ತರುಣ್ ಸ್ಟುಡಿಯೋಸ್ ಲಾಂಛನದಲ್ಲಿ ಮಾನಸ ತರುಣ್ ಹಾಗೂ ತರುಣ್ ಶಿವಪ್ಪ ನಿರ್ಮಿಸಿರುವ, “ಕರ್ವ” ಖ್ಯಾತಿಯ ನವನೀತ್ ನಿರ್ದೇಶಿಸಿರುವ ಹಾಗೂ ತಮ್ಮ ಅಮೋಘ ಅಭಿನಯದ ಮೂಲಕ ಜನಮನ ಗೆದ್ದಿರುವ ನಟ ಶರಣ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ “ಛೂ ಮಂತರ್” ಚಿತ್ರ ಇದೇ ಏಪ್ರಿಲ್ 5 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಇದನ್ನೂ ಓದಿ Kreem Movie Review: ಜನ ಸಾಮಾನ್ಯನಿಗೆ ನಿಲುಕದ ಅಸಮಾನ್ಯ ಚಿತ್ರ!
ಈಗಾಗಲೇ ಟೀಸರ್ ಮೂಲಕ ಮನೆಮಾತಾಗಿರುವ “ಛೂ ಮಂತರ್” ಚಿತ್ರದ ಟ್ರೇಲರ್ ಸಹ ಸದ್ಯದಲ್ಲೇ ಬಿಡುಗಡೆಯಾಗಲಿದೆ.ಇದೊಂದು ಹಾರಾರ್ ಚಿತ್ರವಾಗಿದ್ದು, ಈ ಹಿಂದೆ ಬಂದಿರುವ ಹಾರಾರ್ ಚಿತ್ರಗಳಿಗಿಂತ ಸ್ವಲ್ಪ ವಿಭಿನ್ನವಾಗಿದೆ. ಮೇಕಿಂಗ್ ನೋಡಿದಾಗ ಹಾಲಿವುಡ್ ಚಿತ್ರಗಳನ್ನು ನೋಡಿದ ಹಾಗೆ ಭಾಸವಾಗುತ್ತದೆ. ಶರಣ್ ಅವರ ಪಾತ್ರ ಕೂಡ ಈ ಹಿಂದಿನ ಚಿತ್ರಗಳಿಗಿಂತ ಬೇರೆ ರೀತಿಯಲ್ಲಿಯೇ ಇದೆ.
ಇದನ್ನೂ ಓದಿ ಲೈನ್ ಮ್ಯಾನ್ ಅಂಗಳದಿಂದ ಬಂತು ಮೊದಲ ಹಾಡು… ಮಾ.15ಕ್ಕೆ ಸಿನಿಮಾ ರಿಲೀಸ್
“ಉಪಾಧ್ಯಕ್ಷ”ನಾಗಿ ಯಶಸ್ಸು ಕಂಡಿರುವ ಚಿಕ್ಕಣ್ಣ ಕೂಡ ಈ ಚಿತ್ರದ ಪ್ರಮುಖಪಾತ್ರದಲ್ಲಿದ್ದಾರೆ. ಮತ್ತೊಮ್ಮೆ ” ಅಧ್ಯಕ್ಷ” ಹಾಗೂ “ಉಪಾಧ್ಯಕ್ಷ”ರ ಸಮ್ಮಿಲನ ಈ ಚಿತ್ರದಲ್ಲಾಗಿದೆ. ಮೇಘನಾ ಗಾಂವ್ಕರ್, ಅದಿತಿ ಪ್ರಭುದೇವ, ಪ್ರಭು ಮುಂಡ್ಕರ್ ಮುಖ್ಯಭೂಮಿಕೆಯಲ್ಲಿದ್ದಾರೆ.