Left Ad
ಸಿದ್ದರಾಮಯ್ಯ ಬಯೋಪಿಕ್ 'ಲೀಡರ್ ರಾಮಯ್ಯ' ಚಿತ್ರದಲ್ಲಿ ವಿಜಯ್ ಸೇತುಪತಿ ನಾಯಕ! - Chittara news
# Tags

ಸಿದ್ದರಾಮಯ್ಯ ಬಯೋಪಿಕ್ ‘ಲೀಡರ್ ರಾಮಯ್ಯ’ ಚಿತ್ರದಲ್ಲಿ ವಿಜಯ್ ಸೇತುಪತಿ ನಾಯಕ!

ಕನ್ನಡದಲ್ಲಿ ಹಲವಾರು ವ್ಯಕ್ತಿಗಳ ಬಯೋಪಿಕ್‌ಗಳು ಬೆಳ್ಳಿತೆರೆ ಮೇಲೆ ಮೂಡಿಬಂದಿವೆ. ಇನ್ನು ಬಯೋಪಿಕ್ ವಿಚಾರಕ್ಕೆ ಬಂದರೆ ಕನ್ನಡದಲ್ಲಿ ರೌಡಿಗಳ ಜೀವನಾಧಾರಿತ ಚಿತ್ರಗಳೇ ಹೆಚ್ಚಾಗಿ ಮೂಡಿ ಬಂದಿವೆ. ಇವುಗಳನ್ನು ಹೊರತುಪಡಿಸಿ ಬೇರೆಯವರ ಬಯೋಪಿಕ್ ಹುಡುಕಿದರೆ ಸಿಗುವುದು ಅಲ್ಲೊಂದು ಇಲ್ಲೊಂದು. ಇನ್ನು ಸಿನಿಮಾಗಳಲ್ಲಿ ರಾಜಕಾರಣಿಗಳ ಜೀವನಾಧಾರಿತ ಸಿನಿಮಾಗಳು ಬಂದಿರುವುದು ತುಂಬಾ ಕಡಿಮೆಯೇ.

ಆದರೆ ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳ ಬಯೋಪಿಕ್‌ಗೆ ಸಿನಿ ರಸಿಕರು ತುಸು ಆಸಕ್ತಿ ತೋರಿದಂತಿದೆ. ಪರ ರಾಜ್ಯಗಳ ರಾಜಕಾರಣಿಗಳ ಬಯೋಪಿಕ್ ಸೆಟ್ಟೇರಿತು, ಟ್ರೈಲರ್ ಬಿಡುಗಡೆಯಾಯಿತು, ಚಿತ್ರ ಹಾಗಿದೆಯಂತೆ, ಚಿತ್ರ ಇಷ್ಟು ಗಳಿಸಿತಂತೆ ಎಂದು ಕೇಳುತ್ತಿದ್ದ ಕನ್ನಡಿಗರಿಗೆ ಇದೀಗ ಕರ್ನಾಟಕದ ರಾಜಕಾರಣಿಯ ಬಯೋಪಿಕ್ ಅನ್ನು ತೆರೆ ಮೇಲೆ ನೋಡುವ ಅವಕಾಶ ಸನಿಹದಲ್ಲಿದೆ.

ಇದನ್ನೂ ಓದಿ:  *ಜವಾರಿ ಭಾಷೆಯ ಬಯಲುಸೀಮೆ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದ ಜೂ.ರೆಬಲ್ ಸ್ಟಾರ್…ಇದೇ 18ಕ್ಕೆ ತೆರೆಗೆ ಬರಲಿದೆ ವರುಣ್ ಕಟ್ಟೀಮನಿ ಚೊಚ್ಚಲ ಕನಸು*

ಹೌದು, ಕಾಂಗ್ರೆಸ್ ಪಕ್ಷದ ನಾಯಕ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೀವನಾಧಾರಿತ ಸಿನಿಮಾವನ್ನು ತೆರೆ ಮೇಲೆ ತರಲು ಭರದ ಸಿದ್ಧತೆಗಳು ನಡೆದಿವೆ. ಮಾರ್ಚ್ 30ರಂದು ಈ ಚಿತ್ರದ ಕುರಿತು ಪೋಸ್ಟರ್ ಸಹ ಬಿಡುಗಡೆಗೊಂಡಿತ್ತು. ಮಾರ್ಚ್ 30ರಂದು ಶ್ರೀ ರಾಮನವಮಿ ಹಬ್ಬದ ಪ್ರಯುಕ್ತ ಈ ಚಿತ್ರದ ಪೋಸ್ಟರ್ ಬಿಡುಗಡೆಗೊಂಡಿತ್ತು.

ಚಿತ್ರಕ್ಕೆ ಲೀಡರ್ ರಾಮಯ್ಯ ಎಂದು ಹೆಸರಿಡಲಾಗಿದ್ದು, ಎ ಕಿಂಗ್ ರೈಸ್ಡ್ ಬೈ ದ ಪೀಪಲ್ ಎಂಬ ಅಡಿಬರಹವನ್ನು ಬರೆಯಲಾಗಿತ್ತು. ಈ ಚಿತ್ರಕ್ಕೆ ನಿರ್ದೇಶಕ ಸತ್ಯರತ್ನಂ ನಿರ್ದೇಶನ ಹಾಗೂ ಚಿತ್ರಕಥೆ ಇದ್ದು, ಎಂ ಎಸ್ ಕ್ರಿಯೇಟಿವ್ ವರ್ಕ್ಸ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿದೆ.

 

ಇದನ್ನೂ ಓದಿ‘Kousalya Supraja Rama’ movie review: ಕಲಿಯುಗ ರಾಮನ ಮಾಡರ್ನ್ ವನವಾಸ!

ಇನ್ನು ಈ ಚಿತ್ರ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ತಯಾರಾಗಲಿದ್ದು, ಪ್ಯಾನ್ ಇಂಡಿಯಾ ಸಿನಿಮಾವಾಗಲಿದೆ. ಇನ್ನು ಈ ಚಿತ್ರದಲ್ಲಿ ಸಿದ್ದರಾಮಯ್ಯ ಅವರ ಪಾತ್ರವನ್ನು ತಮಿಳಿನ ಪ್ರತಿಭಾವಂತ ನಟ ವಿಜಯ್ ಸೇತುಪತಿ ನಿರ್ವಹಿಸಲಿದ್ದಾರೆ ಎಂಬ ಮಾತುಗಳು ಈ ಹಿಂದಿನಿಂದಲೂ ಸಹ ಕೇಳಿ ಬರುತ್ತಿದ್ದು, ಇದೀಗ ಮೂಲಗಳೂ ಸಹ ವಿಜಯ್ ಸೇತುಪತಿ ಅವರೇ ಸಿದ್ದರಾಮಯ್ಯ ಅವರ ಪಾತ್ರ ನಿರ್ವಹಿಸಲಿದ್ದಾರೆ ಎಂಬುದನ್ನು ತಿಳಿಸಿವೆ.

ಇನ್ನು ಲೀಡರ್ ರಾಮಯ್ಯ ಚಿತ್ರ ಎರಡು ಭಾಗಗಳಲ್ಲಿ ಬರಲಿದ್ದು, ಮೊದಲ ಭಾಗದಲ್ಲಿ ಸಿದ್ದರಾಮಯ್ಯನವರ ಬಾಲ್ಯ, ಕಾಲೇಜು ಹಾಗೂ ವಕೀಲರಾಗಿದ್ದ ಕಥೆಯನ್ನು ತೋರಿಸಲಿದ್ದಾರೆ. ಈ ಭಾಗದಲ್ಲಿ ಬಾಲ್ಯದ ಹಾಗೂ ಕಾಲೇಜು ದಿನಗಳಲ್ಲಿ ಬಾಲ ನಟ ಹಾಗೂ ಬೇರೊಬ್ಬ ನಟ ಸಿದ್ದರಾಮಯ್ಯರಾಗಿ ಕಾಣಿಸಿಕೊಳ್ಳಲಿದ್ದು, ಲಾಯರ್ ಗೆಟಪ್‌ಗೆ ವಿಜಯ್ ಸೇತುಪತಿ ಬಣ್ಣ ಹಚ್ಚಲಿದ್ದಾರೆ.

 

 

Spread the love
Translate »
Right Ad