Sandalwood Leading OnlineMedia

ಸೆಟ್ಟೇರಿತು ʻಸಿದ್ಲಿಂಗು-2ʼ : ಡಬ್ಬಲ್ ಮೀನಿಂಗ್ ನಿಂದ ದೂರ ದೂರ..!

ಪೆಟ್ರೋಮ್ಯಾಕ್ಸ್ ಹಾಗೂ ತೋತಾಪುರಿ ಚಿತ್ರಗಳ ಬಳಿಕ ಚೇಷ್ಠೆಗೆ ಫುಲ್ ಸ್ಟಾಪ್ ಇಟ್ಟಿರೋ ವಿಜಯ್ ಪ್ರಸಾದ್, ಸಿದ್ಲಿಂಗು ಸೀಕ್ವೆಲ್ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಲೂಸ್ ಮಾದ ಯೋಗಿ ಜೊತೆಗೇನೆ ಸಿನಿಮಾ ಶುರು ಮಾಡ್ತಿರೋ ಪ್ರಸಾದ್, ಅಧಿಕೃತವಾಗಿ ನಿರ್ಮಾಪಕರ ಮನೆದೇವರ ಆಲಯದಲ್ಲಿ ಮುಹೂರ್ತ ಕೂಡ ನೆರವೇರಿಸಿದ್ರು. ಸಿದ್ಲಿಂಗು.. ಈ ಸಿನಿಮಾ ಬಂದು ಬರೋಬ್ಬರಿ 12 ವರ್ಷಗಳಾಯ್ತು. ಇಂದಿಗೂ ನೋಡುಗರ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಅದಕ್ಕೆ ಕಾರಣ ಒಂದೊಳ್ಳೆ ಕಥೆ, ಸಂಬಂಧಗಳ ಮೌಲ್ಯಗಳು, ಕಾಮಿಡಿ, ಪ್ರೀತಿ, ಡೈಲಾಗ್ಸ್, ಸಾಹಿತ್ಯ, ಸಂಗೀತ ಹಾಗೂ ಮೇಕಿಂಗ್. ಹೌದು.. ಎಲ್ಲಾ ಌಂಗಲ್ನಿಂದ ಸಿದ್ಲಿಂಗು ವ್ಹಾವ್ ಫೀಲ್ ತರಿಸಿದ ಸಿನಿಮಾ ಆಗಿತ್ತು. ಇದೀಗ ಅದ್ರ ಸೀಕ್ವೆಲ್ ಸಿದ್ಲಿಂಗು-2 ಸೆಟ್ಟೇರಿದೆ.

ಜಮಾಲಿಗುಡ್ಡ ಚಿತ್ರದ ನಿರ್ಮಾಪಕ ಶ್ರೀಹರಿ ರೆಡ್ಡಿ ಅವ್ರು ತಮ್ಮ ನಿಹಾರಿಕಾ ಫಿಲಂಸ್ ಬ್ಯಾನರ್ನಡಿ ಈ ಚಿತ್ರವನ್ನ ನಿರ್ಮಿಸುತ್ತಿದ್ದು, ವಿಜಯ್ ಪ್ರಸಾದ್ ಅವರೇ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಅಬ್ಬಿಗೆರೆ ಬಳಿ ಇರೋ ಶೆಟ್ಟಿಹಳ್ಳಿ ವಾರ್ಡ್ನ ನಿವಾಸಿಯಾದ ಶ್ರೀಹರಿ ರೆಡ್ಡಿ ಅವ್ರ ಮನೆದೇವ್ರ ಆಲಯದಲ್ಲಿ ಸಿನಿಮಾ ಮುಹೂರ್ತ ಕಂಡಿದೆ.

ಇದನ್ನೂ ಓದಿ :ಚಾಮರಾಜನಗರ ಕ್ಷೇತ್ರದ ಮತದಾನ ಜಾಗೃತಿ ರಾಯಬಾರಿಯಾದ್ರು ಬಿಗ್ ಬಾಸ್ ಕಾರ್ತಿಕ್

ಪೆಟ್ರೋಮ್ಯಾಕ್ಸ್ ಹಾಗೂ ತೋತಾಪುರಿ ಸಿನಿಮಾಗಳ ಬಳಿಕ ಡಬಲ್ ಮೀನಿಂಗ್ ಡೈಲಾಗ್ಸ್ ಗೆ ಕಡಿವಾಣ ಹಾಕಿ, ಹೊಸ ಹುರುಪು ಹುಮ್ಮಸ್ಸಿನಿಂದ ಸಿದ್ಲಿಂಗು-2 ಮಾಡೋಕೆ ಮುಂದಾಗಿದ್ದಾರೆ ವಿಜಯ್ ಪ್ರಸಾದ್. ಇಲ್ಲಿ ಬರೀ ಮೀನಿಂಗ್ ಇರಲಿದೆ. ಡಬಲ್ ಮೀನಿಂಗ್ ಇರಲ್ಲ ಅಂತ ಜನಕ್ಕೆ ಕೈ ಮುಗಿದರು. ಅಲ್ಲದೆ, ಯಾರೂ ನಂಬಲಾರದ ಸ್ಥಿತಿಯಲ್ಲಿದ್ದ ತನ್ನನ್ನ ನಂಬಿದ ಪ್ರೊಡ್ಯೂಸರ್ಗೆ ಥ್ಯಾಂಕ್ಸ್ ಹೇಳಿದ್ರು. ಈ ಬಾರಿ 6ರಿಂದ 60 ವರ್ಷದ ಎಲ್ಲರೂ ನೋಡಬಹುದಾದ ಸಿನಿಮಾ ಕೊಡೋ ಭರವಸೆ ನೀಡಿದ್ರು.

ಇದನ್ನೂ ಓದಿ:ಡೀಪ್ ಫೇಕ್ ವಿಡಿಯೋ : ಇಟಲಿಯ ಪ್ರಧಾನಿ ವಿಚಾರ ಪ್ರಸ್ತಾಪಿಸಿ ಕಂಗನಾ ಹೇಳಿದ್ದೇನು..?
ಬೈಟ್: ವಿಜಯ್ ಪ್ರಸಾದ್, ನಿರ್ದೇಶಕ
ಬೈಟ್: ಶ್ರೀಹರಿ ರೆಡ್ಡಿ, ನಿರ್ಮಾಪಕ

ನಾಯಕನಟ ಲೂಸ್ಮಾದ ಯೋಗಿ ಮಾತನಾಡಿ, ಇದು ನನ್ನ ಕರಿಯರ್ಗೆ ಮಹತ್ವದ ತಿರುವು ಕೊಟ್ಟ ಸಿನಿಮಾ. ಹಾಗಾಗಿ ಅದ್ರ ಸೀಕ್ವೆಲ್ ಬರ್ತಿರೋದು ಖುಷಿಯ ವಿಚಾರ. ಹದಿನೈದು ವರ್ಷದ ಗೆಳತಿ ಸೋನು ಗೌಡ ಜೊತೆ ಇಲ್ಲಿಯವರೆಗೂ ಸಿನಿಮಾ ಮಾಡೋ ಅವಕಾಶಗಳು ಸಿಗಲೇ ಇಲ್ಲ. ಇದೀಗ ಒಟ್ಟಿಗೆ ಕೆಲಸ ಮಾಡ್ತಿರೋದು ಸಂತೋಷವಾಗ್ತಿದೆ. ರಮ್ಯಾ ಅವ್ರು ಇರಲ್ಲ, ಆಂಡಾಳಮ್ಮನನ್ನ ಬಿಡಲ್ಲ ಅಂದ್ರು.
ಬೈಟ್: ಲೂಸ್ಮಾದ ಯೋಗಿ, ನಟ

ಇದನ್ನೂ ಓದಿ:ಕಪ್ ಗೆಲ್ಲಬೇಕು RCB..ಚಿಯರ್ಸ್ ಹೇಳಿದ್ರು ಸೆಲೆಬ್ರಿಟೀಸ್..!

ಕಿರಗೂರಿನ ಗಯ್ಯಾಳಿಗಳು ಸಿನಿಮಾದ ಪಾತ್ರ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದ ಡೈರೆಕ್ಟರ್, ಸಿದ್ಲಿಂಗು-2ಗೆ ಆಫರ್ ಮಾಡಿದ್ದು ನಿಜಕ್ಕೂ ಸರ್ಪ್ರೈಸ್ ಅಂದ್ರು ಸೋನು ಗೌಡ. ಕಲಾವಿದೆಯಾಗಿ ನಾನು ಕೊಟ್ಟ ಪಾತ್ರಕ್ಕೆ ಜೀವ ತುಂಬುತ್ತೇನೆ ಅಂತ ಅವಕಾಶ ನೀಡಿದ ಡೈರೆಕ್ಟರ್ಗೆ ಧನ್ಯವಾದ ಹೇಳಿದ್ರು, ಅಲ್ಲದೆ ಯೋಗಿ ಬಗ್ಗೆ ಕೊಂಡಾಡಿದ್ರು.
ಬೈಟ್: ಸೋನು ಗೌಡ, ನಟಿ

ಇದನ್ನೂ ಓದಿ:“ಅವತಾರ ಪುರುಷ 2” ಚಿತ್ರದಲ್ಲೊಂದು ಭರ್ಜರಿ ರಾಪ್ ಸಾಂಗ್ : ಏಪ್ರಿಲ್ 5ಕ್ಕೆ ಬಿಡುಗಡೆ.

ಅನೂಪ್ ಸೀಳಿನ್ ಸಂಗೀತ, ಅರಸು ಅಂತಾರೆ ಸಾಹಿತ್ಯ ಚಿತ್ರಕ್ಕಿರಲಿದ್ದು, ಪದ್ಮಜಾ ರಾಜ್, ಆಂಟೊನಿ ಕಮಲ್, ಮಹಾಂತೇಶ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿರಲಿದೆ. ಮುಂದಿನ ವಾರದಿಂದ ಶೂಟಿಂಗ್ ಶುರುವಾಗಲಿದ್ದು, ಬೆಂಗಳೂರು ಹಾಗೂ ಮೈಸೂರಿನಲ್ಲಿ ಚಿತ್ರೀಕರಣ ಮಾಡಲು ಟೀಂ ನಿರ್ಧರಿಸಿದೆ.

Share this post:

Related Posts

To Subscribe to our News Letter.

Translate »