ಸ್ಯಾಂಡಲ್ವುಡ್ ಕಿಂಗ್ ಶಿವಣ್ಣ ಮತ್ತು ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಕಾಂಬೋ ಸಿನಿಮಾ ಸೆಟ್ಟೇರೋದು ಪಕ್ಕಾ
ಸ್ಯಾಂಡಲ್ವುಡ್ ಕಿಂಗ್ ಶಿವಣ್ಣ ಮತ್ತು ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಕಾಂಬೋದಲ್ಲಿ ಸಿನಿಮಾ ಸೆಟ್ಟೇರೋದು ಪಕ್ಕಾ ಆಗಿದೆ. ಈ ಬಗ್ಗೆ ನಿರ್ದೇಶಕ ಯೋಗರಾಜ್ ಭಟ್ ಖಚಿತಪಡಿಸಿದ್ದಾರೆ. ಮೊದಲ ಬಾರಿಗೆ ಒಟ್ಟಾಗಿ ತೆರೆ ಹಂಚಿಕೊಳ್ಳುತ್ತಿರುವ ಈ ಡಾನ್ಸಿಂಗ್ ಸ್ಟಾರ್ಗಳಿಗೆ ಯೋಗರಾಜ್ ಭಟ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರಾಕ್ಲೈನ್ ವೆಂಕಟೇಶ್ ಈ ಚಿತ್ರಕ್ಕೆ ಹಣ ಹೂಡಲಿದ್ದಾರೆ.
ನಿರ್ದೇಶಕ ಯೋಗರಾಜ್ ಭಟ್ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ‘ಅಣ್ಣಾವ್ರ ಆಶೀರ್ವಾದದ ಜತೆಗೆ ದೊಡ್ಡ ಚಿತ್ರದ ತಯಾರಿ ಶುರು, ಅತೀ ಶೀಘ್ರದಲ್ಲೇ ಚಿತ್ರೀಕರಣ’ ಎಂದು ಬರೆದುಕೊಂಡಿದ್ದಾರೆ. ಖ್ಯಾತ ದಿಗ್ಗಜರು ಈ ಚಿತ್ರಕ್ಕಾಗಿ ಒಂದಾಗಿರುವುದು ಚಿತ್ರದ ಕುರಿತು ನಿರೀಕ್ಷೆ ಮೂಡಿಸಿದೆ. ಪ್ರಸ್ತುತ ಯೋಗರಾಜ್ ಭಟ್ ‘ಗಾಳಿಪಟ 2’ ಸಿನಿಮಾ ಮುಗಿಸಿದ್ದು, ಅದು ತೆರೆಕಾಣಬೇಕಿದೆ. ‘ಗರಡಿ’ ಚಿತ್ರದ ಕೆಲಸಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ.
ಶಿವರಾಜ್ಕುಮಾರ್ ಕೂಡ ಹಲವು ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರಗಳ ಕೆಲಸಗಳು ಒಂದು ಹಂತಕ್ಕೆ ಬಂದ ನಂತರ ಹೊಸ ಸಿನಿಮಾ ಆರಂಭವಾಗಲಿದೆ. ನಿರ್ದೇಶಕರು ದೊಡ್ಡ ಚಿತ್ರ ಎಂದಿರುವುದು ಹಾಗೂ ಸ್ಟಾರ್ ಕಲಾವಿದರು ಚಿತ್ರಕ್ಕೆ ಕೈಜೋಡಿಸಿರುವುದು ಚಿತ್ರದ ಕ್ಯಾನ್ವಾಸ್ ಬಗ್ಗೆ ಕುತೂಹಲ ಮೂಡಿಸಿದೆ.
ಯೋಗರಾಜ್ ಭಟ್ ಸೋಶಿಯಲ್ ಮೀಡಿಯಾ ಪೋಸ್ಟ್