ಬೆಂಗಳೂರು: ಯುಐ ಫಸ್ಟ್ ಲುಕ್ ಲಾಂಚ್ ಆಗಿದೆ. ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಂತ ಈ ಒಂದು ಗಳಿಗೆಯನ್ನು ಅದ್ದೂರಿಯಾಗಿ ಲಾಂಚ್ ಮಾಡಲಾಗಿದೆ. ಈ ಲಾಂಚ್ ಕಾರ್ಯಕ್ರಮದಲ್ಲಿ ಶಿವಣ್ಣ, ಉಪೇಂದ್ರ ಬಗ್ಗೆ ಹಾಡಿ ಹೊಗಳಿದ್ದಾರೆ.
ಕಾರ್ಯಕ್ರಮದಲ್ಲಿ ಶಿವಣ್ಣ ಮಾತನಾಡಿ, ನಮ್ಮಲ್ಲೂ ತಾಕತ್ ಇರುವವರು ಇದ್ದಾರೆ. ಚೆನ್ನಾಗಿ ಮಾಡುತ್ತಾರೆ. ಓಂ ಸಿನಿಮಾಗಿಂತ ಮೊದಲು ತರ್ಲೆ ನನ್ಮಗ, ಶ್ ತುಂಬಾ ಚೆನ್ನಾಗಿದೆ. ನಾನೇ ಸಾಕಷ್ಟು ಸಲ ತರ್ಕೆ ನನ್ಮಗ ನೋಡಿದ್ದೀನಿ. ದಿನಕ್ಕೆ ಮೂರು ಸಿನಿಮಾ ಇತ್ತು. ಒಂದು ತಿಂಗಳು ಎಷ್ಟೊತ್ತಿಗೆ ಮಲಗಿದ್ದೆ ಗೊತ್ತಿಲ್ಲ. ಉಪೇಂದ್ರ ಒಂದೊಳ್ಳೆ ಡೈರೆಕ್ಟರ್ ಅಂತ ಈಗ ಅಲ್ಲ, ಆಗಿಂದಾನೇ ಗೊತ್ತು. ಟೈಟಲ್ ಇಟ್ಟಾಗಲೇ ಒಂದು ವಿಭಿನ್ನತೆ ಇರುತ್ತೆ.
ಸಿನಿನಾ ಫಸ್ಟ್ ಲುಕ್ ಬಗ್ಗೆ ಉಪೇಂದ್ರ ಕೇಳಿದ್ರು, ಹೇಗೆ ಅನ್ನಿಸ್ತು ನೋಡಿದಾಗ ಅಂತ. ಉಪೇಂದ್ರ ಯೋಚನೆ ಒಂದೆರಡಲ್ಲ. ಇದರಲ್ಲಿ ಹೊಸ ಪ್ರಪಂಚವನ್ನೇ ತೋರಿಸುತ್ತಾ ಇದ್ದಾರೆ. ಉಪೆಂದ್ರರನ್ನ ಹೊಗಳಬೇಕು ಅಂತ ಹೊಗಳುತ್ತಿಲ್ಲ. ಅವರಿಗೆ ಆ ಟ್ಯಾಲೆಂಟ್ ಇದೆ. ನನ್ನ ಕಣ್ಣನ್ನ ತೋರಿಸಿದ್ದೆ ಉಪೇಂದ್ರ.
ಓಂ2 ಬಗ್ಗೆ ಹೇಳುತ್ತಾ ಇದ್ದರು. ಅದು ಕೂಡ ಆಗಲಿ. ಇನ್ನೆರಡು ತಿಂಗಳು ಬಿಟ್ಟು ಆಗಲಿ, ಇನ್ನು ಹತ್ತು ವರ್ಷ ಬಿಟ್ಟು ಆದರೂ ಶಿವಣ್ಣ ಹಾಗೇ ಇರುತ್ತಾರೆ ಎಂದು ಹೇಳುವ ಮೂಲಕ ಮತ್ತೆ ಒಂದಾಗುವ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ ನಾನು 24 ವರ್ಷದಿಂದ UI ಒಳಗೆ ಇದ್ದೀನಿ : ಪ್ರಿಯಾಂಕ ಉಪೇಂದ್ರ
ಉಪೇಂದ್ರ ಅವರು ಮಾತನಾಡಿ, ಇವತ್ತು ತುಂಬಾ ಜನ ಬಂದಿದ್ದೀರಿ, ಎಲ್ಲರ ಆಶೀರ್ವಾದ ಇರಲಿ. ಸಿನಿಮಾ ಮಾಡಿದ ಮೇಲೆ ನೀವೂ ಮಾತನಾಡಬೇಕು. ಮನುಷ್ಯರಿಗೆ ಮೂರು ಸ್ಟೇಜ್ ಬರುತ್ತೆ. ನಾನು ಸರಿ ಇದ್ದೀನಿ. ಬೇರೆಯವರು ಸರಿಯಿಲ್ಲ. ಆಗ ಒಂದು ಸಿನಿಮಾ ಮಾಡಿದೆ. ನಾನೇ ಸರಿಯಿಲ್ಲ ಪ್ರಪಂಚ ಸರಿ ಇದೆ ಎಂದೆನಿಸಿದಾಗ ಆಗ ಒಂದು ಸಿನಿಮಾ. ಆಮೇಲೆ ಅನ್ನಿಸಿತು ನಾನು ಸರಿ ಇದ್ದೀನಿ, ಪ್ರಪಂಚವೂ ಸರಿ ಇದೆ ಎನಿಸುವುದಕ್ಕೆ ಶುರುವಾಯ್ತು. ನೀವೆಲ್ಲರೂ ನಾನು ಅನ್ನಬೇಕು ಎಂದಿದ್ದಾರೆ. ಇದೇ ವೇಳೆ ಓಂ 2 ಗೂ ಓಂಕಾರ ಹಾಕಿದ್ದಾರೆ.