ಈ ಹಿಂದೆ ಯೋಗಾವನ್ನು ಜನಪ್ರಿಯಗೊಳಿಸಲು ಒಂದು ವಿಡಿಯೋ ರಿಲೀಸ್ ಮಾಡಿದ್ದರು. ಆಗ ಅದು ದೊಡ್ಡ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಚಿತ್ರರಂಗಕ್ಕೆ ಅಡಿಯಿಟ್ಟಾಗ ಹೇಗಿದ್ದರೋ ಈಗಲೂ ಅವರ ದೇಹ ಸಪೂರವಾಗಿಯೇ ಇದೆ. ಮದುವೆಯಾಗಿ ಮಗುವಾದರೂ ಅವರ ಫಿಟ್‌ನೆಸ್ ಮಾತ್ರ ಹಾಗೆ ಇದೆ. ಇದಕ್ಕೆಲ್ಲಾ ಯೋಗಾನೇ ಕಾರಣ ಅಂತಾರೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ.
ಯುವ ಜನತೆಯಲ್ಲಿ ಯೋಗಾಸದ ಬಗ್ಗೆ ಆಸಕ್ತಿ ಬೆಳೆಸಲು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಯೋಗಾ ತರಗತಿಗಳನ್ನು ನಡೆಸುತ್ತಿದ್ದಾರೆ. ಆಗಾಗ ಯೋಗಾ ವಿಡಿಯೋಗಳನ್ನೂ ಬಿಡುಗಡೆ ಮಾಡುತ್ತಿರುವುದು ಗೊತ್ತೇ ಇದೆ.
ಇತ್ತೀಚೆಗೆ ಸಂಸ್ಥೆಯೊಂದು ಶಿಲ್ಪಾ ಶೆಟ್ಟಿಗೆ ಭಾರಿ ಆಫರ್ ಕೊಟ್ಟಿದೆ. ಹೊಸ ಯೋಗಾಸನಗಳ ವಿಡಿಯೋ ಮಾಡುತ್ತಿದ್ದೇವೆಂದೂ, ಮಾರ್ಕೆಟ್‌ಗೆ ಆ ವಿಡಿಯೋ ಡಿವಿಡಿ ಬಿಡುಗಡೆ ಮಾಡುತ್ತಿದ್ದೇವೆ. ಅದಕ್ಕಾಗಿ ಕೆಲಸ ಮಾಡಬೇಕೆಂದು ಕೋರಿದ್ದರು. ಶಿಲ್ಪಾ ಶೆಟ್ಟಿಗೆ ಇದೇನು ಹೊಸದಲ್ಲ. ಎಸ್ ಎಂದರು. ತನ್ನ ಜೊತೆಗೆ ತಂಗಿ ಶಮಿತಾ ಶೆಟ್ಟಿ ಕೈಲೂ ಯೋಗಾಸನ ಮಾಡಿಸಿದ್ದಾರೆ.
ಈ ಬಾರಿಯ ಯೋಗಾ ವಿಡಿಯೋ ವಿಶೇಷ ಎಂದರೆ ಮಾಡರ್ನ್ ಯೋಗಾ ಆಸನಗಳು. ಬರುವ ವರ್ಷದ ಮೊದಲರ್ಧದಲ್ಲಿ ಈ ವಿಡಿಯೋ ಡಿವಿಡಿ ಲಭ್ಯವಾಗಲಿದೆಯಂತೆ