Sandalwood Leading OnlineMedia

`ಶಿವಾಜಿ’ ಮ್ಯಾಜಿಕ್‌ಗೆ ಪ್ರೇಕ್ಷಕ ಫಿದಾ! ಭರ್ಜರಿ ಎರಡನೇ ವಾರದತ್ತ `ಶಿವಾಜಿ ಸುರತ್ಕಲ್-2′

ರಮೇಶ್ ಅರವಿಂದ್ ಅಭಿನಯದ ಶಿವಾಜಿ ಸುರತ್ಕಲ್ ೨: ಮಾಯಾವಿಯ ನಿಗೂಢ ಪ್ರಕರಣ ಏಪ್ರಿಲ್ ೧೪ ರಂದು ರಾಜ್ಯದಾದ್ಯಂತ ಬಿಡುಗಡೆಯಾಗಿದ್ದು, ಎರಡನೇ ವಾರಕ್ಕೆ ಕಾಲಿಟ್ಟಿದೆ. ಆಕಾಶ್ ಶ್ರೀವತ್ಸ ನಿರ್ದೇಶನದ ಮಿಸ್ಟರಿ ಥ್ರಿಲ್ಲರ್ ೨೦೨೦ರ ಶಿವಾಜಿ ಸುರತ್ಕಲ್ ಚಿತ್ರದ ಮುಂದುವರಿದ ಭಾಗವಾಗಿದೆ. ಪ್ರೇಕ್ಷಕರಿಂದ ವ್ಯಕ್ತವಾಗುತ್ತಿರುವ ಅಗಾಧ ಪ್ರತಿಕ್ರಿಯೆಯ ನಂತರ, ಎರಡನೇ ವಾರದಲ್ಲಿ ಚಿತ್ರವು ಹೆಚ್ಚು ಮಲ್ಟಿಪ್ಲೆಕ್ಸ್ ಶೋಗಳನ್ನು ಪಡೆಯುತ್ತಿದೆ.

 

ನನಸಾಯಿತು ಅಗ್ನಿ ಶ್ರೀಧರ್ ದಶಕಗಳ ಕನಸು ; ಅದ್ಭುತ ಪಾತ್ರದಲ್ಲಿ `ಕಿರಿಕ್’ ಬೆಡಗಿ

ಶಿವಾಜಿ ಸುರತ್ಕಲ್ ೨ ಸಿನಿಮಾವು ಮೊದಲ ಭಾಗದ ಕಲೆಕ್ಷನ್ ಅನ್ನು ಕೂಡ ಹಿಂದಿಕ್ಕಿದ್ದು, ಇದು ಕರ್ನಾಟಕದ ವಿಧಾನಸಭೆ ಚುನಾವಣೆ ಮತ್ತು ಐಪಿಎಲ್ ಸಮಯವಾಗಿದ್ದರೂ, ಕುಟುಂಬಗಳು ಥಿಯೇಟರ್‌ಗಳಿಗೆ ಬರುತ್ತಿರುವುದರಿಂದ ಚಿತ್ರತಂಡ ಖುಷಿಯಾಗಿದೆ. ಚಿತ್ರದ ಕ್ಲೈಮ್ಯಾಕ್ಸ್ನ ಭಾವನಾತ್ಮಕ ದೃಶ್ಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ.ರೇಖಾ ಕೆಎನ್ ಮತ್ತು ಅನುಪ್ ಗೌಡ ನಿರ್ಮಾಣದ ಈ ಚಿತ್ರದಲ್ಲಿ ರಾಧಿಕಾ ನಾರಾಯಣ್, ಮೇಘನಾ ಗಾಂವ್ಕರ್, ರಘು ರಾಮನಕೊಪ್ಪ, ವಿದ್ಯಾ ಮೂರ್ತಿ ಮತ್ತು ಆರಾಧ್ಯ ಕೂಡ ನಟಿಸಿದ್ದಾರೆ. ಈಮಧ್ಯೆ, ರಿಮೇಕ್ ರೈಟ್ಸ್ಗೆ ಬೇಡಿಕೆ ಬಂದಿದ್ದು, ಚಿತ್ರ ತಂಡ ಈಗಾಗಲೇ ಪಾಟ್-೩ರ ತಯಾರಿಯಲ್ಲಿದೆ.

 

Share this post:

Translate »