ರಮೇಶ್ ಅರವಿಂದ್ ಅವರ ನಟನೆ ಬಗ್ಗೆ ಅಚ್ಚರಿ ಹುಟ್ಟಿಸಿದ್ದ `ಶಿವಾಜಿ ಸುರತ್ಕಲ್’ ಸಿನಿಮಾವು ೨೦೨೦ರ ಬೆಸ್ಟ್ ಚಿತ್ರಗಳ ಪಟ್ಟಿಗೆ ಸೇರಿತ್ತು. ಪತ್ತೇದಾರಿ ಸಸ್ಪೆನ್ಸ್ ಥ್ರಿಲ್ಲರ್ ಜಾನರ್‌ನ ಚಿತ್ರವನ್ನು ಪ್ರೇಕ್ಷಕರು ಅದ್ಭುತವಾಗಿ ಸ್ವೀಕರಿಸಿದ್ದರು. ಅದರ ಸೀಕ್ವೆಲ್ ಅನೌನ್ಸ್ ಆದಾಗಿನಿಂದ `ಶಿವಾಜಿ ಸುರತ್ಕಲ್ 2′ ಬಗ್ಗೆ ಸಹಜವಾಗಿಯೇ ಸಿನಿಪ್ರಿಯರು ನಿರೀಕ್ಷೆ ಇಟ್ಟುಕೊಂಡಿದ್ದರು. ಇದೀಗ `ಶಿವಾಜಿ ಸುರತ್ಕಲ್ 2′ ತೆರೆಕಂಡು ಪ್ರೇಕ್ಷಕನ ಹುಸಿಮಾಡದೆ, ಒಂದು ವಿಭಿನ್ನ ಅನುಭವವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದೆ. ಚಿತ್ರತಂಡ ಟ್ರೆöÊಲರ್ ಮೂಲಕ ಕೊಟ್ಟ ಪ್ರಾಮಿಸ್ ಅನ್ನು ಅಕ್ಷರಶಹಃ ಈಡೇರಿಸಿದ್ದಾರೆ. ಈ ಹಿಂದಿನ ಪಾರ್ಟ್-1ರಲ್ಲಿ ರಣಗಿರಿ ರಹಸ್ಯವನ್ನು ಭೇದಿಸಿದ್ದ ಶಿವಾಜಿ, ಈ ಬಾರಿ `ಮಾಯಾವಿ’ಯ ಬೆನ್ನು ಹಿಂದೆ ಬಿಂದಿದ್ದಾರೆ. ಒಂದಾದ ಮೇಲೊಂದು ಕೊಲೆಗಳನ್ನು ಮಾಡುವ ಆ ಮಾಯಾವಿಯ ಉದ್ದೇಶವೇನು? ಅವನು ಮಾಡುವ ಸಾಲು ಸಾಲು ಕೊಲೆಗಳ ಹಿಂದಿನ ರಹಸ್ಯವೇನು? ಎಂಬ ಪ್ರಶ್ನೆಗಳನ್ನು ಹುಟ್ಟುಕಾಕುವ ಸಿನಿಮಾ ಅದ್ಭುತವಾಗಿ ನೋಡುಗನನ್ನು ಆವರಿಸಿಕೊಳ್ಳುತ್ತದೆ. `ಮಾಯಾವಿ’ ಮಾಯೆಯನ್ನು ಶಿವಾಜಿ (ರಮೇಶ್ ಅರವಿಂದ್) ಬೇಧಿಸುವ ಸಾಹಸಗಳೇ ರಣರೋಚಕ. `ಶಿವಾಜಿ ಸುರತ್ಕಲ್-2’ನಲ್ಲಿ crime ಮತ್ತು ಸಸ್ಪೆನ್ಸ್ ಜೊತೆಗೆ ಎಮೋಷನಲ್ ಅಂಶಗಳಿಗೂ ಹೆಚ್ಚು ಒತ್ತು ನೀಡಲಾಗಿದೆ. ಡಬಲ್ screenplay ಮಾದರಿಯಲ್ಲಿ, ನಾನ್‌ಲೀಯರ್ ಆಗಿ ಕಥೆ ಹೇಳುವ ನಿರ್ದೇಶಕ ಆಕಾಶ್ ಶ್ರೀವತ್ಸ ಒಂದು ಕಡೆ ಸರಣಿ ಕೊಲೆಗಳನ್ನು ತೋರಿಸುತ್ತಾ ಕೌತುಕ ಹುಟ್ಟಿಸುತ್ತಾ.. ಮತ್ತೊಂದೆಡೆ, ಅಪ್ಪ-ಮಗಳ, ಅಪ್ಪ-ಮಗನ ಭಾವುಕ ದೃಶ್ಯಗಳ ಮೂಲಕ `ಮಾಯಾವಿ’ ಕಥೆಯನ್ನು ಆಪ್ತವಾಗಿಸುತ್ತಾರೆ.
Pentagon’ Kannada Movie Review : ಪಂಚ ಕಥೆಗಳ ಪವರ್‌ಫುಲ್ ಪಂಚ್!`
ಕ್ಲೆವರ್&ಎನೆರ್ಜಿಟಿಕ್ ಆದ ಶಿವಾಜಿ ಸುರತ್ಕಲ್ ಪಾತ್ರದಲ್ಲಿ ನಟ ರಮೇಶ್ ಅರವಿಂದ್ ಮೇಚ್ಯೂರ್ಡ್ ಆದ ಅಭಿನಯದ ಮೂಲಕ `ಶಿವಾಜಿ ಸುರತ್ಕಲ್-3.4,5…’ ಕೂಡ ಬರಲಿ.. ಎಂಬ ಆಶಯ ಹುಟ್ಟಿಸುತ್ತಾರೆ. ಸಂಭಾಷಣೆ ಇಲ್ಲದ ನಟನೆಯ ಭಾಗದಲ್ಲಿ ರಮೇಶ್ ಅವರು ಹೆಚ್ಚು ಕಾಡುತ್ತಾರೆ. ನೆಗೆಟಿವ್ ಶೇಡ್‌ನಲ್ಲಿನ ಅವರ ಅಭಿನಯ ನೋಡಿದರೆ `ಬೆಸ್ಟ್ ವಿಲನ್’ ಅನ್ನಿಸಿಕೊಳ್ಳುತ್ತಾರೆ. ಮೆಂಟಲ್ ಡಿಸಾರ್ಡ್ರ್‌ನಿಂದಾಗಿ ಬಳಲುವ ವ್ಯಕ್ತಿಯಾಗಿ ಅವರ ನಟನೆ ಸೂಪರ್. ಇಂತಹ ದೃಶ್ಯಗಳಲ್ಲಿನ ಎಡಿಟಿಂಗ್ ಪ್ಯಾಟರ್ನ್ ಮತ್ತು ವಿಎಫ್‌ಎಕ್ಸ್ನ ಬಳಕೆ ರಮೇಶ್ ಅವರ ನಟನೆಯನ್ನು ಇನ್ನಷ್ಟು ನೋಡೆಬಲ್ ಆಗಿಸಿದೆ. ಆದರೆ, `ಮೆಂಟಲ್ ಡಿಸಾರ್ಡ್ರ್‌ನಿಂದ ಬಳಲುವ ವ್ಯಕ್ತಿ ಇನ್ವೆಸ್ಟೀಗೇಶನ್‌ಗೆ ಆಯ್ಕೆ ಆಗಿದ್ದಾದರೂ ಹೇಗೆ?’ ಎಂಬ ಪ್ರಶ್ನೆ ಪ್ರೇಕ್ಷಕನಲ್ಲಿ ಮೂಡದಂತೆ ಆಕಾಶ್ ಸಾಕಷ್ಟು ಎಚ್ಚರ ವಹಿಸಿದ್ದಾರೆ. ಈ ಬಾರಿ `ಶಿವಾಜಿ’ ಪಾತ್ರದ ಒಂದಷ್ಟು ಹಿನ್ನೆಲೆ ಹೇಳಲಾಗಿದ್ದು, ಶಿವಾಜಿ ತಂದೆ ವಿಜೇಂದ್ರ ಸುರತ್ಕಲ್ ಪಾತ್ರದಲ್ಲಿ ನಾಜರ್ ಅವರ ಸೆಟಲ್‌ಡ್ ಆದ ನಟನೆಯನ್ನು ನೋಡುವುದೇ ಹಬ್ಬ. ಇನ್ನು, ಶಿವಾಜಿ ಪತ್ನಿಯಾಗಿ ರಾಧಿಕಾ ನಾರಾಯಣ್ ಪಾರ್ಟ್-1ಗಿಂತ ಇಲ್ಲಿ ಹೆಚ್ಚು ಕಾಡುತ್ತಾರೆ. ಅವರ ಪಾತ್ರಕ್ಕೆ ಪಾರ್ಟ್-1ರಲ್ಲೇ ನಿರ್ದೇಶಕರು ಇತಿಶ್ರೀ ಹಾಡಿದ್ದರು, ಅದೇ ಪಾತ್ರವನ್ನು ನಿರೀಕ್ಷಿಸದ ರೀತಿಯಲ್ಲಿ, ಲಾಜಿಕ್ ಬಿಡದೆ ಪಾರ್ಟ್ 2ರಲ್ಲಿ ಎಂಟ್ರಿ ಕೊಡಿಸಿ ಮ್ಯಾಜಿಕ್ ಮಾಡಿದ್ದಾರೆ. ರಾಧಿಕಾ ಮತ್ತು ಮೇಘನಾ ಗಾಂವ್ಕರ್ ಅವರಿಗೆ ಹೆಚ್ಚಿನ ಸ್ಕ್ರೀನ್‌ಸ್ಪೇಸ್ ಸಿಕ್ಕದೇ ಹೋದರು, ಸಿಕ್ಕ ಅವಕಾಶಕ್ಕೆ ನ್ಯಾಯ ಒದಗಿಸಿದ್ದಾರೆ. ವಿದ್ಯಾಮೂರ್ತಿ, ನಿಧಿ ಹೆಗ್ಡೆ, ವೀಣಾ ಸುಂದರ್, ಶ್ರೀನಿವಾಸ ಪ್ರಭು, ಶ್ರೀಧರ್, ವಿನಾಯಕ ಜೋಷಿ, ರಮೇಶ್ ಭಟ್, ಪೂರ್ಣಚಂದ್ರ ಮೈಸೂರು.. ಎಲ್ಲರೂ ಅವಕಾಶ ಕೊಟ್ಟ ಆಕಾಶ್ ಕಥೆಗೆ ನ್ಯಾಯ ಒದಗಿಸಿದ್ದಾರೆ. ಪೊಲೀಸ್ ಕಾನ್‌ಸ್ಟೇಬಲ್ ಆಗಿ ರಘು ರಾಮನಕೊಪ್ಪ, ಹ್ಯಾಕರ್ ಆಗಿ ಪುನೀತ್.ಬಿ.ಎ ಅವರು ಸೀರಿಯಸ್ ಆದ ಪ್ರೇಕ್ಷಕನನ್ನು ಅಲ್ಲಲ್ಲಿ ರಿಲಾಕ್ಸ್ ಮಾಡುವ ಕೆಲಸದಲ್ಲಿ ಗೆದ್ದಿದ್ದಾರೆ. ಸಿರಿ ಸುರತ್ಕಲ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಾಲ ನಟಿ ಆರಾಧ್ಯಾಳ ಲೀಲಾಜಾಲ ನಟನೆ ಅಚ್ಚರಿ ಮೂಡಿಸುತ್ತದೆ.
ಈ ವಾರ ರಾಜ್ಯಾದ್ಯಂತ `ಚಾಂದಿನಿ ಬಾರ್’ ಓಪನ್!; ಟ್ರೈಲರ್ ನಲ್ಲಿ ಬಾರ್ ಹುಡುಗನ ಪ್ರೇಮಕಥೆ
3 ದೇವಿ; ದಟ್ಟ ಅರಣ್ಯದಲ್ಲೊಂದು ದಿಟ್ಟ ಹೆಜ್ಜೆ!
ನಿರ್ದೇಶಕ ಆಕಾಶ್ ಶ್ರೀವತ್ಸ ಒಂದು ಗಟ್ಟಿ ಕಥೆಯನ್ನು ಕಟ್ಟಿ, ಸಿನಿಮಾದ ಕೊನೆವರೆಗೂ ಕೊಲೆಗಾರ ಯಾರು ಅನ್ನೋ ಕುತೂಹಲವನ್ನು ಕಾಪಾಡಿಕೊಳ್ಳುವಲ್ಲಿ ಗೆದ್ದಿದ್ದಾರೆ. ಕೊಲೆಗಾರ ಯಾರಿರಬಹುದು ಎಂದು ಯೋಚಿಸುವ ಪ್ರೇಕ್ಷಕನ ತಲೆಯಲ್ಲಿ `ಅನುಮಾನದ ಭೂತ’ವನ್ನು ಹೊಕ್ಕಿಸಿ ಎಲ್ಲ ಪಾತ್ರಗಳ ಮೇಲೂ ಅನುಮಾನ ಮೂಡುವಂತೆ ಮಾಡಿ ಕೊನೆಗೆ ಕೊಲೆಗಾರ ಯಾರು ಅನ್ನೋದು ಗೊತ್ತಾದಾಗ, ಒಂದು ಕ್ಷಣ ಪ್ರೇಕ್ಷಕ ದಂಗುಬಡಿಯುವAತೆ ಮಾಡಿದ್ದಾರೆ. ಸಿನಿಮಾದ ಅವಧಿ ೧೨೨ ನಿಮಿಷಗಳು ಮಾತ್ರ ಇರುವುದು ಚಿತ್ರದ ದೊಡ್ಡ ಪ್ಲಸ್ ಪಾಯಿಂಟ್. ಇಂತಹ ಕಥೆಗೆ ಅದು ಪರ್‌ಫೆಕ್ಟ್ ಡ್ಯೂರೇಶನ್. ನಿರೂಪಣೆಯ ಮೂಲಕ ಕಥೆ ಹೇಳದೆ, ಅವಾಗವಾಗ ಫ್ಲಾಶ್‌ಬ್ಯಾಕ್ ಸೀನ್‌ಗಳ ಮೂಲಕ ನಿರೂಪಣೆ ಮಾಡಿರೋದು ಕಥೆಯ ಓಘವನ್ನು ಹೆಚ್ಚಿಸಿದೆ. ಜೂಡಾ ಸ್ಯಾಂಡಿ ಹಿನ್ನೆಲೆ ಸಂಗೀತದಲ್ಲಿ ಹೊಸತನ ಕೊಟ್ಟಿದ್ದಾರೆ. ಸಿನಿಮಾದ ಕೌತುಕವನ್ನು ಹೆಚ್ಚಿಸುವಲ್ಲಿ, ನಟ/ನಟಿಯರ ನಟನೆಯನ್ನು ಎತ್ತರಕ್ಕೇರಿಸುವಲ್ಲಿ ಜೂಡಾ ಅವರ ಹಿನ್ನೆಲೆ ಸಂಗೀತ ಹೆಚ್ಚು ಕೆಲಸ ಮಾಡಿದೆ. ಚಿತ್ರದ ಹಾಡುಗಳು ಸಿನಿಮಾ ನೋಡಿದ ಮೇಲೆ ನೆನಪಿನಲ್ಲಿ ಉಳಿಯುವುದಿಲ್ಲವಾದರೂ, ಸಿನಿಮಾ ನೋಡುವಾಗ ಕಥೆಯನ್ನು ಹೆಚ್ಚು ಸಹ್ಯವಾಗಿಸುತ್ತದೆ. ನಿರ್ದೇಶಕರೇ `ಕತ್ತರಿ ಪ್ರಯೋಗ’ ಮಾಡಿದ್ದರಿಂದ ಮುಲಾಜಿಲ್ಲದೆ ಅನಗತ್ಯವಾದ ಎಲ್ಲವನ್ನೂ ಕತ್ತರಿ ಬಿಸಾಕಿ, ಇಡೀ ಚಿತ್ರವನ್ನು ಶಾರ್ಪ್&ಕ್ರಿಸ್ಪ್ ಮಾಡಿದ್ದಾರೆ.
ಡಬ್ಬಿಂಗ್ ಆರಂಭಿಸಿದ ‘ಅನ್ ಲಾಕ್ ರಾಘವ’
`ಶಿವಾಜಿ ಸುರತ್ಕಲ್’ನಂತಹ ಚಿತ್ರದಲ್ಲಿ ಸೌಂಡ್ ಡಿಸೈನರ್ ಕೆಲಸಕ್ಕೆ ಹೆಚ್ಚಿನ ಮಹತ್ವ ಇರುತ್ತದೆ, ಆ ಕೆಲಸವನ್ನು ವಿ.ಜೆ.ರಾಜನ್ ಅದ್ಭುತವಾಗಿ ಮಾಡಿದ್ದಾರೆ. ಇನ್ನು, ಗುರುಪ್ರಸಾದ್&ದರ್ಶನ್ ಅವರ ಛಾಯಾಗ್ರಹಣ, ಉದಯರವಿ ಹೆಗಡೆಯವರ ಡಿ.ಐ&ವಿ.ಎಫ್.ಎಕ್ಸ್.. ಎಲ್ಲವೂ ಸೇರಿ ಸಿನಿಮಾ ತಾಂತ್ರಿಕವಾಗಿ ಈಗಿನ ಬುದ್ಧಿವಂತ ಪ್ರೇಕ್ಷಕನಿಗೆ ಇಷ್ಟವಾಗುವಂತೆ ಮೂಡಿಬಂದು, ತಾಂತ್ರಿಕ ಶ್ರೀಮಂತಿಕೆಯನ್ನು ಮೆರೆದಿದೆ. ಕೊನೆಯದಾಗಿ, `ಶಿವಾಜಿ ಸುರತ್ಕಲ್ 2′ ಚಿತ್ರಕ್ಕೆ ಎಲ್ಲಿಯೂ ಕಾಂಪ್ರಮೈಸ್ ಆಗದೆ, ಚಿತ್ರತಂಡವನ್ನು ನಂಬಿ ಬಂಡವಾಳ ಹೂಡಿದ ರೇಖಾ.ಕೆ.ಎನ್ ಮತ್ತು ಅನೂಪ್ ಗೌಡ ಅವರ ಸಿನಿಮಾ ಪ್ರೇಮಕ್ಕೊಂದು ಹ್ಯಾಟ್ಸ್ಅಪ್.
by NAVEENKRISHNA.B.PUTTUR