Sandalwood Leading OnlineMedia

ʼಸಿಲ ನೋಡಿಗಳಿಲ್ʼ ತಮಿಳು ಚಿತ್ರಕ್ಕೆ ನಟಿ ಶರ್ಮಿಳಾ ಮಾಂಡ್ರೆ ಸಾರಥ್ಯ..!

ಸಜಿನಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಟಿ ಶರ್ಮಿಳಾ ಮಾಂಡ್ರೆ ಅವರು ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇತ್ತೀಚೆಗಷ್ಟೇ ಗಾಳಿಪಟ 2 ಚಿತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಇದೀಗ ತಮಿಳಿನ ‘ಸಿಲ ನೋಡಿಗಳಿಲ್’ ಸಿನಿಮಾ ಮೂಲಕ ಕ್ರಿಯೇಟಿವ್ ನಿರ್ಮಾಪಕರಾಗಿ ಹೊಸ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.

ಇದನ್ನೂ ಓದಿ ಬಹುಕಾಲದ ಗೆಳತಿ ಜೊತೆ ವಾಸುಕಿ ವೈಭವ್ ಮದುವೆ..

ಸಜಿನಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಟಿ ಶರ್ಮಿಳಾ ಮಾಂಡ್ರೆ ಅವರು ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿ ಕನ್ನಡ ಚಿತ್ರರಂಗದಲ್ಲಿ ಶಾಶ್ವತವಾದ ಪ್ರಭಾವ ಬೀರಿದ್ದಾರೆ. ಇತ್ತೀಚೆಗಷ್ಟೇ ಗಾಳಿಪಟ 2 ಚಿತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಇದೀಗ ತಮಿಳಿನ ‘ಸಿಲ ನೋಡಿಗಳಿಲ್’ ಸಿನಿಮಾ ಮೂಲಕ ಕ್ರಿಯೇಟಿವ್ ನಿರ್ಮಾಪಕರಾಗಿ ಹೊಸ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಪುನ್ನಗೈ ಪೂ ಗೀತಾ ಈ ಚಿತ್ರವನ್ನು ನಿರ್ಮಿಸಿದ್ದಾರೆ. ವಿನಯ್ ಭಾರದ್ವಾಜ್ ನಿರ್ದೇಶನದ ಈ ಚಿತ್ರವು ನವೆಂಬರ್ 24 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ  ಬೆಂಗಳೂರಿನಲ್ಲಿ ನಟ ಲೂಸ್ ಮಾದ ಯೋಗಿ ತಮಿಳು ಭಾಷಣ: ಕ್ಷಮೆ ಕೇಳುವಂತೆ ಕನ್ನಡಿಗರ ಪಟ್ಟು

‘ಮುಂದಿನ ನಿಲ್ದಾಣ’ ಚಿತ್ರದ ನಿರ್ದೇಶಕ ವಿನಯ್ ಭಾರದ್ವಾಜ್ ಅವರು ಇದೇ ಮೊದಲ ಬಾರಿಗೆ ತಮಿಳು ಸಿನಿಮಾದ ನಿರ್ದೇಶನ ಮಾಡುತ್ತಿದ್ದು, ನಟಿ ಶರ್ಮಿಳಾ ಮಾಂಡ್ರೆ ಅವರನ್ನು ತಮಗೆ ಪರಿಚಯಿಸಿದ ನಿರ್ದೇಶಕ ಮತ್ತು ನಟ ಪವನ್ ಕುಮಾರ್ ಅವರಿಗೆ ಸಲ್ಲುತ್ತದೆ ಎನ್ನುತ್ತಾರೆ. ನಟಿ ಈ ಚಿತ್ರದ ಸೃಜನಶೀಲ ನಿರ್ಮಾಪಕಿಯಾಗಿದ್ದಾರೆ.

ಇದನ್ನೂ ಓದಿ  ಬೆಂಗಳೂರಿನಲ್ಲಿ ನಟ ಲೂಸ್ ಮಾದ ಯೋಗಿ ತಮಿಳು ಭಾಷಣ: ಕ್ಷಮೆ ಕೇಳುವಂತೆ ಕನ್ನಡಿಗರ ಪಟ್ಟು

ಚಿತ್ರದ ಕಥಾವಸ್ತುವು ಲಂಡನ್‌ನಲ್ಲಿ ವಾಸವಿರುವ ಗಂಡ-ಹೆಂಡತಿ ನಡುವೆ ಮತ್ತೊಬ್ಬ ಯುವತಿಯ ಆಗಮನವಾಗುತ್ತದೆ. ಅಲ್ಲೊಂದು ಕೊಲೆ ಕೂಡ ಆಗುತ್ತದೆ. ಈ ಕೊಲೆ ಮಾಡಿದ್ದು ಯಾರು? ಎಂಬ ಕುತೂಹಲಕಾರಿ ಅಂಶಗಳನ್ನು ಒಳಗೊಂಡಿದೆ. ‘ಸಿಲ್ ನೋಡಿಗಳಿಲ್’ ಎಂದರೆ ಕೆಲವೇ ಕ್ಷಣಗಳಲ್ಲಿ ಎಂದು ಅರ್ಥ.
ಮೀಡಿಯಾ ಒನ್ ಗ್ಲೋಬಲ್ ಎಂಟರ್‌ಟೈನ್‌ಮೆಂಟ್ ಮತ್ತು ಎಸ್ಕ್ವೈರ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ನಟರಾದ ರಿಚರ್ಡ್ ರಿಷಿ, ಪುನ್ನಗೈ ಪೂ ಗೀತಾ ಮತ್ತು ಯಶಿಕಾ ಆನಂದ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋ ಬಗ್ಗೆ  ಪ್ರತಿಕ್ರಿಯಿಸಿದ ರಕ್ಷಿತ್ ಶೆಟ್ಟಿ 

ಸಿಲ ನೋಡಿಗಳಿಲ್ ಚಿತ್ರಕ್ಕೆ ಅಭಿಮನ್ಯು ಸದಾನಂದನ್ ಅವರ ಛಾಯಾಗ್ರಹಣ, ರೋಹಿತ್ ಕುಲಕರ್ಣಿ ಅವರ ಹಿನ್ನೆಲೆ ಸಂಗೀತವಿದೆ. ಮಸಾಲ ಕಾಫಿ, ಜೋರ್ನ್ ಸುರ್ರಾವ್, ದರ್ಶನ ಕೆಟಿ, ಸ್ಟಾಕಾಟೊ ಮತ್ತು ರೋಹಿತ್ ಮಟ್ಟ್ ಅವರ ಐದು ಹಾಡುಗಳಿವೆ. ಚಿತ್ರವು ಆರಂಭದಲ್ಲಿ ತಮಿಳಿನಲ್ಲಿ ಬಿಡುಗಡೆಯಾಗಲಿದ್ದು, ನಂತರ ಕನ್ನಡದಲ್ಲಿ ತೆರೆಕಾಣಲಿದೆ.

 

Share this post:

Related Posts

To Subscribe to our News Letter.

Translate »