Sandalwood Leading OnlineMedia

ಬ್ಯಾಂಕಾಂಕ್ ನಲ್ಲಿ ತರಬೇತಿ ಪಡೆಯುತ್ತಿದ್ದಾರೆ ಶ್ರದ್ಧಾ ಕಪೂರ್

ಸಿನಿಮಾದಲ್ಲಿ ಶ್ರದ್ಧಾ ಮೊದಲ ಬಾರಿಗೆ ಆಕ್ಷನ್  ಸೀನ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಕೊಂಚ ತಯಾರಿ ಕೂಡ ಮಾಡಿಕೊಳ್ಳುತ್ತಿದ್ದಾರಂತೆ. ಅಲ್ಲದೇ ಈಗಾಗಲೇ ಇದಕ್ಕಾಗಿ ಬ್ಯಾಂಕಾಂಕ್ ನಲ್ಲಿ ತರಬೇತಿ ಪಡೆಯುತ್ತಿದ್ದಾರೆ ಶ್ರದ್ಧಾ ಕಪೂರ್.ಸಿನಿಮಾಕ್ಕಾಗಿ ಶ್ರದ್ಧಾ ಕಪೂರ್ ಸಾಕಷ್ಟು ಕಸರತ್ತುಗಳನ್ನು ಮಾಡುತ್ತಿದ್ದಾರೆ. ಹೀಗಿರುವಾಗಲೇ 72 ಗಂಟೆಗಳ ಕಾಲ ಶ್ರದ್ಧಾ ಕಪೂರ್ ನಿರಂತರವಾಗಿ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರಂತೆ.

ಸದ್ಯ ಸಿನಿಮಾದ ಶೂಟಿಂಗ್ ಬ್ಯಾಕಾಂಕ್ ನಲ್ಲಿ ನಡೆಯುತ್ತಿದೆ. ಶೂಟಿಂಗ್ ನಡುವೆ ಬಿಡುವು ಕೊಂಚ ಬಿಡುವು ಮಾಡಿಕೊಂಡು ಶ್ರದ್ಧಾ ಕಪೂರ್ ಕಾರ್ಯಕ್ರಮವೊಂದಕ್ಕೆ ಮುಂಬೈಗೆ ಆಗಮಿಸಿದ್ದರಂತೆ. ಕಾರ್ಯಕ್ರಮಕ್ಕೆ ಬರೋದಕ್ಕೆ ಮೊದಲು ಶ್ರದ್ಧಾ ನಿರಂತರವಾಗಿ 72 ಗಂಟೆಗಳ ಕಾಲ ಶೂಟಿಂಗ್ ನಲ್ಲಿ ಭಾಗಿಯಾಗಿದ್ರಂತೆ. ಸಿನಿಮಾದ ಶೂಟಿಂಗ್ ಬ್ಯಾಕಾಂಕ್‌ನಲ್ಲಿ ನಡೆಯುತ್ತಿದೆ.
ಶ್ರದ್ಧಾ ಮುಖ್ಯವಾಗಿ ಕಿಕ್ಕಿಂಗ್, ಪಂಚಿಂಗ್,ಬ್ಲಾಕಿಂಗ್ ಹೀಗೆ ಸಿನಿಮಾಕ್ಕೆ ಬೇಕಾದ ಆದ ಅಗತ್ಯ ಕಲೆಗಳನ್ನು ರೂಢಿಸಿಕೊಳ್ಳುತ್ತಿದ್ದಾರಂತೆ.ಈ ಹಿಂದೆ ಏಕ್ ವಿಲನ್ ಸಿನಿಮಾಗಾಗಿ ಶ್ರದ್ಧಾ ಬೈಕ್ ರೈಡಿಂಗ್ ಕಲಿತ್ತಿದ್ದರು. ಎಬಿಸಿಡಿ-2 ಗಾಗಿ ವಿವಿಧ ರೀತಿಯ ಡ್ಯಾನ್ಸ್ ಗಳನ್ನು ಕಲಿತಿದ್ದರು. ಇನ್ನು ಮುಂದಿನ ಸಿನಿಮಾಗಾಗಿ ಪಿಯಾನೋ ಕಲಿಯಲಿದ್ದಾರೆ ಶ್ರದ್ಧಾ.

Share this post:

Related Posts

To Subscribe to our News Letter.

Translate »