Sandalwood Leading OnlineMedia

ಮೀ ಟೂ ಪ್ರಕರಣದಿಂದ ನನಗೆ ಒಳ್ಳೆಯದಾಗಿದೆ : ಮನೆಯವರ ಸಪೋರ್ಟ್ ಬಗ್ಗೆ ಮನಬಿಚ್ಚಿ ಮಾತನಾಡಿದ ಶೃತಿ

ನಟಿ ಶ್ರುತಿ ಹರಿಹರನ್ ವಿಸ್ಮಯಾ ಸಿನಿಮಾದಲ್ಲಿ ಅರ್ಜುನ್ ಸರ್ಜಾ ಜೊತೆಗೆ ಒಟ್ಟಿಗೆ ಅಭಿನಯಿಸಿದ್ದರು. ಆದರೆ ಈ ಸಿನಿಮಾ ಮುಗಿದ ಮೇಲೆ ಅರ್ಜುನ್ ಸರ್ಜಾ ಮೇಲೇಯೇ ಮೀಟೂ ಕೇಸ್ ಹಾಕಿದ್ದರು. ಆ ಸಮಯದಲ್ಲಿ ಫ್ಯಾಮಿಲಿ ಸಪೋರ್ಟ್ ಹೇಗಿತ್ತು ಆಮೇಲೆ ಏನಾಯ್ತು ಎಂದು ಶ್ರುತಿ ಹಂಚಿಕೊಂಡಿದ್ದಾರೆ.

ʻನನ್ನ ಜೀವನದಲ್ಲಿ ಆ ನಾಲ್ಕೈದು ವರ್ಷ ತುಂಬಾ ಕಷ್ಟಗಳನ್ನು ನೋಡಿರುವೆ. 2018ರಲ್ಲಿ ನಾನು ಮೀ ಟೂ ಸ್ಟೋರಿ ಹೇಳಿಕೊಂಡ ನಂತರ ಎದುರಿಸಿದ ಮಾನಸಿಕ ಕಷ್ಟಗಳು ಒಂದೆರಡಲ್ಲ. ಈ ಘಟನೆ ಬೆನ್ನಲೆ ನಾನು ಪ್ರೆಗ್ನೆಂಟ್ ಆಗಿಬಿಟ್ಟಿ. ಪ್ರೆಗ್ನೆನ್ಸಿ ಪ್ಲ್ಯಾನ್ ಮಾಡಿರಲಿಲ್ಲ …ಅದರ ಜೊತೆ ಕೊರೋನಾ ಪ್ಯಾಂಡಮಿಕ್ ಎದುರಾಗಿತ್ತು. ಮಗುವಿನ ಜೊತೆ ಹೆಚ್ಚಿಗೆ ಸಮಯ ಕಳೆಯುವುದಕ್ಕೆ ಆಗ ತೆಗೆದುಕೊಂಡ ಬ್ರೇಕ್ ಅಗತ್ಯವಿತ್ತು.

Shruti Hariharan,ತಾಯಿಯಾದಮೇಲೆ ನಟಿ ಶ್ರುತಿ ಹರಿಹರನ್‌ಗೆ ಅರ್ಥ ಆದ ಕಹಿಸತ್ಯ ಏನು? -  kannada actress sruthi hariharan speaks about baby diaper - Vijay Karnataka

ಪ್ಯಾಂಡಮಿಕ್ ಸಮಯಲ್ಲಿ ಕೆಲಸ ಇಲ್ಲದೆ ಕೂತಿದ್ದು ಕೂಡ ಸಹಾಯ ಆಯ್ತು…ಏಕೆಂದರೆ ಮಗು ಜೊತೆ ಸಂಪೂರ್ಣ ದಿನ ಕಳೆಯಬಹುದು. ನನ್ನ ಮಗಳು ಜಾನಕಿ 8 ತಿಂಗಳು ಇದ್ದಾಗ ಸಾರಾಂಶ ಸಿನಿಮಾ ಶೂಟಿಂಗ್ ಶುರು ಮಾಡಿದೆ ಅದಾದ ಮೇಲೆ ಹೆಡ್ಬುಷ್ ಚಿತ್ರೀಕರಣ ನಡೆಯುತ್ತಿದೆ. ಪ್ರತಿ ಸಿನಿಮಾ ಶೂಟಿಂಗ್ ಸೆಟ್ಗೆ ಮಗಳನ್ನು ಕರೆದುಕೊಂಡು ಹೋಗಿದ್ದೆ…ಬ್ರೇಕ್ಗಳ ನಡುವೆ ಹಾಲು ಕುಡಿಸುತ್ತಿದ್ದೆ. ಈಗ ನಿರ್ದೇಶನ ಕ್ಷೇತ್ರದಲ್ಲಿ ಸಖತ್ ಬ್ಯುಸಿಯಾಗಿದ್ದೀನಿ.

Vismaya Kannada Full Movie | Watch Kannada Full Movie |Online HD Movie | -  YouTube

ನನ್ನ ಕಥೆ ಹೇಳಿಕೊಳ್ಳಲು ಒಂದು ಕಾರಣ ಇದೆ ಏಕೆಂದರೆ ಬದಲಾವಣೆ ಅಗತ್ಯವಿದೆ. ಈಗಲೂ ಮೀ ಟೂ ಕೇಸ್ ನಡೆಯುತ್ತಿದೆ. ಈ ರೀತಿ ವಿಚಾರಗಳಲ್ಲಿ ತೀರ್ಮಾನ ತೀರ್ಪು ಕೊಡಲು ಸಾಲಲ್ಲ. ಧೈರ್ಯದಿಂದ ನಾನು ಧ್ವನಿ ಎತ್ತಿದ ಖುಷಿ ಇದೆ ಏಕೆಂದರೆ ನಮ್ಮ ಮಕ್ಕಳಿಗೆ ನಮ್ಮ ಭವಿಷ್ಯಕ್ಕೆ ಸುರಕ್ಷಿತ ಜಾಗ ಬೇಕಿದೆ. ಪಬ್ಲಿಸಿಟಿಗೆ ಈ ರೀತಿ ಮಾಡಿದೆ ಎಂದು ಅನೇಕರು ಕಾಮೆಂಟ್ ಮಾಡಿದ್ದರು.

Five of us will use you, exchange you however we want: Sruthi Hariharan was  told by her producer

ನಿಜ ಹೇಳಬೇಕು ಅಂದ್ರೆ ಮೀ ಟೂ ಪ್ರಕರಣದಿಂದ ನನಗೆ ಒಳ್ಳೆಯದಾಗಿದೆ. ಇವತ್ತು ಗಂಡಸರು ಅಲ್ಲ ಜೆನರಲ್ ಆಗಿ ಎಲ್ಲರೂ ವರ್ತಿಸುವ ಮುನ್ನ ಎರಡು ಸಲ ಯೋಚನೆ ಮಾಡುತ್ತಾರೆ. ಆ ಫೇಸ್ ನನ್ನ ಕಂಟ್ರೋಲ್ನಲ್ಲಿ ಇರಲಿಲ್ಲ ಎಂದು ಶ್ರುತಿ ಹೇಳಿದ್ದಾರೆ.

ಸಖತ್ ವರ್ಕೌಟ್, ನ್ಯೂ ಲುಕ್; ಲಂಬಾಣಿ ಡ್ರೆಸ್‌ನಲ್ಲಿ ಶ್ರುತಿ ಹರಿಹರನ್ ಸೂಪರ್! | Sruthi  Hariharan New Photo Shoot got Attention – News18 ಕನ್ನಡ

ನನ್ನ ಫ್ಯಾಮಿಲಿ ತುಂಬಾ ಸಪೋರ್ಟ್ ಮಾಡಿತ್ತು ಆದರೂ ನನ್ನ ಬಗ್ಗೆ ಸಾಕಷ್ಟು ಭಯ ಇತ್ತು. ಏನೇ ಮಾಡಿದರೂ ಒಳ್ಳೆಯ ಹೆಸರು ಮಾಡಬೇಕು ಎಂದು ಹೇಳಿ ಅಮ್ಮ ನಮ್ಮನ್ನು ಬೆಳೆಸಿದ್ದು. ಈ ಘಟನೆಗಳ ಬಗ್ಗೆ ಅಮ್ಮನ ಜೊತೆ ಮಾತನಾಡಿ ನಾನು ಮುಂದೆ ಬಂದಿರುವುದು.

Sruthi Hariharan: My awards have helped me bring back my self-confidence |  Kannada Movie News - Times of India

ಯಾವ ಪರಿಸ್ಥಿತಿ ಎದುರಾದರೂ ನನ್ನನ್ನು ಮನೆಯಿಂದ ಹೊರ ಹಾಕಿಲ್ಲ. ಮತ್ತೆ ಆಕ್ಟಿಂಗ್ ಮಾಡಬೇಡ ಎಂದು ಯಾರೂ ನನಗೆ ಹೇಳಿಲ್ಲ. ಇಂಡಸ್ಟ್ರಿ ನನಗೆ ತುಂಬಾ ಮುಖ್ಯವಾಗುತ್ತದೆ ಎಂದಿದ್ದಾರೆ ಶ್ರುತಿ.

Share this post:

Related Posts

To Subscribe to our News Letter.

Translate »