಿರ್ದೇಶಕ .

ಇದು ನಮ್ಮ ಸಂಸ್ಥೆಯಿಂದ ನಿರ್ಮಾಣವಾಗಿರುವ ಮೊದಲ ಸಿನಿಮಾ ಎಂದು ಮಾತನಾಡಿದ ನಿರ್ಮಾಪಕ ಗಣೇಶ್ ಪ್ರಭು, ನಾನು ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ. ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ಆಗಸ್ಟ್ ನಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತೇವೆ‌. ಬಂಗ್ಲಾದೇಶದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ನಾನು ಹೋಗಿದೆ.‌ ಆ ಚಿತ್ರೋತ್ಸವದಲ್ಲಿ ಬೆಸ್ಟ್ ಫ್ಯೂಚರ್ ಫಿಲ್ಮ್ ಪ್ರಶಸ್ತಿ ಬಂದಿದೆ. ಅಲ್ಲಿನ ಜನರು ನಮ್ಮ ಚಿತ್ರದ ಕುರಿತು ಆಡಿದ ಪ್ರೋತ್ಸಾಹಭರಿತ ಮಾತುಗಳನ್ನು ಕೇಳಿ ಖುಷಿಯಾಯಿತು ಎಂದರು.

Advertisement

Share this post:

Related Posts

To Subscribe to our News Letter.

Translate »