“ಕೊಂಚ ಆತಂಕ ಇದೆ”; ಚಿಕಿತ್ಸೆಗಾಗಿ ಅಮೆರಿಕಾಗೆ ತೆರಳುವ ಮುನ್ನ ಶಿವಣ್ಣ ಎಮೋಷನಲ್
ನಟ ಶಿವರಾಜ್‌ಕುಮಾರ್ ಚಿಕಿತ್ಸೆಗಾಗಿ ಅಮೆರಿಕಾಗೆ ಹೊರಟಿದ್ದಾರೆ. ಡಿಸೆಂಬರ್ 28ರಂದು ಶಸ್ತ್ರಚಿಕಿತ್ಸೆ ನಡೆಯಲಿದೆ. ಜನವರಿ 26ರಂದು ಶಿವಣ್ಣ ಮತ್ತೆ ತಾಯ್ನಾಡಿಗೆ ಮರಳಲಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ತೆರಳುವ ಮುನ್ನ ಮಾಧ್ಯಮಗಳ ಜೊತೆ ಶಿವಣ್ಣ ಮಾತನಾಡಿದ್ದಾರೆ. ಈ ವೇಳೆ ಭಾವುಕರಾಗಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೆ ಶಿವಣ್ಣ ತಮ್ಮ ಆರೋಗ್ಯ ಸಮಸ್ಯೆ ಬಗ್ಗೆ ಮಾತನಾಡಿದ್ದರು. ಆದಷ್ಟು ಬೇಗ ಚೇತರಿಸಿಕೊಳ್ಳುತ್ತೇನೆ ಎನ್ನುವ ಭರವಸೆ ಇದೆ ಎಂದಿದ್ದರು. ಯಾರು ಆತಂಕ ಪಡುವ ಅಗತ್ಯ ಇಲ್ಲ. ಈಗಾಗಲೇ ಚಿಕಿತ್ಸೆ ಆರಂಭವಾಗಿದೆ. 4 ಹಂತಗಳ ಚಿಕಿತ್ಸೆ ಬಳಿಕ ಅಮೆರಿಕಾದಲ್ಲಿ ಶಸ್ತ್ರ ಚಿಕಿತ್ಸೆ ನಡೆಯುತ್ತದೆ ಎಂದಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ `ರಿಷಬ್- ಶಿವಾಜಿ’ ವಿವಾದವನ್ನು ಮೈಮೇಲೆ ಎಳೆದು ಕೊಂಡ್ರಾ ಸುದೀಪ್?!
ವೈದ್ಯರು ಎಲ್ಲಾ ರೀತಿಯ ತಪಾಸಣೆ ನಡೆಸಿದ್ದಾರೆ. ಯಾವುದೇ ಸಮಸ್ಯೆ ಇಲ್ಲ, ಆದರೂ ಕೊಂಚ ಆತಂಕ ಇದೆ, ಮನೆಯವರನ್ನು ಅಭಿಮಾನಿಗಳನ್ನು ಬಿಟ್ಟು ಚಿಕಿತ್ಸೆಗೆ ಹೋಗುತ್ತಿರುವುದು ಕೊಂಚ ಆತಂಕ್ಕೆ ಕಾರಣವಾಗಿದೆ ಎಂದು ಶಿವಣ್ಣ ಹೇಳಿದ್ದಾರೆ.
ಒಂದೆರಡು ದಿನ ಅಮೆರಿಕಾಗೆ ಹೋಗಿದ್ದರೆ ಯಾವುದೇ ಎಮೋಷನಲ್ ಆಗುತ್ತಿರಲಿಲ್ಲ, ಹೆಚ್ಚು ಕಮ್ಮಿ 35 ದಿನ ಮನೆಯಿಂದ ದೇಶದಿಂದ ದೂರ ಉಳಿಯುವುದು ಸ್ವಲ್ಪ ನೋವು ಇರುತ್ತದೆ. ಆದರೆ ಎಲ್ಲಾ ಶುಭ ಹಾರೈಕೆ, ಆಶೀರ್ವಾದ ಇದೆ. ಅಮೆರಿಕಾದ ಮಿಯಾಮಿ ಕ್ಯಾನ್ಸರ್ ಇನ್ಸಿಟ್ಯೂಟ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಶಿವರಾಜ್‌ಕುಮಾರ್ ಮಾಹಿತಿ ನೀಡಿದ್ದಾರೆ.
‘ಯುಐ’ ಹಾಗೂ ‘ಮ್ಯಾಕ್ಸ್’ ಚಿತ್ರಗಳಿಗೆ ಶುಭವಾಗಲಿ ಎಂದು ಶುಭ ಹಾರೈಸಿದ್ದಾರೆ. ನನ್ನ ಜೊತೆ ಪತ್ನಿ ಗೀತಾ ಹಾಗೂ ಮಗಳು ನಿವೇದಿತಾ ಬರ್ತಿದ್ದಾರೆ. 24ಕ್ಕೆ ಮಧು ಬಂಗಾರಪ್ಪ ಅಲ್ಲಿಗೆ ಬರ್ತಾರೆ. ಡಾ. ಮುರುಗೇಶನ್ ಮನೋಹರನ್ ಎಂಬುವವರು ಶಸ್ತ್ರ ಚಿಕಿತ್ಸೆ ನಡೆಸಲಿದ್ದಾರೆ ಎಂದು ಶಿವಣ್ಣ ತಿಳಿಸಿದ್ದಾರೆ.
ಸುದೀಪ್ ಸೇರಿದಂತೆ ಎಲ್ಲರೂ ಧೈರ್ಯ ಹೇಳಿದ್ದಾರೆ. ಆರೋಗ್ಯ ವಿಚಾರ ಅಂದಾಹ ಎಂತಹವರಿಗೂ ಭಯ ಆಗುತ್ತದೆ. ಆದರೆ ನಾನು ಧೈರ್ಯವಾಗಿಯೇ ಇದ್ದೀನಿ. ಈಗಾಗಲೇ ಬಂದಿರುವ ಎಲ್ಲಾ ಮೆಡಿಕಲ್ ರಿಪೋರ್ಟ್ ಚೆನ್ನಾಗಿ ಬಂದಿದೆ. ಹಾಗಾಗಿ ಆತಂಕ ಇಲ್ಲ ಎಂದು ಶಿವರಾಜ್‌ಕುಮಾರ್ ಹೇಳಿದ್ದಾರೆ.