ರಮೇಶ್ ಅರವಿಂದ್ ನಾಯಕರಾಗಿ ನಟಿಸಿರುವ “ಶಿವಾಜಿ ಸುರತ್ಕಲ್” ಎರಡು ಭಾಗಗಳಲ್ಲಿ ಬಿಡುಗಡೆಯಾಗಿ ಎಲ್ಲರ ಮನ ಗೆದ್ದಿದೆ. ಈ ಚಿತ್ರದ ನಿರ್ದೇಶಕ ಆಕಾಶ್ ಶ್ರೀವತ್ಸ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಜೊತೆಗೆ ಇವರ ಸಿನಿಪಯಣಕ್ಕೆ ಹದಿನಾರರ ಹರೆಯ. 2008 ರಲ್ಲಿ ತೆರೆಕಂಡ ರಮೇಶ್ ಅರವಿಂದ್ ಅಭಿನಯದ “ಆಕ್ಸಿಡೆಂಟ್” ಚಿತ್ರದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ತಮ್ಮ ಸಿನಿ ಜರ್ನಿ ಆರಂಭಿಸಿದ ಆಕಾಶ್ ಶ್ರೀವತ್ಸ, ನಂತರ “ಸುಳ್ಳೇ ಸತ್ಯ”, ” ಬದ್ಮಾಶ್”, “ಶಿವಾಜಿ ಸುರತ್ಕಲ್” (ಎರಡು ಭಾಗ) ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಪ್ರಸ್ತುತ ಇವರ ನಿರ್ದೇಶನದ “ಡೈಜಿ” ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಆಕಾಶ್ ಶ್ರೀವತ್ಸ ಅವರಿಂದ ಮತ್ತಷ್ಟು ಸದಭಿರುಚಿಯ ಚಿತ್ರಗಳು ಬರಲಿ ಎಂದು ಹಾರೈಸಿರುವ ಅವರ ಗೆಳೆಯರು ಪೋಸ್ಟರ್ ಬಿಡುಗಡೆ ಮಾಡಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.